ಫೋಟೋ ವೈರಲ್; ಲ್ಯಾಂಡ್ ಮಾಫಿಯಾ ವಿರುದ್ಧ ಹೋರಾಟಕ್ಕಿಳಿದ ನಟ ಸಲ್ಮಾನ್ ಖಾನ್

ಬಾಲಿವುಡ್ ನಟ ಸಲ್ಮಾನ್ ಖಾನ್ ಸದ್ಯ ಬಹುನಿರೀಕ್ಷೆಯ ರಾಧೆ ಸಿನಿಮಾದ ಚಿತ್ರೀಕರಣ ಮುಗಿಸಿ, ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಬ್ಯುಸಿಯಾಗಿದ್ದಾರೆ. ಈ ನಡುವೆ ಸಲ್ಮಾನ್ ಖಾನ್ ಲ್ಯಾಂಡ್ ಮಾಫಿಯಾದ ವಿರುದ್ಧ ಹೋರಾಟ ಪ್ರಾರಂಭಿಸಿದ್ದಾರೆ. ಚಿತ್ರರಂಗದಲ್ಲಿ ಸದ್ಯ ಡ್ರಗ್ ಮಾಫಿಯಾದ ವಿರುದ್ಧ ಹೋರಾಟ ಪ್ರಾರಂಭವಾಗಿರುವ ಬೆನ್ನಲ್ಲೇ ಬಾಲಿವುಡ್ ಬ್ಯಾಡ್ ಬಾಯ್ ಸಲ್ಲು, ಲ್ಯಾಂಡ್ ಮಾಫಿಯಾ ವಿರುದ್ಧ ಸಿಡಿದೆದಿದ್ದಿರುವುದು ಅಚ್ಚರಿ ಮೂಡಿಸಿದೆ.

ಅಂದಹಾಗೆ ಸಲ್ಮಾನ್ ಖಾನ್ ಲ್ಯಾಂಡ್ ಮಾಫಿಯಾದ ವಿರುದ್ಧ ಹೋರಾಟ ಪ್ರಾರಂಭಿಸಿದ್ದು, ನಿಜ ಜೀವನದಲ್ಲಿ ಅಲ್ಲ, ಸಿನಿಮಾದಲ್ಲಿ. ಹೌದು, ಸಲ್ಮಾನ್ ಖಾನ್ ನಟನೆಯ ಮುಂದಿನ ಸಿನಿಮಾ ಅನೌನ್ಸ್ ಆಗಿದ್ದು, ಈ ಸಿನಿಮಾದಲ್ಲಿ ಸಲ್ಲು ಲ್ಯಾಂಡ್ ಮಾಫಿಯಾದ ವಿರುದ್ಧ ಹೋರಾಟ ಮಾಡುವ ಪೊಲೀಸ್ ಆಫೀರ್ ಆಗಿ ಕಾಣಿಸಿಕೊಂಡಿದ್ದಾರೆ.

ಅಂತಿಮ್; ದಿ ಫೈನಲ್ ಟ್ರುತ್ ಸಿನಿಮಾದಲ್ಲಿ ಸಲ್ಮಾನ್

ಅಂತಿಮ್; ದಿ ಫೈನಲ್ ಟ್ರುತ್ ಸಿನಿಮಾದಲ್ಲಿ ಸಲ್ಮಾನ್

ಸಲ್ಮಾನ್ ಖಾನ್ ನಟನೆಯ ಮುಂದಿನ ಸಿನಿಮಾದ ಟೈಟಲ್ ಈಗಾಗಲೇ ಅನೌನ್ಸ್ ಆಗಿದ್ದು, ಚಿತ್ರಕ್ಕೆ ಅಂತಿಮ್; ದಿ ಫೈನಲ್ ಟ್ರುತ್ ಎಂದು ಶೀರ್ಷಿಕೆ ಇಡಲಾಗಿದೆ. ಸದ್ಯ ಚಿತ್ರದ ಮೇಕಿಂಗ್ ವಿಡಿಯೋ ತುಣುಕು ರಿಲೀಸ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ವಿಡಿಯೋದಲ್ಲಿ ಸಲ್ಮಾನ್ ಖಾನ್ ತರಕಾರಿ ಮಾರುಕಟ್ಟೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾರೆ.

