ಟ್ರೆಂಡಿಂಗ್ ನಲ್ಲಿ ಸಲ್ಮಾನ್ ಖಾನ್ 'ಭಾರತ್' ಸಿನಿಮಾ

ಬಾಲಿವುಡ್ ಬ್ಯಾಡ್ ಬಾಯ್ ಅಂತಾನೆ ಖ್ಯಾತಿಗಳಿಸಿರುವ ನಟ ಸಲ್ಮಾನ್ ಖಾನ್ ಅಭಿನಯದ ಭಾರತ್ ಸಿನಿಮಾದ ಹವಾ ಜೋರಾಗಿದೆ. ರಿಲೀಸ್ ಗೂ ಮೊದಲೆ ಭಾರಿ ನಿರೀಕ್ಷೆ ಮೂಡಿಸಿರುವ 'ಭಾರತ್' ಇದೆ ತಿಂಗಳು ಈದ್ ಗೆ ದೇಶ ವಿದೇಶದಲ್ಲಿ ತೆರೆಗೆ ಬರುತ್ತಿದೆ.

ವಿಶೇಷ ಅಂದ್ರೆ 'ಭಾರತ್' ಸಿನಿಮಾ ಟ್ವಿಟರ್ ನಲ್ಲಿ ಭಾರಿ ಟ್ರೆಂಡಿಂಗ್ ನಲ್ಲಿದೆ. 'ಭಾರತ್' ಸಿನಿಮಾ ನಾಳೆ ರಿಲೀಸ್ ಆಗುತ್ತಿದೆ. ಈ ಪ್ರಯುಕ್ತ ಭಾರತ್ ರಿಲೀಸ್ ಟುಮಾರೋ ಎಂದು ಹ್ಯಾಶ್ ಟ್ಯಾಗ್ ಹಾಕಿ ಟ್ರೆಂಡ್ ಮಾಡುತ್ತಿದ್ದಾರೆ ಸಲ್ಲುಮೀಯಾ ಅಭಿಮಾನಿಗಳು.

ಸಲ್ಮಾನ್ ಖಾನ್ ಸಿನಿಮಾ ಈ ಪರಿ ಟ್ರೆಂಡ್ ಕ್ರಿಯೇಟ್ ಮಾಡುತ್ತಿರುವುದು ಇದೇ ಮೊದಲೇನಲ್ಲ. ಬಾಕ್ಸ್ ಆಫೀಸ್ ಸುಲ್ತಾನ್ ನ ಸಿನಿಮಾ ರಿಲೀಸ್ ಆಗುತ್ತೆ ಅಂದ್ರೆ ಸಾಕು ಬಾಕ್ಸ್ ಆಫೀಸ್ ಧೂಳ್ ಎಬ್ಬಿಸೋದು ಪಕ್ಕಾ ಎನ್ನುವುದು ಬಾಲಿವುಡ್ ನಿರ್ಮಾಪಕರಿಗೂ ಗೊತ್ತಿರುವ ಸತ್ಯ.

 Salman Khan starrer Bharath film trending in twitter

'ಭಾರತ್' ಸಿನಿಮಾ ಕೂಡ ಸಖತ್ ಸದ್ದು ಮಾಡುತ್ತಿದೆ. ಚಿತ್ರದಲ್ಲಿ ಸಲ್ಮಾನ್ ಗೆ ನಾಯಕಿಯಾಗಿ ಕತ್ರೀನಾ ಕೈಫ್ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಅಲಿ ಅಬ್ಬಾಸ್ ಝಫರ್ ಆಕ್ಷನ್ ಕಟ್ ಹೇಳಿದ್ದಾರೆ. ಚಿತ್ರದಲ್ಲಿ ಸಲ್ಮಾನ್ ತರಹೇವಾರಿ ಗೆಟಪ್ ನಲ್ಲಿ ಕಾಣಿಸಿಕೊಳ್ಳುವ ಮೂಲಕ ಅಭಿಮಾನಿಗಳ ಹಾರ್ಟ್ ಬೀಟ್ ಅನ್ನು ಹೆಚ್ಚಿಸಿದ್ದಾರೆ.

ವಿಶೇಷ ಅಂದ್ರೆ ಚಿತ್ರದಲ್ಲಿ ಸಾಕಷ್ಟು ಕಲಾವಿದರದಂಡೆ ಇದೆ. ನಟಿ ತಬು, ದಿಶಾ ಪಟಾನಿ, ಜಾಕಿ ಶ್ರಾಫ್ ಸೇರಿದಂತೆ ಅನೇಕರು ಅಭಿನಯಿಸಿದ್ದಾರೆ. ಈಗಾಗಲೆ ಟ್ರೈಲರ್ ಮತ್ತು ಹಾಡುಗಳ ಮೂಲಕ ಸದ್ದು ಮಾಡುತ್ತಿರುವ 'ಭಾರತ್' ಸಿನಿಮಾ ಹೇಗಿರಲಿದೆ ಎನ್ನುವ ಕುತೂಹಲಕ್ಕೆ ನಾಳೆ ತೆರೆಬೀಳಲಿದೆ.

More from Filmibeat

English summary
Bollywood actor Salman Khan starrer Bharath film trending in twitter. Bharath set be release in June 5th.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X