For Quick Alerts
  ALLOW NOTIFICATIONS  
  For Daily Alerts

  ನೀರಸವಾದ ಸಲ್ಮಾನ್ ಖಾನ್ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಟೈಟಲ್ ಟೀಸರ್!

  |

  ನಟ ಸಲ್ಮಾನ್ ಖಾನ್ ಬಾಲಿವುಡ್‌ನಲ್ಲಿ ದಶಕಗಳಿಂದ ಸೂಪರ್ ಸ್ಟಾರ್ ಆಗಿ ಮಿಂಚುತ್ತಿರುವ ನಟ. ಸಲ್ಮಾನ್ ಖಾನ್ ಹಲವು ವರ್ಷಗಳಿಂದ ಲಕ್ಷಾಂತರ ಅಭಿಮಾನಿಗಳ ಹೃದಯದಲ್ಲಿ ಸ್ಟಾರ್ ಆಗಿ ರಾರಾಜಿಸುತ್ತಿದ್ದಾರೆ. ಇಂದಿಗೂ ಕೂಡ ಸಲ್ಮಾನ್ ಖಾನ್‌ ಬಗೆಗಿನ ಕ್ರೇಜ್ ಕಡಿಮೆಯಾಗಿಲ್ಲ.

  ಈಗ ನಟ ಸಲ್ಮಾನ್ ಖಾನ್ ಸಿನಿಮಾರಂಗಕ್ಕೆ ಬಂದು 34 ವರ್ಷ ಕಳೆದಿದೆ. ಆದರೆ ಈಗಲೂ ಕೂಡ ಸಲ್ಮಾನ್ ಖಾನ್ ಹೊಸ ಸಿನಿಮಾ ಬರುತ್ತದೆ ಎಂದರೆ ಅಭಿಮಾನಿಗಳಲ್ಲಿ ಏನೋ ಒಂದು ರೀತಿಯ ಕ್ರೇಜ್ ಹುಟ್ಟಿಕೊಳ್ಳುತ್ತದೆ. ಹಾಗಾಗಿ ಇಂದಿಗೂ ಅವರು ತಮ್ಮನ್ನು ಪ್ರೀತಿಸುವವರ ಪಾಲಿಗೆ ಭಾಯ್ ಜಾನ್ ಆಗಿದ್ದಾರೆ.

  ಖಾನ್‌ತ್ರಯರು ಒಟ್ಟಿಗೆ ನಟಿಸಿದರೂ ರಾಕಿಭಾಯ್ ಬರೆದ ಆ ದಾಖಲೆ ಅಳಿಸಲು ಕಷ್ಟ!ಖಾನ್‌ತ್ರಯರು ಒಟ್ಟಿಗೆ ನಟಿಸಿದರೂ ರಾಕಿಭಾಯ್ ಬರೆದ ಆ ದಾಖಲೆ ಅಳಿಸಲು ಕಷ್ಟ!

  ಸಲ್ಮಾನ್ ಖಾನ್ ಮುಂದಿನ ಸಿನಿಮಾದ ಅಪ್ಡೇಟ್ ಈಗ ಹೊರ ಬಂದಿದೆ. ಇವರ ಮುಂದಿನ ಚಿತ್ರ ಟೈಟಲ್ ಅಧಿಕೃತವಾಗಿ ಲಾಂಚ್ ಆಗಿದೆ. ಅದರಲ್ಲೂ ಈ ಚಿತ್ರದಲ್ಲಿರುವ ಸಲ್ಮಾನ್ ಖಾನ್ ಲುಕ್‌ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.

  ಸಲ್ಲು ಸಿನಿಪಯಣಕ್ಕೆ 34 ವರ್ಷ!

  ಸಲ್ಲು ಸಿನಿಪಯಣಕ್ಕೆ 34 ವರ್ಷ!

  ನಟ ಸಲ್ಮಾನ್ ಖಾನ್ ಸಿನಿಮಾರಂಗದಲ್ಲಿ 34 ವರ್ಷ ಮುಗಿಸಿದ ಪ್ರಯುಕ್ತ ತಮ್ಮ ಮುಂದಿನ ಚಿತ್ರ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾ ಫಸ್ಟ್ ಲುಕ್ ಈ ಹಿಂದೆಯೇ ಹಂಚಿಕೊಂಡಿದ್ದರು. "34 ವರ್ಷಗಳ ಹಿಂದೆ ಈಗ ಮತ್ತು 34 ವರ್ಷಗಳ ನಂತರವೂ, ನನ್ನ ಜೀವನದ ಪ್ರಯಾಣವು 2 ಪದಗಳಿಂದ ಆಗಿದೆ. ಆಗ ನನ್ನೊಂದಿಗೆ ಇದ್ದಕ್ಕಾಗಿ ಧನ್ಯವಾದಗಳು ಮತ್ತು ನನ್ನೊಂದಿಗೆ ಈಗ ನೀವೂ ಇರುವುದಕ್ಕಾಗಿ ಧನ್ಯವಾದಗಳು. ಇದನ್ನು ನಾನು ನಿಜವಾಗಿಯೂ ಪ್ರಶಂಸಿಸುತ್ತೇನೆ" ಎಂದು ಟ್ವಿಟ್ಟರ್‌ನಲ್ಲಿ ಬರೆದುಕೊಂಡಿದ್ದರು.

