Tiger-3 Teaser: ಕಹಾನಿಯಲ್ಲಿ ಬಿಗ್ ಟ್ವಿಸ್ಟ್: ದೇಶದ್ರೋಹಿ ಆಗಿಬಿಟ್ನಾ 'ಟೈಗರ್'?
ಬಾಲಿವುಡ್ ಸೂಪರ್ ಹಿಟ್ 'ಟೈಗರ್' ಸರಣಿಯ ಹೊಸ ಸಿನಿಮಾ ಬಿಡುಗಡೆಗೆ ಸಜ್ಜಾಗ್ತಿದೆ. ಮತ್ತೊಮ್ಮೆ ಟೈಗರ್ ಅಲಿಯಾಸ್ ಅವಿನಾಶ್ ಸಿಂಗ್ ರಾಥೋರ್ ಆಗಿ ಸಲ್ಮಾನ್ ಖಾನ್ ಅಬ್ಬರಿಸಿದ್ದಾರೆ. ಸದ್ಯ ಚಿತ್ರದ ಟೀಸರ್ ರಿಲೀಸ್ ಆಗಿ ಗಮನ ಸೆಳೆಯುತ್ತಿದೆ. ಬಹುಕೋಟಿ ವೆಚ್ಚದಲ್ಲಿ ಈ ಆಕ್ಷನ್ ಎಂಟರ್‌ಟೈನರ್ ಸಿನಿಮಾ ನಿರ್ಮಾಣವಾಗಿದೆ.
ಭಾರತೀಯ ಚಿತ್ರರಂಗದಲ್ಲಿ ಯಶಸ್ಸು ಕಂಡ ಸ್ಪೈ ಥ್ರಿಲ್ಲರ್ ಸೀರಿಸ್‌ನಲ್ಲಿ 'ಟೈಗರ್' ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ. ಏಕ್ ಥಾ ಟೈಗರ್, ಟೈಗರ್ ಜಿಂದಾ ಹೈ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದ್ದವು. ಸರಣಿಯ 3ನೇ ಸಿನಿಮಾ 'ಟೈಗರ್ 3' ದೀಪಾವಳಿ ಸಂಭ್ರಮದಲ್ಲಿ ತೆರೆಗೆ ಬರ್ತಿದೆ. ಚಿತ್ರದಲ್ಲಿ ಕತ್ರೀನಾ ಕೈಫ್ ನಾಯಕಿಯಾಗಿ ನಟಿಸಿದ್ದಾರೆ. 'ಪಠಾಣ್' ನಂತರ ಆ ಸ್ಪೈ ಯೂನಿವರ್ಸ್ ಫ್ರಾಂಚೈಸಿಯಲ್ಲಿ ಯಶ್ ರಾಜ್ ಫಿಲ್ಮ್ಸ್ ನಿರ್ಮಾಣಾ ತಾಜಾ ಸಿನಿಮಾ ಇದು. 'ಟೈಗರ್ ಕಾ ಮೆಸೇಜ್' ಹೆಸರಿನಲ್ಲಿ ಟೀಸರ್ ರಿಲೀಸ್ ಆಗಿದೆ.

"ನನ್ನ ಅಸಲಿ ಹೆಸರು ಅವಿನಾಶ್ ಸಿಂಗ್ ರಾಥೋಡ್. ನಿಮ್ಮಗೆಲ್ಲಾ ನಾನು 'ಟೈಗರ್'. 20 ವರ್ಷಗಳಿಂದ ನನ್ನ ಜೀವನವನ್ನು ದೇಶದ ರಕ್ಷಣೆಗಾಗಿ ಮೀಸಲಿಟ್ಟಿದ್ದೇನೆ. ಅದಕ್ಕೆ ಬದಲಾಗಿ ನಾನು ಏನೂ ಕೇಳಲಿಲ್ಲ. ಆದರೆ, ಈಗ ಕೇಳುತ್ತಿದ್ದೇನೆ. ನಿಮ್ಮ ಟೈಗರ್ ನಿಮಗೆ ಶತ್ರು ಎಂದು ಹೇಳುತ್ತಿದ್ದೇನೆ. ಟೈಗರ್ ದೇಶದ್ರೋಹಿ ಎನ್ನುತ್ತಿದ್ದೇನೆ. ಟೈಗರ್ ನಮ್ಮ ಶತ್ರುಗಳಲ್ಲಿ ನಂಬರ್ ವನ್ ಎಂದು ಹೇಳುತ್ತಿದ್ದೇನೆ. ದೇಶಕ್ಕೆ 20 ವರ್ಷಗಳ ಸೇವೆ ಮಾಡಿದ ನಂತರ ಭಾರತದ ಬಳಿ ನನ್ನ ಕ್ಯಾರೆಕ್ಟರ್ ಪ್ರಮಾಣಪತ್ರ ಕೇಳುತ್ತಿದ್ದೇನೆ. ನನ್ನ ಮಗನಿಗೆ ನಾನು ಅಲ್ಲ, ಇಂಡಿಯಾ ಹೇಳುತ್ತದೆ... ತನ್ನ ತಂದೆ ಯಾರು? ಎಂದು. ದೇಶ ದ್ರೋಹ? ದೇಶ ಭಕ್ತುನಾ? ಅಂತ. ಬದುಕಿದ್ದರೆ ನಿಮ್ಮ ಸೇವೆ ಮಾಡಲು ನಾನು ಮತ್ತೆ ಬರುತ್ತೇನೆ. ಇಲ್ಲವೇ ಜೈಹಿಂದ್" ಎನ್ನುವ ಡೈಲಾಗ್ ಟೀಸರ್‌ನಲ್ಲಿದೆ.
ಬರೀ ಟೀಸರ್‌ನಿಂದಲೇ ಸಲ್ಮಾಲ್ ಖಾನ್ 'ಟೈಗರ್'-3 ಸಿನಿಮಾ ಬಗ್ಗೆ ಕುತೂಹಲ ಕೆರಳಿಸಿದ್ದಾರೆ. ಚಿತ್ರದಲ್ಲಿ ದೇಶದ್ರೋಹಿಯಾಗಿ ನಿಜಕ್ಕೂ ಸಲ್ಲು ಕಾಣಿಕೊಳ್ತಾರಾ? ಅಷ್ಟಕ್ಕೂ ಅವಿನಾಶ್ ಸಿಂಗ್ ರಾಥೋರ್ ಈ ರೀತಿ ಹೇಳೋಕೆ ಕಾರಣ ಏನು ಎನ್ನುವುದನ್ನು ತೆರೆಮೇಲೆ ನೋಡಬೇಕಿದೆ.
ಭಾರತದ ಸುದ್ದಿ ಮಾಧ್ಯಮಗಳಲ್ಲಿ ಟೈಗರ್ ದೇಶದ್ರೋಹಿ ಎಂದು, ಭಾರತಕ್ಕೆ ಶತ್ರು ಎಂದು ಏಕೆ ಹೇಳುತ್ತಿದ್ದಾರೆ? ಟೈಗರ್ ಮೇಲೆ ಆರ್ಮಿ ಏಕೆ ಅಟ್ಯಾಕ್ ಮಾಡುತ್ತದೆ? ಅಷ್ಟಕ್ಕೂ ಏನಾಯ್ತು? ಅನ್ನೋದೇ 'ಟೈಗರ್'-3 ಸಿನಿಮಾ ಕತೆ. "ಉಸಿರುವವರೆಗೂ 'ಟೈಗರ್' ಸೋಲು ಒಪ್ಪಿಕೊಳ್ಳುವುದಿಲ್ಲ" ಎನ್ನುವ ಸಲ್ಲು ಕೊನೆ ಡೈಲಾಗ್ ಅಭಿಮಾನಿಗಳಿಗೆ ಸಖತ್ ಕಿಕ್ ಕೊಡ್ತಿದೆ.

'ಟೈಗರ್- 3' ಚಿತ್ರಕ್ಕೆ ಮನೀಷ್ ಶರ್ಮ ಆಕ್ಷನ್ ಕಟ್ ಹೇಳಿದ್ದಾರೆ. ಆದಿತ್ಯ ಚೋಪ್ರಾ ಬಹಳ ಅದ್ಧೂರಿಯಾಗಿ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಶ್ರೀಧರ್ ರಾಘವ ಚಿತ್ರಕತೆ, ಅನಯ್ ಓಂ ಗೋಸ್ವಾಮಿ ಛಾಯಾಗ್ರಹಣ, ಪ್ರೀತಮ್ ಸಂಗೀತ ಚಿತ್ರಕ್ಕಿದೆ. ಹಿಂದಿ ಜೊತೆ ತೆಲುಗು, ತಮಿಳಿಗೂ ಸಿನಿಮಾ ಡಬ್ ಮಾಡಿ ರಿಲೀಸ್ ಮಾಡಲಾಗುತ್ತಿದೆ. ಆದರೆ ಕನ್ನಡಕ್ಕೆ ಸಿನಿಮಾ ಡಬ್ ಆಗ್ತಿಲ್ಲ.
ಇಮ್ರಾನ್ ಹಶ್ಮಿ 'ಟೈಗರ್- 3' ಚಿತ್ರದಲ್ಲಿ ವಿಲನ್ ಆಗಿ ಅಬ್ಬರಿಸಿದ್ದಾರೆ ಎನ್ನಲಾಗ್ತಿದೆ. ಇನ್ನುಳಿದಂತೆ ಸರಣಿಯ ಹಿಂದಿನ ಸಿನಿಮಾಗಳಲ್ಲಿದ್ದ ಕೆಲ ಪಾತ್ರಗಳು ಈ ಚಿತ್ರದಲ್ಲೂ ಮುಂದುವರೆಯಲಿವೆ. ಶಾರುಖ್ ಖಾನ್ 'ಪಠಾಣ್' ಆಗಿ ಈ ಚಿತ್ರದಲ್ಲಿ ಗೆಸ್ಟ್ ಅಪಿಯರೆನ್ಸ್ ಮಾಡಲಿದ್ದಾರೆ. ಈ ವರ್ಷದ ಆರಂಭದಲ್ಲಿ ರಿಲೀಸ್ ಆಗಿದ್ದ 'ಪಠಾಣ್' ಸಿನಿಮಾ 1000 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿತ್ತು. ರಾ ಏಜೆಂಟ್ 'ಪಠಾಣ್' ಆಗಿ ಕಿಂಗ್ ಖಾನ್ ಅಬ್ಬರಿಸಿದ್ದರು.


Click it and Unblock the Notifications











