ಸಲ್ಲು ಶರ್ಟ್‌ಲೆಸ್ ಆದ್ರೆ ಸಿನಿಮಾ ಹಿಟ್? ಗ್ರಾಫಿಕ್ಸ್ ಎಂದವರಿಗೆ ಶರ್ಟ್ ಬಿಚ್ಚಿ ಸಿಕ್ಸ್‌ಪ್ಯಾಕ್ ತೋರಿಸಿದ ಭಾಯ್ಜಾನ್

ಬಾಲಿವುಡ್‌ನಲ್ಲಿ ಸಿಕ್ಸ್‌ಪ್ಯಾಕ್ ಟ್ರೆಂಡ್ ಶುರು ಮಾಡಿದರವರು ಸಲ್ಮಾನ್ ಖಾನ್. ಅದಕ್ಕೂ ಮುನ್ನ ಸಾಕಷ್ಟು ಜನ ಈ ಪ್ರಯತ್ನ ಮಾಡಿದ್ರು ಯಾರು ಸಕ್ಸಸ್ ಆಗಿರಲಿಲ್ಲ. 'ಪ್ಯಾರ್ ಕಿಯಾ ತೋ ಡರ್‌ನಾ ಕ್ಯಾ' ಚಿತ್ರದ ಹಾಡೊಂದರಲ್ಲಿ ಸಲ್ಲು ಸಿಕ್ಸ್‌ಪ್ಯಾಕ್ ತೋರಿಸುತ್ತಾ ಬಿಂದಾಸ್ ಹೆಜ್ಜೆ ಹಾಕಿದ್ದರು. ಅಲ್ಲಿಂದ ಮುಂದೆ ಹಲವು ಸಿನಿಮಾಗಳಲ್ಲಿ ಸಲ್ಲುಮಿಯಾ ಶರ್ಟ್‌ಲೆಸ್ ಆಗಿ ಕಾಣಿಸಿಕೊಂಡಿದ್ದಾರೆ.

ಸದ್ಯ ಸಲ್ಮಾನ್ ಖಾನ್ ನಟನೆಯ 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾ ರಿಲೀಸ್‌ಗೆ ರೆಡಿಯಾಗಿದೆ. ಚಿತ್ರದ ಟ್ರೈಲರ್ ರಿಲೀಸ್ ಆಗಿ ಸಖತ್ ಸದ್ದು ಮಾಡ್ತಿದೆ. ಕ್ಲೈಮ್ಯಾಕ್ಸ್ ಫೈಟ್‌ನಲ್ಲಿ ಸಲ್ಲು ಶರ್ಟ್‌ಲೆಸ್‌ ಆಗಿ ದರ್ಶನ್ ಕೊಟ್ಟಿದ್ದಾರೆ. ಈಗ ಸಲ್ಲು ವಯಸ್ಸು 57 ವರ್ಷ. ಈ ವಯಸ್ಸಿನಲ್ಲಿ ಸಿಕ್ಸ್‌ಪ್ಯಾಕ್ ಮಾಡೋದು, ಜಿಮ್ ಬಾಡಿ ಮೆಂಟೇನ್ ಮಡೋದು ಅಂದು ತಮಾಷೆ ಮಾತಲ್ಲ. ಫಿಟ್ನೆಸ್ ವಿಚಾರದಲ್ಲಿ ಭಾಯ್ಜಾನ್ ಯುವ ನಟರಿಗೆ ಇನ್‌ಸ್ಪಿರೇಷನ್ ಅಂತಲೇ ಹೇಳಬಹುದು.

