For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್ ಗೆ ಜೀವ ಬೆದರಿಕೆ: ಶೂಟಿಂಗ್ ರದ್ದು

  By Bharath Kumar
  |

  ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಗೆ ಜೀವ ಬೆದರಿಕೆಯಿದ್ದು, ಪೊಲೀಸರು ರಕ್ಷಣೆ ನೀಡಿದ್ದಾರೆ. ಮುಂಬೈನ ಫಿಲ್ಮ್ ಸಿಟಿಯಲ್ಲಿ ಹೊಸ ಚಿತ್ರದ ಚಿತ್ರೀಕರಣದಲ್ಲಿದ್ದ ಸಲ್ಮಾನ್ ಖಾನ್, ಚಿತ್ರದ ಶೂಟಿಂಗ್ ನ್ನ ಸ್ಥಗಿತಗೊಳಿಸಿ, ಪೊಲೀಸರ ರಕ್ಷಣೆಯಲ್ಲಿ ಮನೆಗೆ ತೆರಳಿದ್ದಾರೆ.

  ರಾಜಾಸ್ತಾನ ಮೂಲದ ಗ್ಯಾಂಗ್ ಸ್ಟರ್ ಗಳಿಂದ ಸಲ್ಲುಗೆ ಪ್ರಾಣ ಬೆದರಿಕೆ ಬಂದಿದೆ ಎಂದು ಸಲ್ಮಾನ್ ಖಾನ್ ಅವರ ತಂದೆ ಸ್ಪಷ್ಟಪಡಿಸಿದ್ದಾರೆ. ರಾಜಾಸ್ತಾನದ ಲಾರೆನ್ಸ್ ಬಿಷ್ಣೋಯಯ್ ಜೀವ ಬೆದರಿಕೆಯೊಡ್ಡಿದ್ದಾರಂತೆ.

  ಕೃಷ್ಣಮೃಗ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಸಲ್ಮಾನ್ ಖಾನ್ ಅವರನ್ನ ಕೊಲ್ಲಲು ಸಂಚು ರೂಪಸಿದ್ದಾರೆ ಎನ್ನಲಾಗಿದೆ. ಇತ್ತೀಚೆಗೆ ಜೋಧ್ ಪುರ್ ದ ಕೋರ್ಟ್ ಬಳಿ ಹೋಗಿದ್ದ ಸಲ್ಮಾನ್ ಮೇಲೆ ದಾಳಿ ಮಾಡಲು ಯತ್ನ ನಡೆದಿತ್ತು ಎಂಬ ಮಾಹಿತಿಯನ್ನ ಪೊಲೀಸರು ತಿಳಿಸಿದ್ದಾರೆ.

  ಸಲ್ಮಾನ್ ಬಾಮೈದನ ಚಪ್ಪಲಿ ಬೆಲೆಯಲ್ಲಿ ದುಬೈಗೆ ಹೋಗ್ಬಹುದಂತೆ

  ಅಷ್ಟೇ ಅಲ್ಲದೇ, 'ರೇಸ್-3' ಚಿತ್ರೀಕರಣದ ಸಂದರ್ಭದಲ್ಲಿ ಅನುಮಾನಸ್ಪದ ವ್ಯಕ್ತಿಗಳು ಕಂಡು ಬಂದ ಕಾರಣ, ಚಿತ್ರತಂಡ ಸ್ಥಳೀಯ ಪೊಲೀಸರ ಗಮನಕ್ಕೆ ತಂದಿದೆ. ನಂತರ ಸ್ಥಳಕ್ಕೆ ಬಂದ ಪೊಲೀಸರು ಸಲ್ಲು ಮತ್ತು ಚಿತ್ರದ ನಿರ್ಮಾಪಕರನ್ನ ಸುರಕ್ಷಿತವಾಗಿ ಮನೆಗೆ ಬಿಟ್ಟಿದ್ದಾರೆ.

  ಅಂದ್ಹಾಗೆ, 'ರೇಸ್-3' ಚಿತ್ರಕ್ಕೆ ಖ್ಯಾತ ಕೊರಿಯೋಗ್ರಾಫರ್ ರೆಮೋ ಡಿಸೋಜಾ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಸಲ್ಮಾನ್ ಜೊತೆ ಜಾಕ್ವೆಲಿನ್ ಫರ್ನಾಂಡೀಸ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇನ್ನುಳಿದಂತೆ ಅನಿಲ್ ಕಪೂರ್, ಡೈಸಿ ಶಾ, ಬಾಬಿ ಡಿಯೋಲ್ ಸೇರಿದಂತೆ ಇತರರು ಅಭಿನಯಿಸಿದ್ದಾರೆ.

  English summary
  Bollywood superstar Salman Khan received another death threat, after which the shooting of his upcoming film Race 3 has been halted, in Film City, Mumbai.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X