ಸಲ್ಮಾನ್ ಗೆ ಸಿಟ್ಟು ಬಂದಿದ್ಯಾ, ಅಥವಾ ಕ್ಯಾರೇ ಅಂತಿಲ್ವಾ? ಒಂದೂ ಅರ್ಥ ಆಗ್ತಿಲ್ಲ.!

By Harshitha

ಒಮ್ಮೊಮ್ಮೆ ಸಲ್ಮಾನ್ ಖಾನ್ ಮಾತನಾಡುವುದನ್ನು ಕೇಳಿದ್ರೆ, ಅವರಿಗೆ ಸಿಟ್ಟು ಬಂದಿದ್ಯೋ, ಇಲ್ಲ ಲೇವಡಿ ಮಾಡುತ್ತಿದ್ದಾರೋ, ಅಥವಾ ನಾಜೂಕಾಗಿ ಛೀಮಾರಿ ಹಾಕುತ್ತಿದ್ದಾರೋ ಅನ್ನೋದೇ ಗೊತ್ತಾಗುವುದಿಲ್ಲ. ಮೊನ್ನೆ ಪ್ರೆಸ್ ಮೀಟ್ ನಲ್ಲೂ ಆಗಿದ್ದು ಇದೇ.!

'ದಸ್ ಕಾ ಧಮ್' ಎಂಬ ರಿಯಾಲಿಟಿ ಶೋನ ಹೊಸ ಆವೃತ್ತಿಯ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಸಲ್ಮಾನ್ ಖಾನ್ ಪಾಲ್ಗೊಂಡರು. ಆಗ ಪತ್ರಕರ್ತರೊಬ್ಬರು 'ರೇಸ್-3' ಚಿತ್ರದ ಟ್ರೈಲರ್ ಟ್ರೋಲ್ ಗೆ ಒಳಗಾಗಿರುವ ಬಗ್ಗೆ ಸಲ್ಮಾನ್ ಖಾನ್ ಗೆ ಪ್ರಶ್ನಿಸಿದರು.

ಅದಕ್ಕೆ ಸಲ್ಮಾನ್ ಖಾನ್ ಕೊಟ್ಟ ಉತ್ತರ ಏನ್ ಗೊತ್ತಾ.? ''ಒಂದಿಬ್ಬರು ಫಾಲೋವರ್ ಗಳನ್ನು ಇಟ್ಟುಕೊಂಡಿರುವವರು ಬಾಯಿಗೆ ಬಂದ ಹಾಗೆ ಮಾತನಾಡುತ್ತಾರಲ್ಲ, ಅದಕ್ಕೆ ಟ್ರೋಲಿಂಗ್ ಅಂತಾರಾ.? ಈ ಟ್ರೋಲ್ ಗಳನ್ನೆಲ್ಲ ಕಂಟ್ರೋಲ್ ಮಾಡುವವರು ಯಾರು.? ನಿಮಗೆ ಗೊತ್ತಾ.? ಇಲ್ವಾ.? ಹೌ ಸ್ಯಾಡ್. ಮೂರ್ನಾಲ್ಕು ಜನ ಫಾಲೋವರ್ ಗಳನ್ನು ಇಟ್ಟುಕೊಂಡು ಕಾಮೆಂಟ್ ಮಾಡೋದನ್ನೆಲ್ಲ ಟ್ರೋಲಿಂಗ್ ಅಂತ ಪರಿಗಣಿಸಲು ಸಾಧ್ಯ ಇಲ್ಲ'' ಅಂತ ತಮ್ಮದೇ ಸ್ಟೈಲ್ ನಲ್ಲಿ ಸಲ್ಮಾನ್ ಖಾನ್ ಉತ್ತರಿಸಿದರು.

