»   » ಸಲ್ಮಾನ್ ಖಾನ್ ಗೆ ಬುದ್ಧಿ ಹೇಳುವವರು ಯಾರಿದ್ದಾರೆ?

ಸಲ್ಮಾನ್ ಖಾನ್ ಗೆ ಬುದ್ಧಿ ಹೇಳುವವರು ಯಾರಿದ್ದಾರೆ?

Posted By:
Subscribe to Filmibeat Kannada
ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಗೆ ಸರಿಯಾಗಿ ಬುದ್ಧಿ ಹೇಳುವವರು ಯಾರಿದ್ದಾರೆ. ಅವರು ತಮ್ಮ ಆರೋಗ್ಯಕ್ಕೆ ಸಂಬಂಧಿಸಿದಂತೆ ಬಹಳಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರೂ ಶೂಟಿಂಗ್ ಬಗ್ಗೆಯೇ ಗಮನ ನೀಡುತ್ತಿದ್ದಾರೆ. ತಮ್ಮ ಆರೋಗ್ಯವನ್ನು ಅಲಕ್ಷಿಸಿ ವೃತ್ತಿಯ ಬಗ್ಗೆ ಮಾತ್ರ ಸಲ್ಮಾನ್ ಯೋಚಿಸುತ್ತಿರುವುದು ಅವರ ಅಭಿಮಾನಿಗಳಿಗೆ ಕಳವಳ ತಂದಿದೆ.

ತಮ್ಮ ಫೇವರೆಟ್ ನಟ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದಾರೂ ಶುಶ್ರೂಷೆ ತೆಗೆದುಕೊಳ್ಳದೇ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿರುವುದು ಸಲ್ಲೂ ಅಭಿಮಾನಿಗಳಿಗೆ ನುಂಗಲಾರದ ತುತ್ತಾಗಿದೆ. ವೈದ್ಯರ ಪ್ರಕಾರ ಸಲ್ಲು ಅವರಿಗೆ ಶಸ್ತ್ರಚಿಕಿತ್ಸೆ ಅಗತ್ಯವಿದೆ. ಆದರೆ ಸಲ್ಲೂ ಅದನ್ನು ಮುಂದೂಡುತ್ತಾ ನಿರಂತರವಾಗಿ ಚಿತ್ರೀಕರಣದಲ್ಲಿ ಪಾಲ್ಗೊಳ್ಳುತ್ತಿದ್ದಾರೆ.

ಬಾಲಿವುಡ್ಡಿನಿಂದ ಬಂದ ಸುದ್ದಿ ಪ್ರಕಾರ, ಸಲ್ಲೂ ಆಕ್ಷನ್ ದೃಶ್ಯಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಅಷ್ಟೇ ಅಲ್ಲ, ಅವರಿಗೆ ಬಹಳಷ್ಟು ವಿಶ್ರಾಂತಿಯ ಅಗತ್ಯವಿದೆ. ಆದರೆ ಸಲ್ಲೂ, ವೈದ್ಯರ ಮಾತೂ ಸೇರಿ ಯಾರ ಮಾತನ್ನೂ ಕಿವಿಗೆ ಹಾಕಿಕೊಳ್ಳುತ್ತಿಲ್ಲ. ಅವರಿಗೆ ಯಾರಾದರೂ ಈ ಬಗ್ಗೆ ಸರಿಯಾಗಿ ಬುದ್ಧಿ ಹೇಳಿದರೆ ಒಳ್ಳೆಯದು ಎಂಬುದು ಅಭಿಮಾನಿಗಳ ಅಳಲು.

ಆದರೆ ಈ ಬಗ್ಗೆ ಸಲ್ಲೂ ಏನು ಹೇಳುತ್ತಾರೆ ಗೊತ್ತೇ? "ನನಗೆ ಆರೋಗ್ಯದಲ್ಲಿ ಸಮಸ್ಯೆ ಇರುವುದು ನಿಜ. ಸಾಹಸ ದೃಶ್ಯಗಳಲ್ಲಿ ಪಾಲ್ಗೊಳ್ಳದಿರುವಂತೆ ವೈದ್ಯರು ಸೂಚಿಸಿರುವುದೂ ನಿಜ. ಆದರೆ ಅಭಿಮಾನಿಗಳು ಹಾಗೂ ಮಾಧ್ಯಮಗಳು ಅಂದುಕೊಂಡಷ್ಟು ನನಗೇನೂ ಆಗಿಲ್ಲ. ಎಲ್ಲರೂ ಆ ಬಗ್ಗೆ ಚಿಂತಿಸುವುದನ್ನು ಬಿಟ್ಟುಬಿಡಿ. ಅದನ್ನೇ ದೊಡ್ಡದು ಮಾಡಬೇಡಿ. ಸಮಸ್ಯೆಗಳ ಹೆಚ್ಚು ಯೋಚಿಸಬಾರದು" ಎಂದು ಮಾರ್ಮಿಕವಾಗಿ ನುಡಿದಿದ್ದಾರೆ.

ನನಗಿಂತ ಹೆಚ್ಚು ಸಮಸ್ಯೆಗಳಿರುವವರು ಹಾಗೂ ಒತ್ತಡದಿಂದ ಬಳಳುತ್ತಿರುವವರು ಸಾಕಷ್ಟು ಜನರಿದ್ದಾರೆ. ದಯವಿಟ್ಟು ಅವರ ಬಗ್ಗೆ ಅನುಕಂಪ ವ್ಯಕ್ತಪಡಿಸಿ, ಅವರಿಗೆ ಸಾಂತ್ವನ ಹೇಳಿ. ಅವರ ಮನಸ್ಸು ಹೊಸ ಚೈತನ್ಯ ತುಂಬಿಕೊಂಡು ಹೊಸ ಹರ್ಷದಿಂದ ಪುಟಿದೇಳುತ್ತದೆ. ನನ್ನ ಅನಾರೋಗ್ಯದ ಬಗ್ಗೆ ಹೆಚ್ಚು ಚಿಂತಿಸಬೇಡಿ, ಎಲ್ಲವೂ ಸರಿಹೋಗುತ್ತದೆ" ಎಂದು ಆಭಿಮಾನಿಗಳಿಗೆ ಧೈರ್ಯ ತುಂಬಿರುವ ಸಲ್ಲೂಗೆ 'ಭೇಷ್' ಎನ್ನಲೇಬೇಕು. (ಏಜೆನ್ಸೀಸ್)

English summary
Bollywood Superstar Salman Khan has been suffering from certain health issues. In fact, he has to undergo surgery and couldn't do action sequences for his films. But, now it looks like the actor is not much concerned about his health and taking it lightly.
 
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada