»   » ಜಮೀರ್ ಅಹ್ಮದ್ ಪುತ್ರ ಝೈದ್ ಬಗ್ಗೆ ಬ್ರೇಕ್ ಆಗಿರುವ ಇಂಟ್ರೆಸ್ಟಿಂಗ್ ಸುದ್ದಿ ಇದು

ಜಮೀರ್ ಅಹ್ಮದ್ ಪುತ್ರ ಝೈದ್ ಬಗ್ಗೆ ಬ್ರೇಕ್ ಆಗಿರುವ ಇಂಟ್ರೆಸ್ಟಿಂಗ್ ಸುದ್ದಿ ಇದು

By: ಹರ್ಷಿತಾ ರಾಕೇಶ್
Subscribe to Filmibeat Kannada

ಸ್ಯಾಂಡಲ್ ವುಡ್ ನಲ್ಲಿ ಕಾಂಗ್ರೆಸ್ ನಾಯಕ ಎಚ್.ಎಂ.ರೇವಣ್ಣ ಪುತ್ರ ಅನೂಪ್ ರೇವಣ್ಣ ಅದೃಷ್ಟ ಪರೀಕ್ಷೆ ಎದುರಿಸಿದ್ದು ಆಯ್ತು. ಇನ್ನೂ ಚೆಲುವರಾಯಸ್ವಾಮಿ ಪುತ್ರ ಸಚಿನ್ ಕೂಡ ಗಾಂಧಿನಗರದ ಅಂಗಳದಲ್ಲಿ 'ಹ್ಯಾಪಿ ಬರ್ತ್ ಡೇ' ಸೆಲೆಬ್ರೇಷನ್ ಮಾಡಿಕೊಂಡಿದ್ದಾಯ್ತು.

ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರ್ ಚಂದನವನದ ಜೊತೆಗೆ ತೆಲುಗು ಸಿನಿ ಅಂಗಳದ ಮೇಲೂ 'ಜಾಗ್ವಾರ್' ಮೂಲಕ ಕಣ್ಣಿಟ್ಟಿದ್ದಾರೆ.

ಎಲ್ಲರಿಗಿಂತ ಒಂದು ಹೆಜ್ಜೆ ಮುಂದಕ್ಕೆ ಹೋಗಿರುವ ಚಾಮರಾಜಪೇಟೆ ಕ್ಷೇತ್ರದ ಜೆಡಿಎಸ್ ಶಾಸಕ ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ (Zaid Khan) ನೇರ ಬಾಲಿವುಡ್ ಕಡೆ ಮುಖ ಮಾಡಿ ನಿಂತಿದ್ದಾರೆ. [ಆರ್.ಜಿ.ವಿ ನಿರ್ದೇಶನದಲ್ಲಿ ಜಮೀರ್ ಪುತ್ರ ಬಾಲಿವುಡ್ಡಿಗೆ?]

ನೋಡೋಕೆ ಚಾಕಲೇಟ್ ಹೀರೋ ಅಂತೆ ಕಾಣುವ ಝೈದ್ ಖಾನ್ ಬಾಲಿವುಡ್ ಎಂಟ್ರಿ ಕುರಿತು ಒಂದು ಇಂಟ್ರೆಸ್ಟಿಂಗ್ ಸುದ್ದಿ ಹೊರಬಿದ್ದಿದೆ. ಕೆಳಗಿರುವ ಫೋಟೋ ಸ್ಲೈಡ್ ಗಳಲ್ಲಿ ಓದಿರಿ....

ಬಾಲಿವುಡ್ ನಲ್ಲಿ ಝೈದ್ ಖಾನ್ ಪದಾರ್ಪಣೆ?

