ಸಲ್ಮಾನ್ ಖಾನ್ ಹಿಂದಿನ ಸಿನಿಮಾಗಳ ದಾಖಲೆ ಮುರಿದ 'ಭಾರತ್'
ಸಲ್ಮಾನ್ ಖಾನ್ ಅಭಿನಯದ 'ಭಾರತ್' ಭಾರಿ ನಿರೀಕ್ಷೆ ಮೂಡಿಸಿದ್ದ ಸಿನಿಮಾವಾಗಿತ್ತು. ರಿಲೀಸ್ ಗೂ ಮೊದಲೆ ಭಾರಿ ಹೈಪ್ ಕ್ರಿಯೇಟ್ ಮಾಡಿದ್ದ 'ಭಾರತ್', ಈಗ ರಿಲೀಸ್ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಈದ್ ಸಲ್ಮಾನ್ ಖಾನ್ ಗೆ ಪಾಲಿಗೆ ತುಂಬಾನೆ ಲಕ್ಕಿ ಎನ್ನುವುದು ಮತ್ತೆ ಸಾಬೀತು ಮಾಡಿದೆ 'ಭಾರತ್' ಸಿನಿಮಾ.
ಹೌದು, ಯಾಕಂದ್ರೆ ಸಲ್ಮಾನ್ ಖಾನ್ ಬಹುತೇಕ ಸಿನಿಮಾಗಳು ರಂಜಾನ್ ಗೆ ತೆರೆಗೆ ಬರುತ್ತೆ. ಈದ್ ಗೆ ರಿಲೀಸ್ ಆದ ಸಲ್ಮಾನ್ ಚಿತ್ರಗಳು ಸೂಪರ್ ಹಿಟ್ ಆಗಿವೆ. ಈ ಬಾರಿ ಕೂಡ ರಿಲೀಸ್ ಆದ 'ಭಾರತ್' ಸಿನಿಮಾ ಉತ್ತಮ ಪ್ರದರ್ಶನ ಕಾಣುತ್ತಿದೆ.
ವಿಶೇಷ ಅಂದ್ರೆ ಮೊದಲ ದಿನದ 'ಭಾರತ್' ಕಲೆಕ್ಷನ್ ಗೆ ಇಡೀ ಬಾಲಿವುಡ್ ದಂಗ್ ಆಗಿದೆ. 'ಭಾರತ್' ಬರೋಬ್ಬರಿ 42 ಕೋಟಿ ಬಾಚಿಕೊಳ್ಳುವ ಮೂಲಕ ಸಲ್ಮಾನ್ ಖಾನ್ ಹಳೆಯ ಚಿತ್ರಗಳ ದಾಖಲೆಯನ್ನು ಮುರಿದು ಮುನ್ನುಗ್ಗುತ್ತಿದೆ. ಸಲ್ಲುಮೀಯ ಚಿತ್ರಗಳ ದಾಖಲೆ ಮಾತ್ರವಲ್ಲದೆ 'ಕಳಂಕ್', 'ಕೇಸರಿ' ಮತ್ತು 'ಗಲ್ಲಿ ಬಾಯ್' ಸಿನಿಮಾಗಳ ಗಳಿಕೆಯನ್ನು ಹಿಂದಿಕ್ಕಿದೆ.

2016ರಲ್ಲಿ ತೆರೆಗೆ ಬಂದ ಸಲ್ಮಾನ್ ಖಾನ್ ಅಭಿನಯದ 'ಸುಲ್ತಾನ್' ಸಿನಿಮಾ ಮೊದಲ ದಿನ 36 ಕೋಟಿ ಕಲೆಕ್ಷನ್ ಮಾಡಿತ್ತು. 2017ರಲ್ಲಿ ರಿಲೀಸ್ ಆದ 'ಟ್ಯೂಬ್ ಲೈಟ್' 21 ಕೋಟಿ ಬಾಚಿಕೊಂಡಿತ್ತು. 2018ರಲ್ಲಿ ತೆರೆಗೆ ಬಂದ 'ರೇಸ್-3' 29 ಕೋಟಿ ಕಲೆಕ್ಷನ್ ಮಾಡಿತ್ತು. ಆದ್ರೀಗ 'ಭಾರತ್' ಈ ಎಲ್ಲಾ ಹಳೆಯ ಸಿನಿಮಾಗಳ ಕಲೆಕ್ಷನ್ ಅನ್ನು ಸರಿಗಟ್ಟಿ 42 ಕೋಟಿ ಗಳಿಸುವ ಮೂಲಕ ದಾಖಲೆ ನಿರ್ಮಿಸಿದೆ.
ಪ್ರತಿವರ್ಷ ಈದ್ ಗೆ ಅಭಿಮಾನಿಗಳು ಸಲ್ಮಾನ್ ಖಾನ್ ಸಿನಿಮಾಗಾಗಿ ಉಸಿರು ಬಿಗಿ ಹಿಡಿದು ಕಾಯುತ್ತಿರುತ್ತಾರೆ. ಅಭಿಮಾನಿಗಳ ಆಸೆ ನಿರಾಸೆ ಮಾಡುವುದಿಲ್ಲ ಸಲ್ಮಾನ್. ಈ ಬಾರಿ ಸಹ 'ಭಾರತ್' ಮೂಲಕ ಜಬರ್ದಸ್ತ್ ಎಂಟ್ರಿ ಕೊಟ್ಟಿದ್ದಾರೆ. ಅಂದ್ಹಾಗೆ 'ಭಾರತ್' ಅಲಿ ಅಬ್ಬಾಸ್ ಝಫರ್ ಸಾರಥ್ಯದಲ್ಲಿ ಮೂಡಿ ಬಂದ ಸಿನಿಮಾ. ಚಿತ್ರದಲ್ಲಿ ಸಲ್ಮಾನ್ ಗೆ ನಾಯಕಿಯಾಗಿ ಕತ್ರೀನಾ ಕೈಫ್ ಕಾಣಿಸಿಕೊಂಡಿದ್ದಾರೆ.


Click it and Unblock the Notifications











