For Quick Alerts
  ALLOW NOTIFICATIONS  
  For Daily Alerts

  ಅಲ್ಲು ಅರ್ಜುನ್‌ನನ್ನು ಹೊಗಳಿದ್ದೇಕೆ ಸಲ್ಮಾನ್; ಸ್ಟೈಲಿಶ್ ಸ್ಟಾರ್ ಪ್ರತಿಕ್ರಿಯೆ ಏನು?

  |

  ಬಾಲಿವುಡ್ ನಟ ಸಲ್ಮಾನ್ ಖಾನ್ ಟಾಲಿವುಡ್ ನಟ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್‌ನನ್ನು ಹಾಡಿ ಹೊಗಳಿದ್ದಾರೆ. ದಿಢೀರ್ ಅಂತ ಹೊಗಳಿದ್ದು ನೋಡಿ ಅಭಿಮಾನಿಗಳು ಅಚ್ಚರಿ ಪಟ್ಟಿದ್ದಾರೆ. ಮನಸಾರೆ ಹೊಗಳಿದ ಸಲ್ಲುಗೆ ಅಲ್ಲು ಅರ್ಜುನ್ ಸಹ ಪ್ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ.

  ಅಷ್ಟಕ್ಕೂ ಇಬ್ಬರ ನಡುವಿನ ಈ ಮಾತುಕತೆ ಕಾರಣವಾಗಿದ್ದು, ಸಲ್ಮಾನ್ ಖಾನ್ ನಟನೆಯ ರಾಧೆ ಸಿನಿಮಾ ಹಾಡು. ಇತ್ತೀಚಿಗಷ್ಟೆ ಬ್ಯಾಡ್ ಬಾಯ್ ಸಲ್ಲು ನಟನೆಯ ರಾಧೆ ಸಿನಿಮಾದ ಟ್ರೈಲರ್ ರಿಲೀಸ್ ಆಗಿತ್ತು. ಈ ಸಿನಿಮಾದಲ್ಲಿ ಬಳಿಕೆಯಾದ ಸೀಟಿಮಾರ್ ಹಾಡು ಚರ್ಚೆಗೆ ಕಾರಣವಾಗಿತ್ತು. ಅಲ್ಲು ಅರ್ಜುನ್ ನಟನೆಯ ದುವ್ವಾಡ ಜಗನ್ನಾಥ್ ಸಿನಿಮಾದ ಹಾಡು ಬಳಸಿಕೊಂಡಿದ್ದಾರೆ ಎನ್ನುವ ಮಾತು ಕೇಳಿಬಂದಿತ್ತು.

  ಅಲ್ಲು ಅರ್ಜುನ್ ಸಿನಿಮಾದ ಹಾಡು ಕದ್ದ ಸಲ್ಮಾನ್ ಖಾನ್: ಯಾವುದು ಆ ಹಾಡು?ಅಲ್ಲು ಅರ್ಜುನ್ ಸಿನಿಮಾದ ಹಾಡು ಕದ್ದ ಸಲ್ಮಾನ್ ಖಾನ್: ಯಾವುದು ಆ ಹಾಡು?

  ಅಲ್ಲು ಅರ್ಜುನ್‌ಗೆ ಸಲ್ಮಾನ್ ಖಾನ್ ಟ್ವೀಟ್

  ಅಲ್ಲು ಅರ್ಜುನ್‌ಗೆ ಸಲ್ಮಾನ್ ಖಾನ್ ಟ್ವೀಟ್

  ಸದ್ಯ ರಾಧೆ ಚಿತ್ರದ ಸೀಟಿಮಾರ್ ಹಾಡು ತೆರೆಗೆ ಬಂದಿದೆ. ಈ ಹಾಡು ದುವ್ವಾಡ ಜಗನ್ನಾಥ್ ಸಿನಿಮಾದ ಧಾಟಿಯಲ್ಲಿದೆ. ಹಾಡು ರಿಲೀಸ್ ಆದ ಬಳಿಕ ಸಲ್ಮಾನ್ ಖಾನ್ ಟ್ವೀಟ್ ಮಾಡಿ, 'ಧನ್ಯವಾದ ಅಲ್ಲು ಅರ್ಜುನ್. ಸೀಟಿಮಾರ್ ಹಾಡಿನಲ್ಲಿ ನಿಮ್ಮ ಡಾನ್ಸ್, ನಿಮ್ಮ ಸ್ಟೈಲ್ ಅದ್ಭುತವಾಗಿದೆ. ಸುರಕ್ಷಿತವಾಗಿರಿ ಸಹೋದರ' ಎಂದು ಹೇಳಿದ್ದಾರೆ.

