For Quick Alerts
  ALLOW NOTIFICATIONS  
  For Daily Alerts

  ಧಾರ್ಮಿಕ ಭಾವನೆಗೆ ಧಕ್ಕೆ: 'ದಬ್ಬಂಗ್-3' ವಿರುದ್ಧ ಹಿಂದೂ ಜನ ಜಾಗೃತಿ ಸಮಿತಿ ಗರಂ

  |

  ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ಅಭಿನಯದ 'ದಬ್ಬಂಗ್-3' ಸಿನಿಮಾ ಡಿಸೆಂಬರ್ 20 ರಂದು ವರ್ಲ್ಡ್ ವೈಡ್ ರಿಲೀಸ್ ಆಗಲಿದೆ. 'ದಬ್ಬಂಗ್-3' ಟ್ರೈಲರ್ ಮತ್ತು ಹಾಡುಗಳು ಎಲ್ಲೆಡೆ ಸೌಂಡ್ ಮಾಡುತ್ತಿರುವಾಗಲೇ ವಿವಾದಕ್ಕೂ ಸಿಲುಕಿದೆ.

  'ದಬ್ಬಂಗ್-3' ಚಿತ್ರತಂಡದ ವಿರುದ್ಧ ಹಿಂದೂ ಜನ ಜಾಗೃತಿ ಸಮಿತಿ ಮುನಿಸಿಕೊಂಡಿದೆ. 'ದಬ್ಬಂಗ್-3' ಚಿತ್ರದಲ್ಲಿ ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲಾಗಿದೆ. ಹೀಗಾಗಿ, ಚಿತ್ರಕ್ಕೆ ನೀಡುವ ಸೆನ್ಸಾರ್ ಸರ್ಟಿಫಿಕೇಟ್ ನ ತಡೆ ಹಿಡಿಯಿರಿ ಎಂದು 'ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಷನ್'ಗೆ ಹಿಂದೂ ಜನ ಜಾಗೃತಿ ಸಮಿತಿ ಮನವಿ ಮಾಡಿದೆ.

  ಪ್ರಭುದೇವ ನಿರ್ದೇಶನದ 'ದಬ್ಬಂಗ್-3' ಚಿತ್ರದ 'ಹುಡ್ ಹುಡ್' ಹಾಡು ಇತ್ತೀಚೆಗಷ್ಟೇ ಬಿಡುಗಡೆ ಆಗಿತ್ತು. ಇದರಲ್ಲಿ ನದಿಯ ದಂಡೆ ಮೇಲೆ ಸಾಧುಗಳು ಡ್ಯಾನ್ಸ್ ಮಾಡುತ್ತಿರುವ ದೃಶ್ಯವಿದೆ. ಈ ದೃಶ್ಯಕ್ಕೆ ಹಿಂದೂ ಜನ ಜಾಗೃತಿ ಸಮಿತಿ ಆಕ್ಷೇಪ ವ್ಯಕ್ತಪಡಿಸಿದೆ.

  ವಾವ್.. ಸಲ್ಮಾನ್ ಖಾನ್ ಚಿತ್ರದಲ್ಲಿ ಕನ್ನಡದ ಕಾಮಿಡಿ ಕಿಲಾಡಿಗಳು.!ವಾವ್.. ಸಲ್ಮಾನ್ ಖಾನ್ ಚಿತ್ರದಲ್ಲಿ ಕನ್ನಡದ ಕಾಮಿಡಿ ಕಿಲಾಡಿಗಳು.!

  ಮುಸ್ಲಿಂ ಅಥವಾ ಕ್ರಿಶ್ಚಿಯನ್ ಪಾದ್ರಿಗಳನ್ನು ಸಿನಿಮಾಗಳಲ್ಲಿ ಇದೇ ರೀತಿ ತೋರಿಸುತ್ತಾರೆಯೇ ಎಂದು ಹಿಂದೂ ಜನ ಜಾಗೃತಿ ಸಮಿತಿ ಪ್ರಶ್ನಿಸಿದೆ. ಅಲ್ಲದೇ, 'ದಬ್ಬಂಗ್-3' ಚಿತ್ರದಲ್ಲಿ ಹಿಂದೂ ದೇವತೆಗಳಾದ ರಾಮ ಮತ್ತು ಶಿವವನ್ನೂ ಅವಮಾನಿಸಲಾಗಿದೆ ಎಂಬುದು ಇದೇ ಸಮಿತಿಯ ಆರೋಪ. ಹೀಗಾಗಿ, ಹಿಂದೂ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ದೃಶ್ಯಗಳಿಗೆ ಕತ್ರಿ ಹಾಕಲು ಸೂಚಿಸಿ, ಇಲ್ಲದಿದ್ದರೆ ಸೆನ್ಸಾರ್ ಸರ್ಟಿಫಿಕೇಟ್ ಕೊಡಬೇಡಿ ಎಂದು ಸೆನ್ಸಾರ್ ಮಂಡಳಿಯನ್ನ ಹಿಂದೂ ಜನ ಜಾಗೃತಿ ಸಮಿತಿ ಕೇಳಿಕೊಂಡಿದೆ.

  ಕರ್ನಾಟಕದ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ 'ದಬಾಂಗ್-3' ರಿಲೀಸ್ಕರ್ನಾಟಕದ ಅತೀ ಹೆಚ್ಚು ಚಿತ್ರಮಂದಿರಗಳಲ್ಲಿ 'ದಬಾಂಗ್-3' ರಿಲೀಸ್

  ಹಿಂದೂ ಜನ ಜಾಗೃತಿ ಸಮಿತಿಯ ಮನವಿಗೆ ಮನ್ನಣೆ ಕೊಟ್ಟು ಸೆನ್ಸಾರ್ ಮಂಡಳಿ ಕತ್ರಿ ಪ್ರಯೋಗ ಮಾಡುತ್ತಾ ಅಂತ ಕಾದು ನೋಡಬೇಕಿದೆ.

  English summary
  Bollywood Actor Salman Khan starrer Dabangg 3 has landed into new controversy. Hindu Janajagruti Samiti has demanded halt on Certification.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X