For Quick Alerts
  ALLOW NOTIFICATIONS  
  For Daily Alerts

  ಶಾಂಘೈ ಅಂತರಾಷ್ಟ್ರೀಯ ಚಿತ್ರೋತ್ಸವದಲ್ಲಿ 'ಸುಲ್ತಾನ್' ಸ್ಪರ್ಧೆ

  By Suneel
  |

  ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅಭಿನಯದ 'ಸುಲ್ತಾನ್' ಚಿತ್ರ ಶಾಂಘೈ ಅಂತರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆ ಆಗಿದೆ. ಚಿತ್ರ ನಿರ್ದೇಶಕ ಅಲಿ ಅಬ್ಬಾಸ್ ಝಫರ್ ಈ ಬಗ್ಗೆ ಹೆಮ್ಮೆ ಆಗುತ್ತಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

  ಏಷ್ಯಾ ಖಂಡದಲ್ಲೇ ಅತಿದೊಡ್ಡ ಚಿತ್ರೋತ್ಸವ 'ಶಾಂಘೈ ಅಂತರಾಷ್ಟ್ರೀಯ ಚಲನಚಿತ್ರೋತ್ಸವ'. ಈ ಚಿತ್ರೋತ್ಸವ ಜೂನ್ 17-26 ರವರೆಗೆ ಚೀನದ ಶಾಂಘೈನಲ್ಲಿ ನಡೆಯಲಿದೆ.

  'ಸುಲ್ತಾನ್' ಭಾರತದ ದೇಶಿ ಕ್ರೀಡೆಯ ಕಥಾಹಂದರವನ್ನು ಹೊಂದಿರುವ ಚಿತ್ರವಾಗಿದ್ದು, ಸಾಹಸಮಯ ಕ್ರೀಡೆಯನ್ನು ಪ್ರತಿನಿಧಿಸುತ್ತಿದೆ. ಅಲ್ಲದೇ ಚಿತ್ರಕ್ಕೆ ದೇಶದಾದ್ಯಂತ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. 'ಚೀನಾ ಸಹ ತನ್ನ ಸಾಂಪ್ರದಾಯಿಕ ಮಾರ್ಷಲ್ ಆರ್ಟ್ಸ್ ಹಾಗೂ ಇತರೆ ಸಾಹಸಮಯ ಚಿತ್ರಗಳನ್ನು ಹೊಂದಿದ್ದು, ಅಲ್ಲಿನ ಸಿನಿಮಾಗಳ ನಡುವೆ 'ಸುಲ್ತಾನ್' ಚಿತ್ರ ಪ್ರದರ್ಶನಕ್ಕೆ ಆಯ್ಕೆ ಆಗಿರುವುದು ತುಂಬಾ ಸಂತೋಷ ಆಗಿದೆ' ಎಂದು ನಿರ್ದೇಶಕ ಅಲಿ ಅಬ್ಬಾಸ್ ಝಫರ್ ಹೇಳಿದ್ದಾರೆ.

  ಸಲ್ಮಾನ್ ಖಾನ್ ಕುಸ್ತಿಪಟು ಆಗಿ ಅಭಿನಯಿಸಿದ್ದ 'ಸುಲ್ತಾನ್' ಚಿತ್ರದಲ್ಲಿ ಅನುಷ್ಕ ಶರ್ಮಾ ಫೀಮೇಲ್ ಲೀಡ್ ಪಾತ್ರ ನಿರ್ವಹಿಸಿದ್ದರು. ಈ ಚಿತ್ರವನ್ನು ಆದಿತ್ಯ ಚೋಪ್ರಾ ನಿರ್ಮಾಣ ಮಾಡಿದ್ದರು.

  English summary
  Bollywood Actor Salman Khan starrer 'Sultan' film has been shortlisted to compete for top honours at the Shanghai International Film Festival.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X