Salman Khan taking off his shirt to show off his six Pack on Kisi Ka Bhai Kisi Ki Jaan Event stage

ಇನ್ನು ಸಲ್ಲು ಶರ್ಟ್‌ಲೆಸ್ ಆಗಿ ಕಾಣಿಸಿಕೊಂಡರೆ ಸಿನಿಮಾ ಹಿಟ್ ಅನ್ನುವ ವಿಚಿತ್ರ ನಂಬಿಕೆ ಕೂಡ ಬಾಲಿವುಡ್‌ನಲ್ಲಿದೆ. ಇದೇ ಕಾರಣಕ್ಕೆ ಚಿತ್ರಕ್ಕೆ ಬೇಕೋ ಬೇಡ್ವೋ ವಿಲನ್ ಕೈಯಲ್ಲಿ ಏಟು ತಿಂದ ಸಲ್ಲು, ಶರ್ಟ್ ಹರ್ಕೊಂಡು ತಿರುಗಿಸಿ ಹೊಡೆಯೋದು ಅವರ ಚಿತ್ರಗಳಲ್ಲಿ ಕಾಮನ್ ಆಗ್ಬಿಟ್ಟಿದೆ. 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಚಿತ್ರದಲ್ಲೂ ಒನ್ಸ್ ಅಗೇನ್ ಸಲ್ಲು ಶರ್ಟ್‌ಲೆಸ್‌ ಆಗಿ ಸಿಕ್ಸ್‌ಪ್ಯಾಕ್ ಪ್ರದರ್ಶಿಸಿದ್ದಾರೆ.

ಸಲ್ಲು ಈ ರೀತಿ ಸಿಕ್ಸ್ ಪ್ಯಾಕ್ ಪ್ರದರ್ಶಿಸಿದಾಗ ಅದೆಲ್ಲಾ ಗ್ರಾಫಿಕ್ಸ್ ಅನ್ನೋ ಮಾತು ಇತ್ತೀಚೆಗೆ ಕೇಳಿ ಬರ್ತಿದೆ. ಇದೇ ವಿಚಾರವನ್ನಿಟ್ಟುಕೊಂಡು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಮಾಡಲಾಗುತ್ತದೆ. 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾ ಟ್ರೈಲರ್ ಲಾಂಚ್ ವೇದಿಕೆಯಲ್ಲಿ ಸಲ್ಲು ಶರ್ಟ್ ಬಟನ್ ಬಿಚ್ಚಿ ಸಿಕ್ಸ್‌ಪ್ಯಾಕ್ ತೋರಿಸಿದ್ದಾರೆ. ಈ ಕಾರ್ಯಕ್ರಮದಲ್ಲೂ ಈ ಗ್ರಾಫಿಕ್ಸ್ ಎನ್ನುವ ಪ್ರಸ್ತಾಪ ಬಂದಿತ್ತು. ಈ ಕೂಡಲೇ ಟ್ರೋಲಿಗರಿಗೆ ತಿರುಗೇಟು ನೀಡಿದ್ದಾರೆ.

Salman Khan taking off his shirt to show off his six Pack on Kisi Ka Bhai Kisi Ki Jaan Event stage

"ನೀವು ಇದು(ಸಿಕ್ಸ್‌ ಪ್ಯಾಕ್) ವಿಎಫ್‌ಎಕ್ಸ್ ಸಹಾಯದಿಂದ ಮಾಡಿದ್ದಾರೆ ಎಂದುಕೊಂಡಿದ್ದೀರಾ. ಆದರೆ ಅಲ್ಲ, ನನಗೆ ಮೊದಲು ಫೋರ್ ಪ್ಯಾಕ್ಸ್ ಇತ್ತು. ಜಿಮ್ ಮಾಡ್ತಾ ಮಾಡ್ತಾ ಸಿಕ್ಸ್ ಪ್ಯಾಕ್ ಮಾಡ್ದೆ" ಎಂದು ಸಲ್ಮಾನ್ ಖಾನ್ ಹೇಳಿದ್ದಾರೆ. ಸದ್ಯ ಇದನ್ನು ನೋಡಿ ಸಲ್ಲು ಅಭಿಮಾನಿಗಳಂತೂ ಖುಷಿಯಾಗಿದ್ದಾರೆ. ಅಭಿಮಾನಿಯೊಬ್ಬ ಈ ವಿಡಿಯೋ ಶೇರ್ ಮಾಡಿ "ಆ ಕಾನ್ಫಿಡೆನ್ಸ್ ಇರಬೇಕು. ಟೀಕೆ ಮಾಡುವವರ ಮಾತುಗಳು ಸುಳ್ಳು ಎಂದು ಸಾಬೀತುಪಡಿಸಿದ್ದಾರೆ. ವಿಎಫ್‌ಎಕ್ಸ್ ಅಲ್ಲ. ಬಾಡಿ ಬಿಲ್ಡಿಂಗ್ ಮಾಡಿರೋದು" ಎಂದು ಬರೆದುಕೊಂಡಿದ್ದಾನೆ.