  ಸಲ್ಲುಗೆ ಧನ್ಯವಾದ ತಿಳಿಸಿದ ಅಲ್ಲು ಅರ್ಜುನ್

  ಸಲ್ಲುಗೆ ಧನ್ಯವಾದ ತಿಳಿಸಿದ ಅಲ್ಲು ಅರ್ಜುನ್

  ಸಲ್ಮಾನ್ ಖಾನ್ ಪ್ರೀತಿಯ ಮಾತುಗಳಿಗೆ ಅಲ್ಲು ಅರ್ಜುನ್ ಕೂಡ ಅಷ್ಟೇ ಪ್ರೀತಿಯ ಪ್ರತಿಕ್ರಿಯೆ ನೀಡಿದ್ದಾರೆ. ಧನ್ಯವಾದಗಳು ಸಲ್ಮಾನ್ ಗಾರು. ನಿಮ್ಮಿಂದ ಈ ಅಭಿನಂದನೆಗಳನ್ನು ಸ್ವೀಕರಿಸಲು ತುಂಬಾ ಖುಷಿಯಾಗುತ್ತೆ. ತೆರೆಮೇಲೆ ಮ್ಯಾಜಿಕ್ ಮಾಡುವುದನ್ನು ನೋಡಿ ಅಭಿಮಾನಿಗಳು ಶಿಳ್ಳೆ ಹೊಡೆಯುವುದನ್ನು ನೋಡಲು ಕಾತರನಾಗಿದ್ದೇನೆ. ನಿಮ್ಮ ಪ್ರೀತಿಗೆ ಧನ್ಯವಾದಗಳು' ಎಂದು ಬರೆದುಕೊಂಡಿದ್ದಾರೆ.

  40 ಕೋಟಿ ವೆಚ್ಚದಲ್ಲಿ ತಯಾರಾಗಲಿದೆ 'ಪುಷ್ಪ' ಚಿತ್ರದ ಸಾಹಸ ದೃಶ್ಯ40 ಕೋಟಿ ವೆಚ್ಚದಲ್ಲಿ ತಯಾರಾಗಲಿದೆ 'ಪುಷ್ಪ' ಚಿತ್ರದ ಸಾಹಸ ದೃಶ್ಯ

  ಹಿಂದಿ ವರ್ಷನ್ ಹಾಡಿಗೂ ದೇವಿಶ್ರೀ ಪ್ರಸಾದ್ ಸಂಗೀತ

  ಹಿಂದಿ ವರ್ಷನ್ ಹಾಡಿಗೂ ದೇವಿಶ್ರೀ ಪ್ರಸಾದ್ ಸಂಗೀತ

  ವಿಶೇಷ ಎಂದರೆ ದುವ್ವಾಡ ಜಗನ್ನಾಥ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿರುವ ಖ್ಯಾತ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್, ಹಿಂದಿ ವರ್ಷನ್ ಸೀಟಿಮಾರ್‌ಗೂ ಸಂಗೀತ ಸಂಯೋಜನೆ ಮಾಡಿದ್ದಾರೆ.

  ಅಪ್ಪು ಜೊತೆ ಪವನ್ ಮಾಡ್ತಿರೋ ಚಿತ್ರದ ಸ್ಪೆಷಾಲಿಟಿ | Filmibeat Kannada
  ಹಿಂದಿ ಸೀಟಿಮಾರ್ ನಲ್ಲಿ ಸಲ್ಮಾನ್ ಜೊತೆ ದಿಶಾ ನಟನೆ

  ಹಿಂದಿ ಸೀಟಿಮಾರ್ ನಲ್ಲಿ ಸಲ್ಮಾನ್ ಜೊತೆ ದಿಶಾ ನಟನೆ

  ಅಂದಹಾಗೆ ತೆಲುಗಿನ ಸೀಟಿಮಾರ್ ಹಾಡಿನಲ್ಲಿ ಅಲ್ಲು ಅರ್ಜುನ್ ಜೊತೆ ನಟಿ ಪೂಜಾ ಹೆಗ್ಡೆ ಹೆಜ್ಜೆ ಹಾಕಿದ್ದಾರೆ. ಹಿಂದಿಯ ಸೀಟಿಮಾರ್‌ನಲ್ಲಿ ಸಲ್ಮಾನ್ ಖಾನ್ ಜೊತೆ ನಟಿ ದಿಶಾ ಪಟಾನಿ ಕಾಣಿಸಿಕೊಂಡಿದ್ದಾರೆ. ಸದ್ಯ ಟ್ರೈಲರ್ ಮತ್ತು ಹಾಡಿನ ಮೂಲಕ ಕುತೂಹಲ ಮೂಡಿಸಿರುವ ರಾಧೆ ಸಿನಿಮಾ ಮುಂದಿನ ತಿಂಗಳು ಒಟಿಟಿಯಲ್ಲಿ ತೆರೆಗೆ ಬರುತ್ತಿದೆ.

  English summary
  Bollywood Actor Salman Khan thanks to Tollywood Actor Allu Arjun for Seeti Maar. Salman Khan says he loves his performance.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X