ಇಷ್ಟೇ ಆಗಿದ್ರೆ ಪರ್ವಾಗಿಲ್ಲ. ಮತ್ತೊಬ್ಬರು ಪತ್ರಕರ್ತರು ಸಲ್ಮಾನ್ ಖಾನ್ ಗೆ ''ಹಾಯ್'' ಎಂದರು ಅಷ್ಟೇ. ಅಷ್ಟರಲ್ಲಾಗಲೇ 'ಟ್ರೋಲ್' ಪ್ರಶ್ನೆ ಬಗ್ಗೆ ಕೊಂಚ ಗರಂ ಆದಂತೆ ಕಂಡ ಸಲ್ಮಾನ್ ''ಹಲೋ.. ಹಾಯ್'' ಅಂತ ರಾಗವಾಗಿ ನುಡಿದರು.

Salman Khan takes a major dig at trollers who trolled race 3 trailer

ಸಾಲದಕ್ಕೆ, 'ರೇಸ್ 3' ಚಿತ್ರದಲ್ಲಿ 'ಸೆಲ್ಫಿಶ್' ಎಂಬ ಹಾಡಿಗೆ ಸಲ್ಮಾನ್ ಖಾನ್ ಸಾಹಿತ್ಯ ಬರೆದಿದ್ದಾರೆ. ಅದನ್ನ ನೆನೆಯುತ್ತಾ ''ಸೆಲ್ಫಿಶ್ ಹಾಡನ್ನ ಬರೆದಿರೋದು ನಾನೇ. ಅದಿನ್ನೂ ರಿಲೀಸ್ ಆಗಿಲ್ಲ. ಸದ್ಯದಲ್ಲೇ ಆ ಹಾಡು ಬಿಡುಗಡೆ ಆಗುತ್ತೆ. ಆಮೇಲೆ ಟ್ರೋಲ್ ಆಗುತ್ತೆ'' ಎಂದುಬಿಟ್ಟರು ಸಲ್ಮಾನ್ ಖಾನ್.

ಸಲ್ಮಾನ್ ಖಾನ್ ಕೊಟ್ಟ ಈ ಪ್ರತಿಕ್ರಿಯೆ ಕೇಳಿ, ಪತ್ರಕರ್ತರಂತೂ ತಲೆಗೆ ಹುಳ ಬಿಟ್ಟುಕೊಂಡಿದ್ದಾರೆ. ಟ್ರೋಲಿಂಗ್ ಬಗ್ಗೆ ಸಲ್ಮಾನ್ ಖಾನ್ ಕೂಲ್ ಆಗಿದ್ದಾರೋ, ಇಲ್ವೋ ಎಂಬ ಸ್ಪಷ್ಟ ಉತ್ತರ ಪತ್ರಕರ್ತರಿಗೆ ಸಿಗಲೇ ಇಲ್ಲ.

ಬಾಯ್ಮಾತಲ್ಲಿ ಟ್ರೋಲ್ ಬಗ್ಗೆ ಕ್ಯಾರೇ ಅನ್ನಲ್ಲ ಅಂತ ಸಲ್ಮಾನ್ ಖಾನ್ ಹೇಳಿದರೂ, ತಮ್ಮ ಸಿನಿಮಾಗಳ ಬಗ್ಗೆ ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಕೇವಲವಾಗಿ ಮಾತನಾಡುವುದು ಅವರಿಗೆ ಬೇಸರ ತರಿಸಿದ್ಯೇನೋ.?!

ಅಂದ್ಹಾಗೆ, ರೆಮೋ ಡಿ ಸೋಜಾ ನಿರ್ದೇಶನದ 'ರೇಸ್-3' ಸಿನಿಮಾ ಜೂನ್ 15, 2018 ರಂದು ಬಿಡುಗಡೆ ಆಗಲಿದೆ. ಈ ಚಿತ್ರದಲ್ಲಿ ಸಲ್ಮಾನ್ ಜೊತೆಗೆ ಅನಿಲ್ ಕಪೂರ್, ಜಾಕ್ವೆಲಿನ್ ಫರ್ನಾಂಡಿಸ್, ಬಾಬಿ ಡಿಯೋಲ್, ಡೈಸಿ ಶಾ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.

More from Filmibeat

English summary
Bollywood Actor Salman Khan takes a major dig at trollers who trolled Race 3 trailer.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X