twitter
    For Quick Alerts
    ALLOW NOTIFICATIONS  
    For Daily Alerts

    ಅಂದು ರಜನಿ ಮಾಡಿದ್ದನ್ನೇ, ಇಂದು ಸಲ್ಮಾನ್ ಖಾನ್ ಮಾಡುತ್ತಿದ್ದಾರೆ.!

    By Bharath Kumar
    |

    ಸಲ್ಮಾನ್ ಖಾನ್ ಚಿತ್ರಗಳು ಅಂದ್ರೆ ಬಾಕ್ಸ್ ಆಫೀಸ್ ನಲ್ಲಿ ಕೋಟಿ ಕೋಟಿ ಕಮಾಯಿ ಮಾಡುತ್ತವೆ. ಹಾಕಿದ ಬಂಡವಾಳಕ್ಕಿಂತ ಎರಡು ಪಟ್ಟು, ಮೂರು ಪಟ್ಟು ಹೆಚ್ಚು ಲಾಭ ಮಾಡುತ್ತವೆ. ಆದ್ರೆ, ಸಲ್ಮಾನ್ ಚಿತ್ರದಿಂದ ದೊಡ್ಡ ನಷ್ಟವಾಗಿದೆ ಎಂಬ ಆಪಾದನೆ ಈಗ ಬಾಲಿವುಡ್ ನಲ್ಲಿ ಚರ್ಚೆಯಾಗುತ್ತಿದೆ.

    ಈ ಆಪಾದನೆಯಿಂದ ತಪ್ಪಿಸಿಕೊಳ್ಳಲು ಸಲ್ಮಾನ್ ಖಾನ್, ಸೂಪರ್ ಸ್ಟಾರ್ ರಜನಿಕಾಂತ್ ಅವರ ಹಾದಿಯನ್ನ ಅನುಕರಿಸುತ್ತಿದ್ದಾರೆ. ಹೌದು, ತನ್ನ ಚಿತ್ರದಿಂದ ನಷ್ಟ ಅನುಭವಿಸಿದವರಿಗೆ, ನಷ್ಟ ಭರಿಸಿಕೊಡುವುದರ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ. ಈ ಕೆಲಸವನ್ನ ಅಂದು ಸೂಪರ್ ಸ್ಟಾರ್ ರಜನಿಕಾಂತ್ ಮಾಡಿದ್ದರು, ಈಗ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಮಾಡ್ತಿದ್ದಾರೆ.

    ಅಷ್ಟಕ್ಕೂ, ಸಲ್ಲು ಚಿತ್ರದಿಂದ ವಿತರಕರಿಗೆ ಎಷ್ಟು ನಷ್ಟವಾಯಿತು? ಎಷ್ಟು ಭರಿಸಿಕೊಡುತ್ತಿದ್ದಾರೆ ಎಂಬುದನ್ನ ತಿಳಿದುಕೊಳ್ಳಲು ಮುಂದೆ ಓದಿ.....

    'ಟ್ಯೂಬ್ ಲೈಟ್' ಚಿತ್ರದಿಂದ ದೊಡ್ಡ ನಷ್ಟ

    'ಟ್ಯೂಬ್ ಲೈಟ್' ಚಿತ್ರದಿಂದ ದೊಡ್ಡ ನಷ್ಟ

    ಸಲ್ಮಾನ್ ಅಭಿನಯದ 'ಟ್ಯೂಬ್ ಲೈಟ್' ಚಿತ್ರ ಈದ್ ಹಬ್ಬದ ಪ್ರಯುಕ್ತ ಬಿಡುಗಡೆಯಾಗಿತ್ತು. ಸುಮಾರು 100 ಕೋಟಿ ವೆಚ್ಚದಲ್ಲಿ ತಯಾರಾಗಿದ್ದ ಈ ಚಿತ್ರ ಬಾಕ್ಸ್ ಆಫೀಸ್ ನಲ್ಲಿ ಗಳಿಸಿರುವುದು ಮಾತ್ರ ಕೇವಲ 114 ಕೋಟಿ ಎಂದು ಹೇಳಲಾಗ್ತಿದೆ. ಇದರಿಂದ ವಿತರಕರಿಗೆ ದೊಡ್ಡ ಮಟ್ಟದ ನಷ್ಟವಾಗಿದೆಯಂತೆ.

    ಮೊದಲ ವಾರಂತ್ಯದಲ್ಲಿ 'ಟ್ಯೂಬ್ ಲೈಟ್' ಮಾಡಿದ ಕಲೆಕ್ಷನ್ ಎಷ್ಟು?ಮೊದಲ ವಾರಂತ್ಯದಲ್ಲಿ 'ಟ್ಯೂಬ್ ಲೈಟ್' ಮಾಡಿದ ಕಲೆಕ್ಷನ್ ಎಷ್ಟು?

