For Quick Alerts
  ALLOW NOTIFICATIONS  
  For Daily Alerts

  ರುಚಿ ನೋಡಿ, ಗುಣಮಟ್ಟ ಪರೀಕ್ಷಿಸಿ ಆಹಾರ ಕಿಟ್ ವಿತರಿಸುತ್ತಿರುವ ಸಲ್ಮಾನ್ ಖಾನ್

  |

  ದೇಶದಲ್ಲಿ ಕೊರೊನಾ ಎರಡನೇ ಅಲೆ ಆತಂಕ ಸೃಷ್ಟಿಸಿದೆ. ಇಂಥ ಕಷ್ಟದ ಸಮಯದಲ್ಲಿ ಸಾಕಷ್ಟು ಮಂದಿ ಮುಂದೆ ಬಂದು ಸಹಾಯ ಮಾಡುತ್ತಿದ್ದಾರೆ.

  ಸಂಕಷ್ಟ ಕಾಲವನ್ನು ಎದುರಿಸಲು ಬಾಲಿವುಡ್ ನಟ ಸಲ್ಮಾನ್ ಖಾನ್ ಕೂಡ ನೆರವಾಗಿದ್ದಾರೆ. ಕಳೆದ ವರ್ಷ ಕಷ್ಟದಲ್ಲಿದ್ದ, ಒಂದ್ಹೊತ್ತಿನ ಊಟಕ್ಕೂ ಪರದಾಡುತ್ತಿದ್ದ ಕಾರ್ಮಿಕರಿಗೆ ಅಗತ್ಯ ವಸ್ತುಗಳನ್ನು ನೀಡುವ ಮೂಲಕ ಸಲ್ಮಾನ್ ಮಾನವೀಯ ಕೆಲಸ ಮಾಡಿದ್ದರು. ಈ ವರ್ಷವೂ ಸಲ್ಮಾನ್ ಕಾರ್ಮಿಕರ ನೆರವಿಗೆ ಧಾವಿಸಿದ್ದಾರೆ.

  ಗೌತಮ್ ಗಂಭೀರ್ ಫೌಂಡೇಶನ್‌ಗೆ 1 ಕೋಟಿ ನೆರವು ನೀಡಿದ ಅಕ್ಷಯ್ ಕುಮಾರ್ಗೌತಮ್ ಗಂಭೀರ್ ಫೌಂಡೇಶನ್‌ಗೆ 1 ಕೋಟಿ ನೆರವು ನೀಡಿದ ಅಕ್ಷಯ್ ಕುಮಾರ್

  ಆಹಾರ ಕಿಟ್‌ಗಳನ್ನು ವಿತರಿಸುವ ಮೂಲಕ ಕಾರ್ಮಿಕರ ಹಸಿವನ್ನು ನೀಗಿಸುತ್ತಿದ್ದಾರೆ. ಸಲ್ಮಾನ್ ಖಾನ್ ಅವರ ಬೀಯಿಂಗ್ ಹ್ಯೂಮನ್ ಫೌಂಡೇಶನ್ ವತಿಯಿಂದ ಸಹಾಯಕಾರ್ಯ ಮಾಡುತ್ತಿದ್ದಾರೆ. ಮುಂಬೈ ನಗರದಲ್ಲಿ ಆಹಾರ ಕಿಟ್ ವಿತರಿಸಲಾಗುತ್ತಿದ್ದು, ಪೊಲೀಸರು, ಬಿಎಂಸಿ ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರ ನೆರವಿಗೆ ಸಲ್ಮಾನ್ ಖಾನ್ ನಿಂತಿದ್ದಾರೆ. ಖುದ್ದು ಸಲ್ಮಾನ್ ಖಾನ್ ಅವರೇ ಆಹಾರ ಟ್ರಕ್‌ಗಳನ್ನು ಕಳುಹಿಸುತ್ತಿದ್ದಾರೆ. ಮುಂದೆ ಓದಿ...

  ಗುಣಮಟ್ಟ ಪರೀಕ್ಷಿಸಿ ಆಹಾರ ವಿತರಿಸುತ್ತಿರುವ ಸಲ್ಮಾನ್

  ಗುಣಮಟ್ಟ ಪರೀಕ್ಷಿಸಿ ಆಹಾರ ವಿತರಿಸುತ್ತಿರುವ ಸಲ್ಮಾನ್

  ಆಹಾರ ವಿತರಣೆ ಆಗುವ ಮೊದಲು ಆಹಾರ ಪ್ಯಾಕಿಂಗ್ ಸಮಯದಲ್ಲಿ ಖುದ್ದು ಸಲ್ಮಾನ್ ಖಾನ್ ಅವರೇ ನಿಂತು ಮಾಡಿಸುತ್ತಿದ್ದಾರೆ. ಅಲ್ಲದೆ ಗುಣಮಟ್ಟ ಪರೀಕ್ಷೆಗಾಗಿ ಸಲ್ಮಾನ್ ಖಾನ್ ಅವರೇ ರುಚಿ ನೋಡಿ ಪ್ಯಾಕಿಂಗ್ ಮಾಡಿಸುತ್ತಿದ್ದಾರೆ. ಸಲ್ಮಾನ್ ಖಾನ್ ರುಚಿ ನೋಡಿ ಆಹಾರ ಕಿಟ್‌ಗಳನ್ನು ಪ್ಯಾಕ್ ಮಾಡಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

  ಸಲ್ಮಾನ್ ಖಾನ್‌ಗೆ ಅಭಿಮಾನಿಗಳಿಂದ ಮೆಚ್ಚುಗೆ

  ಸಲ್ಮಾನ್ ಖಾನ್‌ಗೆ ಅಭಿಮಾನಿಗಳಿಂದ ಮೆಚ್ಚುಗೆ

  ಭಾನುವಾರ ಸಲ್ಮಾನ್ ಖಾನ್ ಫೌಂಡೇಶನ್ ವತಿಯಿಂದ 5000ರಕ್ಕೂ ಅಧಿಕ ಆಹಾರ ಕಿಟ್‌ಗಳನ್ನು ವಿತರಣೆ ಮಾಡಲಾಗಿದೆ. ಮುಂಬೈ ಪ್ರಮುಖ ಕೋವಿಡ್ ಕೇಂದ್ರಗಳಿಗೆ ಆಹಾರ ಪ್ಯಾಕೆಟ್‌ಗಳನ್ನು ಕಳುಹಿಸಿದ್ದಾರೆ. ಸಲ್ಮಾನ್ ಖಾನ್ ಅವರ ಈ ಮಾನವೀಯ ಕೆಲಸಕ್ಕೆ ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

  ಸಹಾಯವಾಣಿ ಪ್ರಾರಂಭ

  ಆಹಾರ ಕಿಟ್ ಹೊತ್ತ ಟ್ರಕ್‌ಗಳು ಮುಂಬೈ ನಗರದ ಕೆಲವು ಪ್ರದೇಶಗಳಲ್ಲಿ ಅಗತ್ಯವಿರುವವರಿಗೆ ವಿತರಿಸುತ್ತಿದೆ. ಕಿಟ್‌ನಲ್ಲಿ ಚಹಾ, ಶುದ್ಧ ನೀರು, ಬಿಸ್ಕತ್ ಪ್ಯಾಕ್, ಉಪ್ಪಿಟ್ಟು, ಪಾವ್ ಭಾಜಿ, ವಡಾ ಪಾವ್ ಇರಿಸಿಸಲಾಗಿದೆ. ಜೊತೆಗೆ ಸಹಾಯ ವಾಣಿಯನ್ನು ಪ್ರಾರಂಭಿಸಿದ್ದಾರೆ. ಅವಶ್ಯಕತೆ ಇರುವವರು ಕರೆ ಮಾಡಬಹುದು. ಅಲ್ಲಿಗೆ ಹೋಗಿ ಆಹಾರ ವಿತರಣೆ ಮಾಡಲು ಸಲ್ಮಾನ್ ಖಾನ್ ಟೀಂ ಸಿದ್ಧವಾಗಿದೆ.

  ಕೊರೊನಾ ಪಾಸಿಟಿವ್ ಬಂದಿರೋ ಮಕ್ಕಳನ್ನು ಮನೆಯಲ್ಲಿ ಕೇರ್ ಮಾಡೋದು ಹೇಗೆ? | Filmibeat Kannada
  1 ಕೋಟಿ ರೂ. ನೆರವು ನೀಡಿರುವ ಅಕ್ಷಯ್ ಕುಮಾರ್

  1 ಕೋಟಿ ರೂ. ನೆರವು ನೀಡಿರುವ ಅಕ್ಷಯ್ ಕುಮಾರ್

  ಇತ್ತೀಚಿಗೆ ನಟ ಅಕ್ಷಯ್ ಕುಮಾರ್, ಗೌತಮ್ ಗಂಭೀರ್ ಫೌಂಡೇಶನ್‌ಗೆ 1 ಕೋಟಿ ರೂ. ನೆರವು ನೀಡಿದ್ದಾರೆ. ಕೊರೊನಾ ಸಮಯದಲ್ಲಿ ಎದುರಾಗಿರುವ ಆಕ್ಸಿಜನ್ ಮತ್ತು ಸೂಕ್ತ ಚಿಕಿತ್ಸೆ ವ್ಯವಸ್ಥೆಗಾಗಿ 1 ಕೋಟಿ ರೂ. ನೀಡಿದ್ದಾರೆ.

  English summary
  Bollywood Actor Salman Khan tastes food quality check before distributing food packets.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X