ಕ್ರಿಸ್ಮಸ್ ದಿನ ಹೆಚ್ಚಿದ 'ದಬಾಂಗ್-3' ಕಲೆಕ್ಷನ್: 100 ಕೋಟಿ ಕ್ಲಬ್ ಸೇರಿದ ಸಲ್ಮಾನ್ ಸಿನಿಮಾ
ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಅಂತಾನೆ ಕರೆಸಿಕೊಳ್ಳುವ ಸಲ್ಮಾನ್ ಖಾನ್ ಅಭಿನಯದ ದಬಾಂಗ್-3 ಸಿನಿಮಾ ರಿಲೀಸ್ ಆಗಿ ಐದು ದಿನಗಳು ಕಳೆದಿದೆ. ಮೊದಲ ದಿನ ಬಿಗ್ ಓಪನಿಂಗ್ ಪಡೆದುಕೊಂಡಿದ್ದ ದಬಾಂಗ್-3 ನಂತರ ಕಲೆಕ್ಷನ್ ನಲ್ಲಿ ಮುಗ್ಗರಿಸಿತ್ತು. ಆದರೆ ಕ್ರಿಸ್ಮಸ್ ಪ್ರಯುಕ್ತ ಕಲೆಕ್ಷನ್ ನಲ್ಲಿ ಮತ್ತೆ ಚೇತರಿಕೆ ಕಂಡಿದೆ.
ಕ್ರಿಸ್ಮಸ್ ದಿನ ದಬಾಂಗ್-3 ಭರ್ಜರಿ ಕಲೆಕ್ಷನ್ ಮಾಡುವ ಮೂಲಕ 100 ಕೋಟಿ ಕ್ಲಬ್ ಸೇರಿದೆ. ಅಂದ್ಹಾಗೆ ದಬಾಂಗ್-3 ಕ್ರಿಸ್ಮಸ್ ದಿನ 15.50 ಕೋಟಿ ಕಲೆಕ್ಷನ್ ಮಾಡಿದೆ. ಗಳಿಕೆಯಲ್ಲಿ ಮುಗ್ಗರಿಸಿದ್ದ ದಬಾಂಗ್-3ಗೆ ಕ್ರಿಸ್ ಮಸ್ ಕೊಂಚ ಚೇತರಿಕೆ ನೀಡಿದೆ. ಈ ವರ್ಷ 100 ಕೋಟಿ ಕ್ಲಬ್ ಸೇರಿದ ಸಲ್ಮಾನ್ ಎರಡನೆ ಸಿನಿಮಾ ಇದಾಗಿದೆ.
ದಬಾಂಗ್-3 ಇದುವರೆಗಿನ ಕಲೆಕ್ಷನ್ ಒಟ್ಟು 107 ಕೋಟಿ ಕಲೆಕ್ಷನ್ ಮಾಡಿದೆ. ದಬಾಂಗ್-3 ಕಲೆಕ್ಷನ್ ಗೆ ದೊಡ್ಡ ಹೊಡೆದ ಬಿದ್ದಿದ್ದು CAA ವಿರುದ್ಧ ಪ್ರತಿಭಟನೆ. ಇಲ್ಲವಾದರೆ ಮೊದಲ ವರಾಂತ್ಯದಲ್ಲಿ ದಬಾಂಗ್-3 125 ರಿಂದ 130 ಕೋಟಿ ಕಲೆಕ್ಷನ್ ಮಾಡಬಹುದು ಎಂದು ಚಿತ್ರತಂಡ ಅಂದುಕೊಂಡಿತ್ತು. ಆದರೆ ಪ್ರತಿಭಟನೆ ಇಂದ ಕಲೆಕ್ಷನ್ ಮೇಲೆಯು ಹೊಡೆದ ಬಿದ್ದಿದೆ.

ದಬಾಂಗ್-3 ಮೊದಲ ದಿನ 21 ಕೋಟಿ ಬಾಚಿಕೊಂಡಿತ್ತು. ನಂತರ ಮೂರು ದಿನಗಳಲ್ಲಿ 71 ಕೋಟಿ ಕಲೆಕ್ಷನ್ ಮಾಡಿತ್ತು. ಸೋಮವಾರ ಕೇವಲ 10 ಕೋಟಿ ಮಾತ್ರ ಬಾಚಿಕೊಂಡು ನಿರಾಸೆ ಮೂಡಿಸಿತ್ತು.


Click it and Unblock the Notifications











