»   » ಕಿರುತೆರೆ ನಟಿ ಜೊತೆಗೆ ಸಲ್ಮಾನ್ ಖಾನ್ ಮದುವೆ

ಕಿರುತೆರೆ ನಟಿ ಜೊತೆಗೆ ಸಲ್ಮಾನ್ ಖಾನ್ ಮದುವೆ

Posted By:
Subscribe to Filmibeat Kannada
Iulia Vantur
ಬಾಲಿವುಡ್ ಚಿತ್ರರಂಗದ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಸಲ್ಮಾನ್ ಖಾನ್ ಗೆ ಕಡೆಗೂ ಕಂಕಣಬಲ ಕೂಡಿಬಂದಿದೆ. ಶೀಘ್ರದಲ್ಲೇ ಈ 'ದಬಾಂಗ್' ಬಾಯ್ ಲೈಫಲ್ಲಿ ಹೊಸ ಹುಡುಗಿಯ ಪ್ರವೇಶವಾಗುತ್ತಿದೆ ಎನ್ನುತ್ತವೆ ಮೂಲಗಳು.

ಇತ್ತೀಚೆಗೆ ಸಲ್ಲು ಈ ಹುಡುಗಿ ಜೊತೆ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದೇ ಈ ಅನುಮಾನಗಳಿಗೆ ಕಾರಣವಾಗಿದೆ. ಇನ್ನೇನು ಮದುವೆ ವಯಸ್ಸು ಮೀರುತ್ತಿದ್ದರೂ ಸಲ್ಲು ಮಾತ್ರ ಶಾದಿ ಬಗ್ಗೆ ಹೆಚ್ಚಾಗಿ ತಲೆಕೆಡಿಸಿಕೊಳ್ಳುತ್ತಿಲ್ಲ. ಆದರೆ ಈಕೆಯೊಂದಿಗೆ ಹೆಚ್ಚಾಗಿ ಓಡಾಡುತ್ತಿರುವುದು ಮಾತ್ರ ಹಲವಾರು ಅನುಮಾನಗಳನ್ನು ಹುಟ್ಟುಹಾಕಿದೆ.

ಈಕೆ ಬೇರಾರು ಅಲ್ಲ ಕಳೆದ ಎರಡು ವರ್ಷಗಳಿಂದ ಸಲ್ಲುಗೆ ಆತ್ಮೀಯರಾಗಿರು ಕಿರುತೆರೆ ನಟಿ ಯುಲಿಯಾ ವಂತೂರ್. ರೋಮನಿಯನ್ ಟಿವಿಯಲ್ಲಿ ಈಕೆ ನಟಿಯಾಗಿ ನಿರೂಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಾಂದ್ರಾದ ಪಂಚತಾರಾ ಹೋಟೆಲ್ ಗೆ ಇಬ್ಬರೂ ಪ್ರತಿದಿನ ಭೇಟಿ ನೀಡುತ್ತಿದ್ದು ಶೀಘ್ರದಲ್ಲೇ ಹಾರ ಬದಲಾಯಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.

ಈ ಹಿಂದೆ ಸಲ್ಲು ಇದೇ ರೀತಿ ಹಲವರೊಂದಿಗೆ ಡೇಟಿಂಗ್ ನಡೆಸಿದ್ದರು. ಸೋಮಿ ಅಲಿ, ಸಂಗೀತಾ ಬಿಜಲಾನಿ, ಐಶ್ವರ್ಯಾ ರೈ, ಕತ್ರಿನಾ ಕೈಫ್. ಆದರೆ ಇವರ್‍ಯಾರು ಸಲ್ಲುಗೆ ಬಾಳಸಂಗಾತಿಯಾಗಲಿಲ್ಲ. ಆದರೆ ಈ ಬಾರಿ ಮಾತ್ರ 'ಬಾಡಿಗಾರ್ಡ್' ಸಲ್ಮಾನ್ ಮದುವೆ ಬಗ್ಗೆ ಸೀರಿಯಸ್ ಆಗಿದ್ದಾರಂತೆ. (ಏಜೆನ್ಸೀಸ್)

English summary
According to sources Bollywood actor Salman Khan is soon to enter wedlock. The mystery girl is none other than Romanian Television actress and anchor Iulia Vantur, whom the actor has known for over two years now.
Please Wait while comments are loading...