ಭಾರತ-ಪಾಕಿಸ್ತಾನ ನಡುವೆ ಕದನ ವಿರಾಮ, ಕೆಂಗಣ್ಣಿಗೆ ಗುರಿಯಾದ ಸಲ್ಮಾನ್ ಖಾನ್ !
ಬಾಲಿವುಡ್‌ನ ಸೂಪರ್ ಸ್ಟಾರ್‌ಗಳಲ್ಲಿ ಸಲ್ಮಾನ್ ಖಾನ್ ಕೂಡ ಒಬ್ಬರು. ನಿರ್ಮಾಪಕರ ಪಾಲಿಗೆ ಚಿನ್ನದ ಗಣಿಯಂತೆ ಇರುವ ಸಲ್ಮಾನ್ ಖಾನ್ ಭಾರತೀಯರಾದರು ಕೂಡ ಅನೇಕರಿಗೆ ಇವರ ದೇಶಾಭಿಮಾನದ ಬಗ್ಗೆ ಅನುಮಾನ ಮೊದಲಿಂದ ಇದ್ದೇ ಇದೆ. ಸಲ್ಮಾನ್ ಖಾನ್ ನಡೆ ಕೂಡ ಇದಕ್ಕೆ ಪೂರಕವಾಗಿಯೇ ಇದೆ. 1993ರ ಮುಂಬೈ ಬ್ಲಾಸ್ಟ್ ಆರೋಪಿ ಯಾಕೂಬ್ ಮೆಮನ್‌ನ ಗಲ್ಲಿಗೇರಿಸಬಾರದು ಎಂದು ಹಿಂದೊಮ್ಮೆ ವಕಲಾತ್ತು ವಹಿಸಿದವರು ಇವರು.
ಇಂಥಾ ಸಲ್ಮಾನ್ ಖಾನ್ ಇದೀಗ ಅನೇಕರ ಆಕ್ರೋಶಕ್ಕೆ ಮತ್ತೊಮ್ಮೆ ಗುರಿಯಾಗಿದ್ದಾರೆ. ಟ್ರೋಲಿಗರಿಗೆ ಆಹಾರವಾಗಿದ್ದಾರೆ. ಹೌದು, ಎಲ್ಲರಿಗೆ ಗೊತ್ತಿರುವಂತೆ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಅಮಾಯಕ ಭಾರತೀಯರ ಪ್ರಾಣವನ್ನು ಬಲಿ ಪಡೆದ ಭಯೋತ್ಫಾದಕರ ವಿರುದ್ಧ ಭಾರತ ಸಮರ ಸಾರಿತ್ತು.

ಆಪರೇಷನ್ ಸಿಂಧೂರ್ ಹೆಸರಿನಲ್ಲಿ ಮಹತ್ವದ ಕಾರ್ಯಾಚರಣೆ ನಡೆಸಿ ಪಾಕಿಸ್ತಾನದ 9 ಸ್ಥಳಗಳ ಮೇಲೆ ಕ್ಷಿಪಣಿ ದಾಳಿಯನ್ನು ನಡೆಸಿ ಉಗ್ರರ ತರಬೇತಿ ಕೇಂದ್ರಗಳನ್ನು ಧ್ವಂಸ ಮಾಡಿತ್ತು. ಈ ಸಮಯದಲ್ಲಿ ಅನೇಕ ಬಾಲಿವುಡ್ ಸ್ಟಾರ್‌ಗಳು ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಭಾರತೀಯ ಸೇನೆಗೆ ಸಲಾಂ ಹೊಡೆದಿದ್ದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ನಿರ್ಧಾರವನ್ನು ಕೂಡ ಮೆಚ್ಚಿದ್ದರು.
ಆದರೆ, ಸಲ್ಮಾನ್ ಖಾನ್ ಮಾತ್ರ ಮೌನಕ್ಕೆ ಶರಣಾಗಿದ್ದರು. ಹೀಗಾಗಿ ಹಲವರು ಸಲ್ಮಾನ್ ಖಾನ್ ದೇಶಾಭಿಮಾನವನ್ನು ಪ್ರಶ್ನೆ ಮಾಡುತ್ತಿದ್ದರು. ಹೀಗಿರುವಾಗ ನಿನ್ನೆ { ಮೇ 10 } ಭಾರತ ಮತ್ತು ಪಾಕಿಸ್ತಾನದ ನಡುವೆ ಕಳೆದ 4 ದಿನಗಳಿಂದ ನಡೆಯುತ್ತಿದ್ದ ಅಘೋಷಿತ ಯುದ್ಧಕ್ಕೆ ಕದನ ವಿರಾಮ ಘೋಷಿಸಿದ ಬೆನ್ನಲ್ಲೇ ಸಲ್ಮಾನ್ ಖಾನ್ ಮಾತನಾಡಿದ್ದಾರೆ. ಕದನ ವಿರಾಮ ಘೋಷಿಸಿದ್ದಕ್ಕೆ ದೇವರಿಗೆ ಧನ್ಯವಾದ ಹೇಳಿದ್ದಾರೆ. ಆ ನಂತರ ಸಡನ್ ಜ್ಞಾನೋದಯವಾದಂತೆ ಆಗಿ ತಾವು ಮಾಡಿದ್ದ ಪೋಸ್ಟ್‌ನ್ನು ಡಿಲೀಟ್ ಕೂಡ ಮಾಡಿದ್ದಾರೆ.