  ಹಿರಿಯ ನಿರ್ದೇಶಕ ಸಾವನ್ ಕುಮಾರ್ ನಿಧನ: ಸಲ್ಮಾನ್ ಖಾನ್ ಸಂತಾಪಹಿರಿಯ ನಿರ್ದೇಶಕ ಸಾವನ್ ಕುಮಾರ್ ನಿಧನ: ಸಲ್ಮಾನ್ ಖಾನ್ ಸಂತಾಪ

  'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಟೈಟಲ್ ಟೀಸರ್!

  'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಟೈಟಲ್ ಟೀಸರ್!

  ನಟ ಸಲ್ಮಾನ್ ಖಾನ್ ನಟನೆಯ ಮುಂದಿನ ಸಿನಿಮಾ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್'. ಈ ಚಿತ್ರದ ಟೈಟಲ್ ಈಗ ಅಧಿಕೃತವಾಗಿ ಲಾಂಚ್ ಆಗಿದೆ. ಪುಟ್ಟದೊಂದು ಟೀಸರ್ ಮೂಲಕ ಟೈಟಲ್ ರಿವೀಲ್ ಆಗಿದೆ. ಟೀಸರ್ ಆರಂಭದಲ್ಲಿ ನಟ ಸಲ್ಮಾನ್ ಖಾನ್ ಬೈಕ್ ರೈಡ್ ಮಾಡುತ್ತಿರುತ್ತಾರೆ. ನಂತರ ಸಲ್ಮಾನ್ ಖಾನ್ ನಡೆದುಕೊಂಡು ಹೋಗುವ ದೃಶ್ಯಗಳು ಇವೆ. ಟೀಸರ್ ಅಂತ್ಯದಲ್ಲಿ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಎನ್ನುವ ಟೈಟಲ್ ರಿವೀಲ್ ಆಗುತ್ತದೆ.

  ಸಲ್ಮಾನ್ ಖಾನ್ ಲುಕ್ ಮಾತ್ರವೇ ಕಿಕ್!

  ಸಲ್ಮಾನ್ ಖಾನ್ ಲುಕ್ ಮಾತ್ರವೇ ಕಿಕ್!

  'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಟೀಸರ್ ಅಷ್ಟೇನು ಅದ್ಬುತ ಎನಿಸಲ್ಲ. ಈ ಟೀಸರನ್‌ನಲ್ಲಿ ಕೇವಲ ಸಲ್ಮಾನ್ ಖಾನ್ ಅವ್ರ ಪಾತ್ರ ಮತ್ತು ಅವ್ರ ಹೊಸ ಲುಕ್ ಪರಿಚಯಿಸಲಾಗಿದೆ. ಸಲ್ಮಾನ್ ಖಾನ್ ಕಾಸ್ಟ್ಯೂಂ, ಆ್ಯಕ್ಸಸರೀಸ್, ಹೇರ್ ಸ್ಟೈಲ್, ಇವೇ ಇಡೀ ಟ್ರೈಲರ್‌ನಲ್ಲಿ ತುಂಬಿ ಹೋಗಿವೆ. ಇದರಲ್ಲಿ ಭಿನ್ನ ಎನಿಸುವುದು ಕೇವಲ ಸಲ್ಮಾನ್ ಖಾನ್ ಉದ್ದನೆಯ ಹೇರ್ ಸ್ಟೈಲ್ ಮಾತ್ರವೇ. ಹಾಗಾಗಿ ಸಲ್ಮಾನ್ ಖಾನ್ ಹೊಸ ಅವತಾರ ಪರಿಚಯಿಸಲೆಂದೇ ಈ ಟೀಸರ್ ಮಾಡಲಾಗಿದೆ.

  ಸಲ್ಲುಗೆ ನಾಯಕಿಯಾದ ಪೂಜಾ ಹೆಗ್ಡೆ!

  ಸಲ್ಲುಗೆ ನಾಯಕಿಯಾದ ಪೂಜಾ ಹೆಗ್ಡೆ!

  ಈ ಚಿತ್ರದಲ್ಲಿ ನಟ ಸಲ್ಮಾನ್ ಖಾನ್ ಜೊತೆಗೆ ಸೌತ್ ತಾರೆಯರು ಇದ್ದಾರೆ. ತೆಲುಗು ನಟ ವೆಂಕಟೇಶ್ ಮತ್ತು ನಟಿ ಪೂಜಾ ಹೆಗ್ಡೆ ಈ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಇದ್ದಾರೆ. ಫರ್ಹಾದ್ ಸಮ್‌ಜೀ ಈ ಚಿತ್ರದ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. 'ಕಿಸಿ ಕಿ ಭಾಯ್ ಕಿಸಿ ಕಿ ಜಾನ್' ಚಿತ್ರವನ್ನು ಬಿಟ್ಟರೆ 'ಟೈಗರ್ 3', 'ಕಿಕ್ 2' ಸಿನಿಮಾಗಳು ಸಲ್ಮಾನ್ ಖಾನ್ ಕೈಯಲ್ಲಿ ಇವೆ.

  English summary
  Salman Khan starrer Kisi Ka Bhai Kisi Ki Jaan title reveal with new teaser, Know More,
  Monday, September 5, 2022, 15:08
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X