ಸಲ್ಲೂ ಮಿಯಾ ಕೈ ಹಿಡಿದ 'ರಿಮೇಕ್ ' ದೇವ

By Mahesh

Surya and Salman
ಬಾಲಿವುಡ್ 'ಟೈಗರ್' ಸಲ್ಮಾನ್ ಖಾನ್ ಮತ್ತೊಮ್ಮೆ ರಿಮೇಕ್ ಚಿತ್ರದತ್ತ ಕಣ್ಣು ಹಾಯಿಸಿದ್ದಾರೆ. ತೆಲುಗಿನ 'ಕಿಕ್' ಚಾಲ್ತಿಯಲ್ಲಿರುವಂತೆಯೇ ದಕ್ಷಿಣ ಭಾರತದ ವೆರೈಟಿ ಸ್ಟಾರ್ ಸೂರ್ಯ ಅಭಿನಯದ 'ಅಯನ್' ಚಿತ್ರವನ್ನು ಬಾಲಿವುಡ್ ಗೆ ತರಲಾಗುತ್ತಿದೆ. ಸೂರ್ಯ ಹಾಗೂ ತಮನ್ನಾ ಅಭಿನಯಿಸಿದ ಅಯನ್ ಚಿತ್ರ ಗಳಿಕೆಯಲ್ಲೂ ಜನಪ್ರಿಯತೆಯಲ್ಲೂ ಉತ್ತಮ ಅಂಕಗಳಿಸಿ ಪಾಸ್ ಆಗಿತ್ತು.

ಈಗ ಸಲ್ಮಾನ್ ಖಾನ್ ಗೆ ಈ ಚಿತ್ರ ಹೇಳಿ ಮಾಡಿಸಿದ ಹಾಗೆ ಇದೆ ಎಂದು ರಿಮೇಕ್ ಚಿತ್ರ ನಿರ್ದೇಶಕ ಪ್ರಭುದೇವ ಅವರಿಗೆ ಅನಿಸಿಬಿಟ್ಟಿದೆ. ಸಲ್ಮಾನ್ ಖಾನ್ ಗಾಗಿ ದಕ್ಷಿಣ ಭಾರತದ ಚಿತ್ರಗಳನ್ನು ಸಾಲು ಸಾಲಾಗಿ ಹಿಂದಿಗೆ ತರಲು ಪ್ರಭುದೇವ 'ರೆಡಿ' ಆಗುತ್ತಿದ್ದಾರೆ.

ತೆಲುಗಿನ ಪೊಕಿರಿ ಚಿತ್ರ ಹಿಂದಿಯಲ್ಲಿ ವಾಂಟೆಡ್ ಆಗಿ ಹಿಟ್ ಆಗಿದ್ದೇ ತಡ ಸಲ್ಮಾನ್ ಗಾಗಿ ಪ್ರಭುದೇವ ತೆಲುಗು, ತಮಿಳು ಚಿತ್ರಗಳ ರೈಟ್ ಪಡೆಯುತ್ತಿದ್ದಾರೆ.

ಲಭ್ಯ ಮಾಹಿತಿಯಂತೆ ಸಲ್ಮಾನ್ ಖಾನ್ ಅವರಿಗಾಗಿ ತಮಿಳಿನ ಅಯನ್ ಅಲ್ಲದೆ, ಸಂಥಿಂಗ್ ಸಂಥಿಂಗ್, ಉನ್ನಕುಂ ಎನ್ನಕುಂ ಅಲ್ಲದೆ ನೀ ವಸ್ತಾನಂಟೆ ನೇ ಒದ್ದಾಂಟಾನಾ(ತೆಲುಗು) ಚಿತ್ರ ಕೂಡ ಕಾದಿದೆ. ಈ ಪೈಕಿ ಉನ್ನಕುಂ ಚಿತ್ರಕ್ಕೆ ಗಿರೀಶ್ ಕುಮಾರ್ ಎಂಬ ಹೊಸ ಯುವಕನೊಂದಿಗೆ ಶ್ರುತಿ ಹಾಸನ್ ಕುಣಿಸಲು ಪ್ರಭು ಸಿದ್ಧತೆ ನಡೆಸಿದ್ದಾರೆ ಎಂಬ ಸುದ್ದಿಯಿದೆ.

ಈ ನಡುವೆ ಸಲ್ಮಾನ್ ಖಾನ್ 'ಕಿಕ್' ಚಿತ್ರದ ನಾಯಕಿ ಸ್ಥಾನಕ್ಕಾಗಿ ಬೆಂಗಳೂರಿನ ಅನುಷ್ಮಾ ಶರ್ಮ ಹಾಗೂ ದೀಪಿಕಾ ಪಡುಕೋಣೆ ನಡುವೆ ತೀವ್ರ ಪೈಪೋಟಿ ನಡೆದಿದೆಯಂತೆ. ಖಾಲಿ ಕುಳಿತಿರುವ ಅನುಷ್ಕಾಳಿಗೆ ಈ ಪಾತ್ರ ಒಲಿಯುವ ಸಾಧ್ಯತೆಯೂ ಇದೆ ಎನ್ನಲಾಗಿದೆ.

ಪ್ರಭುದೇವ ಯಶಸ್ಸು: 2005 ರಲ್ಲಿ ನೀ ವಸ್ತಾನಂಟೆ ನೇ ಒದ್ದಾಂಟಾನಾ ಎಂಬ ರೀಮಿಕ್ಸ್ ಚಿತ್ರ ಮಾಡಿ ಗೆದ್ದಿದ್ದ ಪ್ರಭುದೇವ ರಾತ್ರಿ ಕಳೆದು ಬೆಳಕು ಹರಿಯುವುದರೊಳಗೆ ನಿರ್ದೇಶಕನ ಕ್ಯಾಪ್ ಧರಿಸಿ ಮಿಂಚಿಬಿಟ್ಟರು.

ನಂತರ ಪೌರ್ಣಮಿ, ಪೊಕಿರಿ, ವಾಂಟೆಂಡ್, ರೌಡಿ ರಾಥೋರ್ ಹೆಸರು ತಂದು ಕೊಟ್ಟಿದೆ. ಶಹೀದ್ ಕಪೂರ್, ಕತ್ರೀನಾ ಕೈಫ್ ಹಾಕಿಕೊಂಡು ನಮಕ್ ಎಂಬ ಚಿತ್ರ ನಿರ್ದೇಶಿಸುವುದಾಗಿ ಕೂಡಾ ಪ್ರಭು ಘೋಷಿಸಿದ್ದಾರೆ.

More from Filmibeat

English summary
Bollywood superstar Salman Khan's love for remake movie continues, as he has reportedly given nod for yet another remake of successful South movie. The buzz is that the actor will be starring in the Hindi version of Tamil superhit movie Ayan, which starred Surya (Rakta Chatrira fame).
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X