For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್ 'ರಾಧೇ' ಚಿತ್ರದ ಬಗ್ಗೆ ಹೀಗೊಂದು ಸುದ್ದಿ: ಸುಳ್ಳು ಎಂದ ನಿರ್ಮಾಪಕ

  |

  ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ನಟನೆಯ ರಾಧೇ ಸಿನಿಮಾ ರಿಲೀಸ್‌ಗಾಗಿ ಖಾನ್ ಅಭಿಮಾನಿಗಳು ಕಾಯ್ತಿದ್ದಾರೆ. 2021ರ ಈದ್ ಹಬ್ಬಕ್ಕೆ ರಾಧೇ ತೆರೆಕಾಣಲಿದೆ ಎಂದು ಸ್ವತಃ ಚಿತ್ರತಂಡ ಹೇಳಿದೆ.

  ಆದ್ರೆ, ಚಿತ್ರಮಂದಿರದಲ್ಲಿ ಬಿಡುಗಡೆಯಾಗುತ್ತಾ ಅಥವಾ ಒಟಿಟಿಯಲ್ಲಿ ತೆರೆಕಾಣುತ್ತಾ ಎಂಬ ಚರ್ಚೆ ನಡೆಯುತ್ತಿದೆ. ರಾಧೇ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗುತ್ತೆ ಎನ್ನುವ ಸುದ್ದಿ ಬಿಟೌನ್‌ನಲ್ಲಿ ಹರಿದಾಡುತ್ತಿದೆ. ಈ ಸುದ್ದಿ ತೀವ್ರವಾದಂತೆ ಚಿತ್ರತಂಡ ಸ್ಪಷ್ಟನೆ ನೀಡಿದೆ.

  ಸಲ್ಮಾನ್‌ಗೆ ಕೊರೊನಾ ಪರೀಕ್ಷೆ, ನಿಟ್ಟುಸಿರು ಬಿಟ್ಟ ಖಾನ್ ಕುಟುಂಬ

  ರಾಧೇ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗಲ್ಲ ಎಂದು ಚಿತ್ರದ ನಿರ್ಮಾಪಕ ಮಾಹಿತಿ ನೀಡಿದ್ದಾರೆ. 2021ರ ಈದ್ ಹಬ್ಬಕ್ಕೆ ಚಿತ್ರಮಂದಿರದಲ್ಲೇ ಸಿನಿಮಾ ಅದ್ಧೂರಿಯಾಗಿ ಬರಲಿದೆ ಎಂದು ತಿಳಿಸಿದ್ದಾರೆ.

  ಈ ಕುರಿತು ಖ್ಯಾತ ವಿಶ್ಲೇಶಕ ತರಣ್ ಆದರ್ಶ್ ಟ್ವೀಟ್ ಮಾಡಿದ್ದು, ''ವಿತರಕರ ವಲಯದಲ್ಲಿ ಕೇಳಿಬರುತ್ತಿರುವ ಸುದ್ದಿ ಸುಳ್ಳು, ರಾಧೇ ಸಿನಿಮಾ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ಮಾಪಕರು ಪ್ರಕಟಿಸಿದ್ದಾರೆ'' ಎಂದು ಹೇಳಿದ್ದಾರೆ.

  ಅಕ್ಟೋಬರ್‌ ತಿಂಗಳಲ್ಲಿ ಸಲ್ಮಾನ್ ಖಾನ್ ಚಿತ್ರೀಕರಣಕ್ಕೆ ಮರಳಿದ್ದರು. ಲಾಕ್‌ಡೌನ್‌ನಿಂದ ಬ್ರೇಕ್‌ನಲ್ಲಿದ್ದ ಸಲ್ಲು ಭಾಯ್ ಮತ್ತೆ ರಾಧೇ ಶೂಟಿಂಗ್ ಆರಂಭಿಸಿದ್ದರು. ಈ ಫೋಟೋ ಸಹ ಹಂಚಿಕೊಂಡಿದ್ದರು.

  ಧ್ರುವ ಸರ್ಜಾ ನೋಡಲು ಮುಗಿಬಿದ್ದ ಅಭಿಮಾನಿಗಳು | Dhruva Sarja | Filmibeat Kannada

  ಪ್ರಭುದೇವ ಈ ಚಿತ್ರ ನಿರ್ದೇಶನ ಮಾಡುತ್ತಿದ್ದು, ದಿಶಾ ಪಟಾನಿ, ರಣ್‌ದೀಪ್ ಹೂಡಾ, ಜಾಕಿ ಶ್ರಾಫ್ ನಟಿಸಿದ್ದಾರೆ. ಯಶ್ ರಾಜ್ ಫಿಲಂಸ್‌ ಜೊತೆ ಸೇರಿ ಸಲ್ಮಾನ್ ಖಾನ್ ಸಹೋದರ ಈ ಚಿತ್ರ ನಿರ್ಮಿಸುತ್ತಿದ್ದಾರೆ.

  English summary
  There was speculation in the exhibition sector that Radhe starring Salman Khan will skip theatrical release. Will stream on OTT directly. its false.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X