'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಸಿನಿಮಾ ಕುರಿತು ಹೇಳುವುದಾದರೆ ಇದು ತಮಿಳಿನ 'ವೀರಂ' ಸಿನಿಮಾ ರೀಮೆಕ್. ಕನ್ನಡದಲ್ಲಿ ದರ್ಶನ್ 'ಒಡೆಯ' ಹೆಸರಿನಲ್ಲಿ ರೀಮೆಕ್ ಮಾಡಿದ್ದರು. ಫರ್ಹಾದ್ ಸಮ್ಜಿ ಸಿನಿಮಾ ನಿರ್ದೇಶನ ಮಾಡಿದ್ದು ಸ್ವತಃ ಸಲ್ಮಾನ್ ಖಾನ್ ಬಂಡವಾಳ ಹೂಡಿದ್ದಾರೆ. ಪೂಜಾ ಹೆಗ್ಡೆ ನಾಯಕಿಯಾಗಿ ಸಾಥ್ ಕೊಟ್ಟಿದ್ದಾರೆ. ತೆಲುಗು ನಟರಾದ ವಿಕ್ಟರಿ ವೆಂಕಟೇಶ್ ಹಾಗೂ ಜಗಪತಿ ಬಾಬು ಕೂಡ ಮುಖ್ಯ ತಾರಾಗಣದಲ್ಲಿ ಇದ್ದಾರೆ.

ಸಲ್ಮಾನ್ ಖಾನ್ ಒಂದೊಳ್ಳೆ ಹಿಟ್ ಸಿನಿಮಾ ಕೊಟ್ಟು ಬಹಳ ದಿನಗಳಾಯಿತು. 'ಕಿಸಿ ಕಾ ಭಾಯ್ ಕಿಸಿ ಕಿ ಜಾನ್' ಪಕ್ಕಾ ಫ್ಯಾಮಿಲಿ ಎಂಟರ್‌ಟೈನರ್ ಸಿನಿಮಾ. ಆಕ್ಷನ್, ಎಮೋಷನ್, ಕಾಮಿಡಿ, ರೊಮ್ಯಾನ್ಸ್ ಎಲ್ಲವನ್ನು ಹದವಾಗಿ ಬೆರಸಿ ಮಾಡಿರುವಂತಹ ಸಿನಿಮಾ. ಈಗಾಗಲೇ ಚಿತ್ರದ ಸಾಂಗ್ಸ್, ಟ್ರೈಲರ್ ರಿಲೀಸ್ ಆಗಿ ಸೂಪರ್ ಹಿಟ್ ಆಗಿದೆ. ಈದ್ ಸ್ಪೆಷಲ್ ಆಗಿ ರಿಲೀಸ್ ಆಗುವ ಸಲ್ಮಾನ್ ಖಾನ್ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡುತ್ತವೆ. ಈ ಚಿತ್ರವನ್ನು ಕೂಡ ಈದ್ ಸಂಭ್ರಮದಲ್ಲೇ ಏಪ್ರಿಲ್ 21ಕ್ಕೆ ತೆರೆಗೆ ತರಲಾಗುತ್ತಿದೆ.

More from Filmibeat

English summary
Salman Khan taking off his shirt to show off his six Pack on Kisi Ka Bhai Kisi Ki Jaan Event stage. movie Scheduled to hit the big screen on April 21, coinciding with Eid. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X