ಸಿಖ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಸಲ್ಮಾನ್ ಖಾನ್

ಸಿಖ್ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಸಲ್ಮಾನ್ ಖಾನ್

ವಿಶೇಷ ಎಂದರೆ ಸಿನಿಮಾದಲ್ಲಿ ಸಲ್ಮಾನ್ ಖಾನ್ ಸಿಖ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಲ್ಮಾನ್ ಖಾನ್ ಈ ಹೊಸ ಲುಕ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅಭಿಮಾನಿಗಳು ಸಲ್ಮಾನ್ ಹೊಸ ಅವತಾರ ಕಂಡು ದಂಗಾಗಿದ್ದಾರೆ.

ಮರಾಠಿ ಸಿನಿಮಾದ ರಿಮೇಕ್

ಮರಾಠಿ ಸಿನಿಮಾದ ರಿಮೇಕ್

ಅಂದಹಾಗೆ ಅಂತಿಮ್ ಸಿನಿಮಾಗೆ ಮಹೇಶ್ ಮಂಜ್ರೇಕರ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಅಂತಿಮ್; ದಿ ಫೈನಲ್ ಟ್ರುತ್ ಸಿನಿಮಾ 2018ರಲ್ಲಿ ರಿಲೀಸ್ ಆದ ಮರಾಠಿಯ ಯಶಸ್ವಿ ಸಿನಿಮಾ 'ಮುಲ್ಶಿ ಪ್ಯಾಟರ್ನ್' ಸಿನಿಮಾದ ರಿಮೇಕ್ ಆಗಿದೆ.

40 ನಿಮಿಷ ಮಾತ್ರ ಚಿತ್ರದಲ್ಲಿ ಇರಲಿದ್ದಾರೆ ಸಲ್ಮಾನ್

40 ನಿಮಿಷ ಮಾತ್ರ ಚಿತ್ರದಲ್ಲಿ ಇರಲಿದ್ದಾರೆ ಸಲ್ಮಾನ್

ಈ ಸಿನಿಮಾದಲ್ಲಿ ರೈತರು ತಮ್ಮ ಭೂಮಿಯನ್ನು ಬಿಲ್ಡರ್ ಗಳಿಗೆ ಮಾರಿ, ಎದುರಿಸುವ ಸಮಸ್ಯೆ, ಕಷ್ಟಗಳ ಬಗ್ಗೆಯೂ ಇರಲಿದೆ ಎಂದು ಹೇಳಲಾಗುತ್ತಿದೆ. ವಿಶೇಷ ಎಂದರೆ ಈ ಸಿನಿಮಾದಲ್ಲಿ ನಾಯಕನಾಗಿ ಅಯೂಷ್ ಶರ್ಮಾ ನಾಯಕನಾಗಿ ನಟಿಸುತ್ತಿದ್ದಾರೆ. ಸಲ್ಮಾನ್ ಖಾನ್ ಸಿನಿಮಾದಲ್ಲಿ 40 ನಿಮಷಗಳ ಕಾಲ ಇರಲಿದ್ದಾರಂತೆ.

Recommended Video

ಸಮಂತಾ ಜೊತೆ ತನ್ನ ಆಸೆ ಹೇಳಿಕೊಂಡ ತಮನ್ನಾ | Filmibeat Kannada
ರಾಧೆ ಸಿನಿಮಾದಲ್ಲಿ ಡ್ರಗ್ ಮಾಫಿಯಾದ ವಿರುದ್ಧ ಹೋರಾಟ

ರಾಧೆ ಸಿನಿಮಾದಲ್ಲಿ ಡ್ರಗ್ ಮಾಫಿಯಾದ ವಿರುದ್ಧ ಹೋರಾಟ

ಈಗಾಗಲೇ ಚಿತ್ರೀಕರಣ ಮುಗಿಸಿರುವ ರಾಧೆ; ದಿ ಮೋಸ್ಟ್ ವಾಟೆಂಟ್ ಭಾಯ್ ಸಿನಿಮಾದಲ್ಲಿ ಸಲ್ಮಾನ್ ಡ್ರಗ್ ಮಾಫಿಯಾದ ವಿರುದ್ಧ ಹೋರಾಡಿದ್ದಾರಂತೆ. ಈ ಸಿನಿಮಾದಲ್ಲಿ ಲ್ಯಾಂಡ್ ಮಾಫಿಯಾದ ವಿರುದ್ಧ ಹೋರಾಟಕ್ಕಿಳಿದಿದ್ದಾರೆ. ರಾಧೆ ಮತ್ತು ಅಂತಿಮ್ ಈ ಎರಡು ಸಿನಿಮಾಗಳು ಮುಂದಿನ ವರ್ಷ ತೆರೆಗೆ ಬರುತ್ತಿದೆ.

More from Filmibeat

English summary
Bollywood Actor Salma Khan to fight against Land Mafia in Antim; The final truth movie.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X