ಸಲ್ಮಾನ್ ಖಾನ್ ಅವರ ಈ ನಡೆ ಸದ್ಯ ಹಲವರ ಆಕ್ರೋಶಕ್ಕೆ ಕಾರಣವಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಅನೇಕರು ಸಲ್ಮಾನ್ ಖಾನ್ ವಿರುದ್ಧ ಕೆಂಡ ಕಾರುತ್ತಿದ್ದಾರೆಭಾಯ್, ಬೀಯಿಂಗ್ ಹ್ಯೂಮನ್ ಅಬ್ಬಬ್ಬಾ. ಕಳೆದದ ನಾಲ್ಕು ದಿನಗಳಿಂದ ಈ ವ್ಯಕ್ತಿ ಕದನ ವಿರಾಮಕ್ಕೆ ಪ್ರಾರ್ಥನೆ ಮಾಡುತ್ತಿದ್ದ, ಪೋಸ್ಟ್ ಡಿಲೀಟ್ ಮಾಡಿರಬಹುದು ಆದರೆ ನಮಗೆಲ್ಲ ಅವನ ಚಿತ್ರಗಳಿಗೆಲ್ಲ ಏನು ಮಾಡಬೇಕೆಂದು ಚೆನ್ನಾಗಿ ಗೊತ್ತು ಎಂದು ಒಬ್ಬರು ಹೇಳಿದರೆ, ಮತ್ತೊಬ್ಬರು ಆಗಾಗ ಸುಮ್ಮನೆ ಇರುವುದನ್ನು ಕಲಿರಿ ಭಾಯ್ ಎಂದು ಸಲ್ಮಾನ್ ಖಾನ್ ಕಾಲೆಳೆದಿದ್ದಾರೆ.
ಆಪರೇಷನ್ ಸಿಂಧೂರ್ ಜಾರಿಯಲ್ಲಿದ್ದಾಗ ಸೈಲೆಂಟ್ ಆಗಿದ್ದ ವ್ಯಕ್ತಿ ಈಗ ಕದನ ವಿರಾಮ ಏರ್ಪಟ್ಟ ಕೂಡಲೇ ದೇವರಿಗೆ ಧನ್ಯವಾದ ಹೇಳಿದ್ದಾರೆ. ಆನಂತರ ಅದನ್ನೂ ಡಿಲೀಟ್ ಮಾಡಿದ್ದಾರೆ. ಶೇಮ್ ಆನ್ ಯು ಭಾಯ್ ಎಂದು ಮತ್ತೊಬ್ಬರು ಪೋಸ್ಟ್ ಮಾಡಿದ್ದರೆ, ಪಾಕಿಸ್ತಾನದಿಂದ ಕದನ ವಿರಾಮ ಉಲ್ಲಂಘನೆಯಾದ ವಿಚಾರ ಗೊತ್ತಾದ ನಂತರ ಪೋಸ್ಟ್ ಡಿಲೀಟ್ ಮಾಡಿದ್ರಾ ? ಎಂದು ಮತ್ತೊಬ್ಬರು ಪ್ರಶ್ನೆ ಮಾಡಿದ್ದಾರೆ.
ಅಂದ್ಹಾಗೇ ಕಾಶ್ಮೀರದ ಪಹಲ್ಗಾಮ್‌ನಲ್ಲಿ ಭಯೋತ್ಪಾಧಕರು ಅಮಾಯಕರ ಪ್ರಾಣವನ್ನು ಬಲಿ ಪಡೆದಾಗ ಸಲ್ಮಾನ್ ಖಾನ್ ಘಟನೆಯನ್ನು ಖಂಡಿಸಿದ್ದರು.ಭೂಮಿಯ ಮೇಲಿನ ಸ್ವರ್ಗ ಕಾಶ್ಮೀರ್ ನರಕವಾಗಿ ಬದಲಾಗುತ್ತಿದೆ. ಮುಗ್ಧ ಜನರನ್ನು ಗುರಿಯಾಗಿಸಲಾಗುತ್ತಿದೆ, ಅಮಾಯಕರನ್ನು ಕೊಲ್ಲಲಾಗುತ್ತಿದೆ ಎಂದು ಹೇಳಿದ್ದರು.
ಆದರೆ ಆ ನಂತರ ಆಪರೇಷನ್ ಸಿಂಧೂರ್ ಕಾರ್ಯಾಚರಣೆಯ ಕುರಿತು ಸಲ್ಮಾನ್ ಖಾನ್ ಒಂದೇ ಒಂದು ಟ್ವಿಟ್ ಕೂಡ ಮಾಡಿರಲಿಲ್ಲ. ಆದರೆ ಈಗ ಶಾಂತಿ ಮಂತ್ರವನ್ನು ಪಠಿಸಿದ್ದಾರೆ. ಕದನ ವಿರಾಮ ಘೋಷಿಸಿದ್ದಕ್ಕೆ ದೇವರಿಗೆ ಧನ್ಯವಾದ ಸಲ್ಲಿಸಿದ್ದಾರೆ.
ಸದ್ಯ ಸಲ್ಮಾನ್ ಖಾನ್ ಅವರ ಟ್ವಿಟ್ ಹಲವರ ಆಕ್ರೋಶಕ್ಕೆ ಕಾರಣವಾಗಿದ್ದು, ಪೋಸ್ಟ್ ಮಾಡಿದ್ದೇಕೆ ? ಆ ನಂತರ ಡಿಲೀಟ್ ಮಾಡಿದ್ದೇಕೆ ? ಎನ್ನುವುದಕ್ಕೆ ಸಲ್ಮಾನ್ ಖಾನ್ ಏನಾದರೂ ಸಬೂಬು ನೀಡುತ್ತಾರಾ ಎನ್ನುವುದನ್ನು ಕಾದು ನೋಡಬೇಕಿದೆ.


Click it and Unblock the Notifications