    ವಿತರಕರ ನಷ್ಟ ಭರಿಸಲಿರುವ ಸಲ್ಲು ಭಾಯ್

    ವಿತರಕರ ನಷ್ಟ ಭರಿಸಲಿರುವ ಸಲ್ಲು ಭಾಯ್

    'ಟ್ಯೂಬ್ ಲೈಟ್' ಚಿತ್ರದ ಆಗಿರುವ ನಷ್ಟವನ್ನ ಭರಿಸಿಕೊಡುವಂತೆ ವಿತರಕರು ನಟ ಸಲ್ಮಾನ್ ಖಾನ್ ಅವರಿಗೆ ಮನವಿ ಮಾಡಿದ್ದರು. ಹೀಗಾಗಿ, ಸಲ್ಲು ಭಾಯ್ ಚಿತ್ರದ ನಷ್ಟವನ್ನ ಭರಿಸಿಕೊಡುವುದಾಗಿ ಹೇಳಿದ್ದು, ವಿತರಕರ ಬೆನ್ನಿಗೆ ನಿಂತಿದ್ದಾರೆ.

    ಲೆಕ್ಕಾಚಾರ ಉಲ್ಟಾ ಮಾಡಿದ 'ಟ್ಯೂಬ್ ಲೈಟ್' ಮೊದಲ ದಿನ ಗಳಿಸಿದ್ದೆಷ್ಟು?ಲೆಕ್ಕಾಚಾರ ಉಲ್ಟಾ ಮಾಡಿದ 'ಟ್ಯೂಬ್ ಲೈಟ್' ಮೊದಲ ದಿನ ಗಳಿಸಿದ್ದೆಷ್ಟು?

    55 ಕೋಟಿ ನೀಡಲಿರುವ ಸಲ್ಲು

    55 ಕೋಟಿ ನೀಡಲಿರುವ ಸಲ್ಲು

    'ಟ್ಯೂಬ್ ಲೈಟ್' ಚಿತ್ರದಿಂದ ನಷ್ಟ ಅನುಭವಿಸಿದ ವಿತರಕರಿಗೆ ಸಲ್ಮಾನ್ ಖಾನ್ ತಮ್ಮ ಕೈಯಿಂದ 55 ಕೋಟಿ ಹಣವನ್ನ ಪರಿಹಾರವಾಗಿ ನೀಡಲಿದ್ದಾರೆ ಎಂದು ಸಲ್ಮಾನ್ ಅವರ ವಕ್ತಾರ ಕೋಮಲ್‌ ನಾಥ್ ಸ್ಪಷ್ಟಪಡಿಸಿದ್ದಾರೆ.

    ಸಲ್ಮಾನ್ ಖಾನ್ ನಿರ್ಮಾಣದ 'ಟ್ಯೂಬ್ ಲೈಟ್'

    ಸಲ್ಮಾನ್ ಖಾನ್ ನಿರ್ಮಾಣದ 'ಟ್ಯೂಬ್ ಲೈಟ್'

    ಕಬೀರ್ ಖಾನ್ ನಿರ್ದೇಶನ ಮಾಡಿದ್ದ ಈ ಚಿತ್ರವನ್ನ ಸ್ವತಃ ಸಲ್ಮಾನ್ ಖಾನ್ ಅವರೇ ನಿರ್ಮಾಣ ಮಾಡಿದ್ದರು. ಹೀಗಾಗಿ, ವಿತರಕರಿಗೆ ಪರಿಹಾರ ನೀಡಲು ಮುಂದಾಗಿದ್ದಾರೆ. ಸಲ್ಮಾನ್ ಖಾನ್ ಮತ್ತು ಶೋಹಿಲ್ ಖಾನ್ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದು, ಚೈನೀಸ್ ನಟಿ ಝುಝು (zhu zhu) ನಾಯಕಿ ಆಗಿ ಕಾಣಿಸಿಕೊಂಡಿದ್ದರು.

    ಅಂದು ರಜನಿಕಾಂತ್ ಪರಿಹಾರ ಕೊಟ್ಟಿದ್ದರು

    ಅಂದು ರಜನಿಕಾಂತ್ ಪರಿಹಾರ ಕೊಟ್ಟಿದ್ದರು

    2002 ರಲ್ಲಿ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಬಾಬಾ' ಚಿತ್ರದಿಂದ ವಿತರಕರಿಗೆ ನಷ್ಟವಾಗಿತ್ತು. ಈ ಚಿತ್ರವನ್ನ ರಜನಿಕಾಂತ್ ನಿರ್ಮಾಣ ಮಾಡಿದ್ದರು. ಹೀಗಾಗಿ, ವಿತರಕರಿಗೆ ಸ್ವತ ರಜನಿಕಾಂತ್ ಅವರೇ ನಷ್ಟ ಪರಿಹಾರ ನೀಡಿದ್ದರು.

    ಸಲ್ಲು ಸ್ನೇಹಕ್ಕಾಗಿ ಶಾರೂಖ್ ಕೊಟ್ಟ ಗಿಫ್ಟ್ ನೋಡಿ ಬೆರಗಾದ ಬಾಲಿವುಡ್ಸಲ್ಲು ಸ್ನೇಹಕ್ಕಾಗಿ ಶಾರೂಖ್ ಕೊಟ್ಟ ಗಿಫ್ಟ್ ನೋಡಿ ಬೆರಗಾದ ಬಾಲಿವುಡ್

    English summary
    Bollywood Actor Salman Khan Has Agreed to Bear all the Losses of Tubelight and Refund the Money to the Distributors.
    Tuesday, July 11, 2017, 12:56
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X