ಮೂಲಗಳ ಪ್ರಕಾರ, ಜಮೀರ್ ಅಹ್ಮದ್ ಪುತ್ರ ಝೈದ್ ಖಾನ್ ಬಾಲಿವುಡ್ ಮೂಲಕ ಬಣ್ಣದ ಲೋಕಕ್ಕೆ ಪದಾರ್ಪಣೆ ಮಾಡಲಿದ್ದಾರೆ. [ಈ ಜ್ಯೂನಿಯರ್ ರಣ್ಬೀರ್ ಕಪೂರ್ ಯಾರು ಹೇಳಿ?]

ಸ್ಯಾಂಡಲ್ ವುಡ್ ಅಲ್ಲ.!

ಕನ್ನಡ ಚಿತ್ರವೊಂದರ ಮೂಲಕ ಝೈದ್ ಖಾನ್ ಸಿನಿ ಲೋಕಕ್ಕೆ ಎಂಟ್ರಿ ಕೊಡಲಿದ್ದಾರೆ ಅಂತ ಈ ಹಿಂದೆ ಸುದ್ದಿ ಆಗಿತ್ತು. ಆದ್ರೀಗ, ಸ್ಯಾಂಡಲ್ ವುಡ್ ಬಿಟ್ಟು ಬಾಲಿವುಡ್ ಗೆ ಹಾರುವ ಯೋಚನೆ ಮಾಡಿದ್ದಾರೆ ಝೈದ್ ಖಾನ್.

ಸಲ್ಮಾನ್ ಖಾನ್ ಲಾಂಚ್ ಮಾಡ್ತಾರಂತೆ.!

ಇಂಟ್ರೆಸ್ಟಿಂಗ್ ಮಾಹಿತಿ ಅಂದ್ರೆ ಇದೇ. ತಮ್ಮ ಆಪ್ತರ ಬಳಿ ಶಾಸಕ ಜಮೀರ್ ಅಹ್ಮದ್ ಹೇಳಿಕೊಂಡಿರುವ ಪ್ರಕಾರ, ಬಾಲಿವುಡ್ ನಲ್ಲಿ ಪುತ್ರ ಝೈದ್ ಖಾನ್ ರನ್ನ ಸಲ್ಮಾನ್ ಖಾನ್ ಲಾಂಚ್ ಮಾಡಲಿದ್ದಾರೆ.!

ಸಲ್ಮಾನ್ ಜೊತೆ ಝೈದ್ ಖಾನ್ ಸ್ಕ್ರೀನ್ ಶೇರ್?

ಎಲ್ಲವೂ ಜಮೀರ್ ಅಹ್ಮದ್ ಪ್ಲಾನ್ ಪ್ರಕಾರ ನಡೆದರೆ, ಝೈದ್ ಖಾನ್ ರವರ ಚೊಚ್ಚಲ ಚಿತ್ರದಲ್ಲಿ ಬಾಲಿವುಡ್ ಬಾಕ್ಸಾಫೀಸ್ ಟೈಗರ್ ಸಲ್ಮಾನ್ ಖಾನ್ ಕೂಡ ನಟಿಸುವ ಸಾಧ್ಯತೆ ಇದೆ.

ಸಲ್ಮಾನ್ ಖಾನ್ ಪ್ರೊಡಕ್ಷನ್ ಕಂಪನಿಯಿಂದ ಲಾಂಚ್?

ಸಲ್ಮಾನ್ ಖಾನ್ ಹೋಮ್ ಬ್ಯಾನರ್ ಮೂಲಕ ಬಾಲಿವುಡ್ ನಲ್ಲಿ ಝೈದ್ ಖಾನ್ ಪರಿಚಯ ಆಗಬಹುದು ಎಂಬ ಅಂತೆ-ಕಂತೆಗಳು ಹೊರಬಿದ್ದಿವೆ.

ಹುಟ್ಟುಹಬ್ಬದಂದೇ ಸುಳಿವು ನೀಡಿದ್ರು!

