For Quick Alerts
  ALLOW NOTIFICATIONS  
  For Daily Alerts

  ವರ್ಷಕ್ಕೂ ಮುಂಚೆಯೇ ಅಭಿಮಾನಿಗಳಿಗೆ ಖುಷಿಯ ವಿಚಾರ ತಿಳಿಸಿದ ಸಲ್ಮಾನ್

  By Pavithra
  |

  ಕೃಷ್ಣ ಮೃಗ ಬೇಟೆ ಪ್ರಕರಣದಲ್ಲಿ ಜಾಮೀನು ಸಿಕ್ಕ ನಂತರ ಮತ್ತೆ ಸುದ್ದಿಯಲ್ಲಿದ್ದಾರೆ. ಹೌದು ಸಲ್ಮಾನ್ ಈಗ ಸುದ್ದಿ ಮಾಡುರುವುದು ಸಿನಿಮಾದ ವಿಚಾರದಲ್ಲಿ ಹೌದು ಸಲ್ಲು ಅಭಿನಯದ 'ಭರತ್' ಸಿನಿಮಾದ ಚಿತ್ರೀಕರಣ ಶುರುವಾಗಿದೆ. ಕೃಷ್ಣ ಮೃಗ ಪ್ರಕರಣದ ಮಧ್ಯೆ ಹತ್ತು ದಿನಗಳ ಕಾಲ ಸೈಲೆಂಟ್ ಆಗಿದ್ದ ಸಲ್ಮಾನ್ ಸದ್ಯ ತಮ್ಮ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದಾರೆ.

  ಬಿಟೌನ್ ನಲ್ಲಿ ಹಿಟ್ ಕಾಂಬಿನೇಶನ್ ಆಗಿರುವ ಅಬ್ಬಾಸ್ ಅಲಿ ಮತ್ತು ಸಲ್ಲು ಜೋಡಿ 'ಭರತ್' ಸಿನಿಮಾ ಮೂಲಕ ಮತ್ತೆ ಒಂದಾಗಿದ್ದಾರೆ. ಈ ಹಿಂದೆ. ಸುಲ್ತಾನ್ ಹಾಗೂ ಟೈಗರ್ ಜಿಂದಾ ಹೈ ಸಿನಿಮಾವನ್ನ ನಿರ್ದೇಶನ ಮಾಡಿದ್ದ ಅಬ್ಬಾಸ್ ಅಲಿ ಭರತ್ ಸಿನಿಮಾಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. 'ಭರತ್' ಸಿನಿಮಾ ಚಿತ್ರೀಕರಣ ಸೆಟ್ ನಲ್ಲಿರುವ ಫೋಟೋವನ್ನ ನಿರ್ದೇಶಕ ಅಬ್ಬಾಸ್ ಅಲಿ ಟ್ವಿಟ್ಟರ್ ನಲ್ಲಿ ಹಾಕಿಕೊಂಡಿದ್ದಾರೆ.

  ಜೈಲಿನಲ್ಲಿ ಎರಡು ರಾತ್ರಿ ಕಳೆದ ಬಳಿಕ ಮನೆಗೆ ಮರಳಿದ ಸಲ್ಮಾನ್ ಖಾನ್ ಜೈಲಿನಲ್ಲಿ ಎರಡು ರಾತ್ರಿ ಕಳೆದ ಬಳಿಕ ಮನೆಗೆ ಮರಳಿದ ಸಲ್ಮಾನ್ ಖಾನ್

  ಸಲ್ಮಾನ್ ಅಭಿಮಾನಿಗಳಿಗೆ ಮುಂದಿನ ವರ್ಷ 'ಈದ್' ಹಬ್ಬಕ್ಕೆ ಭರತ್ ಸಿನಿಮಾವನ್ನ ರಿಲೀಸ್ ಮಾಡಲು ಚಿತ್ರತಂಡ ಈಗಾಗಲೇ ಪ್ಲಾನ್ ಮಾಡಿದೆ. ಇನ್ನು ಸಿನಿಮಾದಲ್ಲಿ ಇಬ್ಬರು ನಾಯಕಿಯರು ಇರಲಿದ್ದಾರೆ ಎನ್ನುವುದು ತಿಳಿದು ಬಂದಿದ್ದು ಪ್ರಿಯಾಂಕ ಚೋಪ್ರ ಹಾಗೂ ಕತ್ರಿನಾ ಅಭಿನಯಿಸುವ ಸಾಧ್ಯತೆಗಳು ಹೆಚ್ಚಾಗಿವೆಯಂತೆ.

  ಒಟ್ಟಾರೆ ಎಷ್ಟೇ ನೆಗೆಟಿವ್ ಸುದ್ದಿ ಆದರೂ ಕೂಡ ಸಲ್ಲು ಮಾತ್ರ ತಾನಾಯ್ತು ತನ್ನ ನಂಬಿರುವ ನಿರ್ಮಾಪಕರಾಯ್ತು ಎನ್ನುವ ನಿಟ್ಟಿನಲ್ಲಿ ಸಿನಿಮಾದ ಚಿತ್ರೀಕರಣದಲ್ಲಿ ಭಾಗಿ ಆಗಿರುವುದು ಬಾಲಿವುಡ್ ನಿರ್ಮಾಪಕರಿಗೆ ಖುಷಿ ತಂದಿದೆ.

  English summary
  Bollywood actor Salman Khan started shooting for Ali Abbas Zafar’s Bharat, This will be the director's third outing with Salman, with whom he has worked with in Sultan and Tiger Zinda Hai. Bharat will release on Eid 2019.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X