'ಸುಲ್ತಾನ್' ಕೂಡ ಆನ್ ಲೈನ್ ನಲ್ಲಿ ಲೀಕ್ ಆಗಿತ್ತಾ?
ಇತ್ತೀಚೆಗೆ ಸುಮಾರು 2 ವಾರಗಳ ಹಿಂದೆ 'ಉಡ್ತಾ ಪಂಜಾಬ್' ಚಿತ್ರದ ಸೆನ್ಸಾರ್ ಕಾಪಿ ಆನ್ ಲೈನ್ ನಲ್ಲಿ ಲೀಕ್ ಆಗಿ ಬಿಟೌನ್ ನಲ್ಲಿ ಭಾರಿ ಸುದ್ದಿಯಾಗಿತ್ತು. ಇದೀಗ ಮತ್ತೆ ಆನ್ ಲೈನ್ ನಲ್ಲಿ 'ಸುಲ್ತಾನ್' ಚಿತ್ರದ ಸೆನ್ಸಾರ್ ಕಾಪಿ ಲೀಕ್ ಆಗಿದೆ ಅಂತ ಸುದ್ದಿಯಾಗಿದೆ.
ಸಲ್ಮಾನ್ ಖಾನ್ ಮತ್ತು ಅನುಷ್ಕಾ ಶರ್ಮಾ ಕಾಣಿಸಿಕೊಂಡಿರುವ 'ಸುಲ್ತಾನ್' ಬಿಡುಗಡೆಗೂ ಒಂದು ದಿನ ಮುನ್ನ ಚಿತ್ರದ ಸೆನ್ಸಾರ್ ಕಾಪಿ ಡಾರ್ಕ್ ನೆಟ್ ನಲ್ಲಿ ಓಡಾಡಿದೆ. ಆದರೆ ಬಿಟ್ಟೊರೆಂಟ್ ಸೈಟ್ ಗಳಿಗೆ ತಲುಪಿಲ್ಲ ಎಂದು ಸೈಬರ್ ಕ್ರೈಮ್ ಪರಿಣಿತರು ವರದಿ ಮಾಡಿದ್ದಾರೆ.['ಉಡ್ತಾ ಪಂಜಾಬ್' ಚಿತ್ರತಂಡಕ್ಕೆ ಮತ್ತೆ ಆಘಾತ]

"ಸುಲ್ತಾನ್ ಚಿತ್ರ ಆನ್ ಲೈನ್ ನಲ್ಲಿ ಲೀಕ್ ಆಗಿರೋದು ಸತ್ಯ. ಡಾರ್ಕ್ ನೆಟ್ ಗಳಲ್ಲಿ ಈಗಾಗಲೇ ಚಿತ್ರದ ಕಾಪಿ ಲಭ್ಯವಿದೆ. ಇನ್ನೇನು ಸದ್ಯದಲ್ಲೇ ಬಿಟ್ಟೊರೆಂಟ್ ಸೈಟ್ ಗಳಲ್ಲಿ ಕೂಡ ಡೌನ್ ಲೋಡ್ ಮಾಡಿಕೊಳ್ಳುವ ಅವಕಾಶ ಇದೆ' ಎಂದು ಸೈಬರ್ ಕ್ರೈಮ್ ಪರಿಣತ ದೀಪ್ ಶಂಕರ್ ಅವರು ಹೇಳಿದ್ದಾರೆ.
'ಸೆನ್ಸಾರ್ ಕಾಪಿ ಅಪ್ ಲೋಡ್ ಆದ ತಕ್ಷಣ ಹಲವಾರು ವೆಬ್ ಸೈಟ್ ಗಳು ಬ್ಲಾಕ್ ಮಾಡಿ ಡೌನ್ ಲೋಡ್ ಲಿಂಕ್ ಗಳನ್ನು ಮಂಗಳವಾರ ಸಂಜೆಯ ವೇಳೆಗೆ ತೆಗೆದು ಹಾಕಿದ್ದಾರೆ' ಎಂದು ಸೈಬರ್ ಕ್ರೈಮ್ ನ ಇನ್ನೋರ್ವ ಇನ್ ವೆಸ್ಟಿಗೇಷನ್ ಅಧಿಕಾರಿ ಕಿಸ್ಲೇ ಚೌಧರಿ ಅವರು ತಿಳಿಸಿದ್ದಾರೆ.[ವಿಮರ್ಶೆ: 440 ವೋಲ್ಟ್ ನಲ್ಲಿ ಅಬ್ಬರಿಸಿದ ಹರ್ಯಾಣದ 'ಸುಲ್ತಾನ್']

ಆದರೆ ಈ ಸುದ್ದಿಯನ್ನು ಸುಲ್ತಾನ್ ನಿರ್ದೇಶಕ ಆಲಿ ಅಬ್ಬಾಸ್ ಜಾಫರ್ ಸೇರಿದಂತೆ ಚಿತ್ರದ ನಿರ್ಮಾಣ ಸಂಸ್ಥೆ ಯಶ್ ರಾಜ್ ಫಿಲ್ಮ್ಸ್ ನವರು ತಳ್ಳಿಹಾಕಿದ್ದಾರೆ. ಮಾತ್ರವಲ್ಲದೇ ಇದುವರೆಗೆ ಚಿತ್ರದ ನಿರ್ದೇಶಕರಾಗಲಿ, ನಿರ್ಮಾಪಕರಾಗಲಿ ಈ ಬಗ್ಗೆ ಯಾವುದೇ ಸ್ಪಷ್ಟ ಮಾಹಿತಿ ಒದಗಿಸಿಲ್ಲ.
ಅದೇನೇ ಇರಲಿ ಒಟ್ನಲ್ಲಿ ಇದೀಗ ಇಂದು (ಜುಲೈ 6) ತೆರೆಕಂಡಿರುವ 'ಸುಲ್ತಾನ್' ಚಿತ್ರ ಎಲ್ಲಾ ಕಡೆ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಭಾಯ್ ಜಾನ್ ಸಲ್ಮಾನ್ ಖಾನ್ ಅಭಿಮಾನಿಗಳಿಗೆ ರಂಜಾನ್ ಹಬ್ಬಕ್ಕೆ ಉಡುಗೊರೆ ನೀಡಿದಂತಾಗಿದೆ.


Click it and Unblock the Notifications