ಆಗಸ್ಟ್ 2 ರಂದು ತಮ್ಮ 50ನೇ ಹುಟ್ಟುಹಬ್ಬವನ್ನ ಜಮೀರ್ ಅಹ್ಮದ್ ಆಚರಿಸಿಕೊಂಡಿದ್ರು. ಅವರಿಗೆ ಶುಭ ಕೋರಲು ಮುಂಬೈನಿಂದ ಬಾಲಿವುಡ್ ತಾರೆಯರಾದ ಸಂಜಯ್ ದತ್, ಜ್ಯಾಕಿ ಶ್ರಾಫ್, ಶಕ್ತಿ ಕಪೂರ್ ಹಾಗೂ ಗೋವಿಂದ ಬೆಂಗಳೂರಿಗೆ ಬಂದಿದ್ರು. ತಮ್ಮ ಹುಟ್ಟುಹಬ್ಬದಂದೇ ಮಗನ ಬಾಲಿವುಡ್ ಸಿನಿ ನಂಟಿನ ಸುಳಿವು ನೀಡಿದ್ರು ಜಮೀರ್ ಅಹ್ಮದ್.

ಹಲವು ನಿರ್ದೇಶಕರ ಹೆಸರು ಕೇಳಿಬಂದಿತ್ತು.!

ಇಂದ್ರಜಿತ್ ಲಂಕೇಶ್ ನಿರ್ದೇಶನದ ಕನ್ನಡ ಸಿನಿಮಾ ಮೂಲಕ ಝೈದ್ ಖಾನ್ ಸಿನಿ ಜರ್ನಿ ಆರಂಭವಾಗಲಿದೆ ಅಂತ ವರದಿ ಆಗಿತ್ತು. ಹಾಗೇ, ರಾಮ್ ಗೋಪಾಲ್ ವರ್ಮಾ ನಿರ್ದೇಶನದ ಬಾಲಿವುಡ್ ಚಿತ್ರದಲ್ಲಿ ಝೈದ್ ಮಿನುಗಲಿದ್ದಾರೆ ಎಂಬ ಮಾತುಗಳು ಕೇಳಿ ಬಂದಿತ್ತು. ಈಗ ಸಲ್ಮಾನ್ ಖಾನ್ ಹೆಸರು ಕೇಳಿ ಬರುತ್ತಿದೆ.

ಖಾನ್ ಖಾನ್ದಾನ್ ಗೆ ಜಮೀರ್ ಅತ್ಯಾಪ್ತ.!

ಬಿಟೌನ್ ನ ಖಾನ್ ಖಾನ್ದಾನ್ ಗೆ ಜಮೀರ್ ಅಹ್ಮದ್ ಅತ್ಯಾಪ್ತ. ಅಸಲಿಗೆ, ''ಝೈದ್ ಖಾನ್ ಸಿನಿಮಾ ಹೀರೋ ಆಗಲಿ, ಒಂದು ಫೋಟೋಶೂಟ್ ಮಾಡಿಸಿ'' ಅಂತ ಐಡಿಯಾ ಕೊಟ್ಟವರೇ ಶಾರುಖ್ ಖಾನ್. ಕಿಂಗ್ ಖಾನ್ ಮಾತಿನಿಂದ 'ಸ್ಟಾರ್' ಆಗಲು ಮನಸ್ಸು ಮಾಡಿರುವ ಝೈದ್ ಗೆ ಸಲ್ಲು ಮೀಯಾ ಬೆನ್ನೆಲುಬಾಗಿ ನಿಲ್ಲುತ್ತಾರಾ ಅಂತ ನೋಡೋಣ.

ಸಿನಿಮಾ ಸೆಟ್ಟೇರುವುದು ಯಾವಾಗ?

ಝೈದ್ ಖಾನ್ ಅಭಿನಯಿಸುವ ಹಿಂದಿ ಸಿನಿಮಾ ಮುಂದಿನ ವರ್ಷ ಸೆಟ್ಟೇರಲಿದೆ.

English summary
According to the latest buzz, Bollywood Actor Salman Khan to launch JDS Leader Zameer Ahmed Khan's son Zaid Khan in Bollywood.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada