For Quick Alerts
  ALLOW NOTIFICATIONS  
  For Daily Alerts

  ಬಿಡುಗಡೆಯಾದ ದಿನವೇ 'ರಾಧೆ' ಸಿನಿಮಾ ಲೀಕ್; ಸಲ್ಮಾನ್ ಅಭಿಮಾನಿಗಳ ಬೇಸರ

  |

  ಬಾಲಿವುಡ್ ಬಾಕ್ಸ್ ಆಫೀಸ್ ಸುಲ್ತಾನ್ ಸಲ್ಮಾನ್ ಖಾನ್ ನಟನೆಯ ಬಹುನಿರೀಕ್ಷೆಯ ರಾಧೆ: ಯುವರ್ ಮೋಸ್ಟ್ ವಾಂಟೆಡ್ ಭಾಯ್ ಸಿನಿಮಾ ಈದ್ ಹಬ್ಬದ ಪ್ರಯುಕ್ತ ಬಿಡುಗಡೆಯಾಗಿದೆ. ಕೊರೊನಾ ಹಾವಳಿಯ ನಡುವೆಯೂ ಅಭಿಮಾನಿಗಳನ್ನು ರಂಜಿಸಲು ಸಲ್ಲು ರಾಧೆ ಮೂಲಕ ಎಂಟ್ರಿ ಕೊಟ್ಟಿದ್ದಾರೆ.

  ಸಲ್ಮಾನ್ ಸಿನಿಮಾ ಅಂದ್ಮೇಲೆ ಅಭಿಮಾನಿಗಳ ನಿರೀಕ್ಷೆ ದುಪ್ಪಟ್ಟಾಗಿರುತ್ತೆ. ರಾಧೆ ನೋಡಲು ತುದಿಗಾಲಿನಲ್ಲಿ ನಿಂತಿದ್ದರು. ಆದರಂತೆ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದಂತೆ ಅಭಿಮಾನಿಗಳು ಮುಗಿಬಿದ್ದು ವೀಕ್ಷಿಸಿದ್ದಾರೆ. ಚಿತ್ರಕ್ಕೆ ಮೊದಲ ದಿನ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ.

  ಆದರೆ ಮೊದಲ ದಿನವೇ ರಾಧೆ ಸಿನಿಮಾ ಲೀಕ್ ಆಗಿದೆ. ಲೀಕ್ ಆಗಿರುವ ಹೆಚ್ ಡಿ ಪ್ರಿಂಟ್ ವೈರಲ್ ಆಗಿದೆ. ಲಾಕ್ ಡೌನ್ ಇರುವ ಕಡೆ ಒಟಿಟಿಯಲ್ಲಿ ಚಿತ್ರ ಬಿಡುಗಡೆ ಮಾಡಿದ್ರೆ, ಲಾಕ್ ಡೌನ್ ಇಲ್ಲದೆ ಇರುವ ಕಡೆ ಚಿತ್ರಮಂದಿರಗಳಲ್ಲಿ ಸಿನಿಮಾ ಬಿಡುಗಡೆಯಾಗಿದೆ. ಆದರೆ ಮೊದಲ ದಿನವೇ ಲೀಕ್ ಆಗಿರುವುದು ಸಲ್ಲು ಅಭಿಮಾನಿಗಳಿಗೆ ಬೇಸರ ತಂದಿದೆ.

  ತಮಿಳು ರಾಕರ್ಸ್ ಸೇರಿದಂತೆ ಸಾಕಷ್ಟು ವೆಬ್ ಸೈಟ್ ಗಳಲ್ಲಿ ರಾಧೆ ಸಿನಿಮಾ ಸೋರಿಕೆಯಾಗಿದೆ. ರಿಲೀಸ್ ಗು ಮೊದಲು ಸಲ್ಮಾನ್ ಖಾನ್ ಪೈರಸಿ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದರು. ಆದರೂ ಲೀಕ್ ಆಗಿರುವುದು ಅಭಿಮಾನಿಗಳಿಗೆ ಬೇಸರ ತರಿಸಿದೆ.

  ಈ ಬಗ್ಗೆ ಸಲ್ಮಾನ್ ಅಭಿಮಾನಿಗಳ ಸಾಮಾಜಿಕ ಜಾಲತಾಣದ ಮೂಲಕ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸೋರಿಕೆ ಮಾಡಿದವರ ವಿರುದ್ಧ ಸರಿಯಾದ ಕ್ರಮ ತೆಗೆದುಕೊಳ್ಳಿ ಎಂದು ಒತ್ತಾಯಿಸುತ್ತಿದ್ದಾರೆ. ರಾಧೆ ಲೀಕ್ ಆಗಿರುವ ವೆಬ್ ಸೈಟ್ ಸ್ಕ್ರೀನ್ ಶಾಟ್ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಕಠಿಣ ಕ್ರಮಕ್ಕೆ ಆಗ್ರಹಿಸುತ್ತಿದ್ದಾರೆ.

  ನನ್ನ ತಾಯಿ ಯಾರು ಅಂತಾ ಗೊತ್ತಾಗೋದೇ ಬೇಡ ಅಂದ್ರು ಶರಣ್ | Filmibeat Kannada

  ರಾಧೆ;ಯುವರ್ ಮೋಸ್ಟ್ ವಾಂಟೆಡ್ ಭಾಯ್ ಚಿತ್ರದಲ್ಲಿ ಸಲ್ಮಾನ್ ಖಾನ್ ಗೆ ನಾಯಕಿಯಾಗಿ ದಿಶಾ ಪಟಾನಿ ಕಾಣಿಸಿಕೊಂಡಿದ್ದಾರೆ. ಪ್ರಮುಖ ಪಾತ್ರದಲ್ಲಿ ಹಿರಿಯ ನಟ ಜಾಕಿ ಶ್ರಾಪ್ ಮಿಂಚಿದ್ದಾರೆ. ಚಿತ್ರಕ್ಕೆ ಪ್ರಭುದೇವ ಆಕ್ಷನ್ ಕಟ್ ಹೇಳಿದ್ದಾರೆ.

  English summary
  Salman Khan starrer Radhe: your most wanted bhai movie leaks on online.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X