For Quick Alerts
  ALLOW NOTIFICATIONS  
  For Daily Alerts

  ಮುಂದಿನ ಚಿತ್ರದಲ್ಲಿ ಸಲ್ಮಾನ್ ಖಾನ್ ಖಳನಾಯಕ.!

  By Bharath Kumar
  |
  ಸಲ್ಮಾನ್ ಖಾನ್ ಮುಂದಿನ ಚಿತ್ರದಲ್ಲಿ ಖಳನಾಯಕ | Filmibeat Kannada

  'ಟೈಗರ್ ಜಿಂದಾ ಹೈ' ಚಿತ್ರದ ಸೂಪರ್ ಯಶಸ್ಸಿನ ನಂತರ ಸಲ್ಮಾನ್ ಖಾನ್ 'ರೇಸ್-3' ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ. ಈ ಚಿತ್ರದಲ್ಲಿ ಸಲ್ಲು ಹೀರೋ ಆಲ್ಲ, ವಿಲನ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಈಗ ಹೊರಬಿದ್ದಿದೆ.

  ರೆಗ್ಯುಲರ್ ಸಿನಿಮಾಗಳಲ್ಲಿ ಇರುವಂತಹ ವಿಲನ್ ಪಾತ್ರ ಇದಲ್ಲ. ಇದೊಂದು ರೀತಿಯ ಸೈಕೋ ವ್ಯಕ್ತಿತ್ವ ಹೊಂದಿರುವ ಪಾತ್ರ. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಸಲ್ಲು ಈ ತರ ಪಾತ್ರ ನಿಭಾಯಿಸಿಲ್ಲ. ಆದ್ರೆ, ರೇಸ್ 3 ಚಿತ್ರದಲ್ಲಿ ಇಂತಹ ಪಾತ್ರವನ್ನ ಆಯ್ಕೆ ಮಾಡಿಕೊಂಡಿದ್ದಾರೆ.

  ಸಲ್ಮಾನ್ ಮನೆ ಮುಂದೆ ಹೈಡ್ರಾಮಾ: ಆತ್ಮಹತ್ಯೆಗೆ ಮುಂದಾದ 'ಪಾಗಲ್' ಅಭಿಮಾನಿಸಲ್ಮಾನ್ ಮನೆ ಮುಂದೆ ಹೈಡ್ರಾಮಾ: ಆತ್ಮಹತ್ಯೆಗೆ ಮುಂದಾದ 'ಪಾಗಲ್' ಅಭಿಮಾನಿ

  ''ವಿಲನ್ ಪಾತ್ರಗಳಲ್ಲಿ ನಾನು ನಟಿಸಲ್ಲ'' ಎಂದು ಸ್ವತಃ ಸಲ್ಮಾನ್ ಖಾನ್ ಹೇಳಿಕೊಂಡಿದ್ದರು. ''ನಾನೊಬ್ಬ ಹೀರೋ ಆಗಿರುತ್ತೇನೆ. ಪ್ರೇಕ್ಷಕರನ್ನ ರಂಜಿಸುವುದು ಮಾತ್ರ ನನ್ನ ಗುರಿ'' ಎಂದಿದ್ದರು. ಈಗ ಸಡನ್ ಆಗಿ ಈ ಬದಲಾವಣೆ ಮಾಡಿರುವ ಸಲ್ಲು ನೆಗಿಟಿವ್ ಪಾತ್ರಕ್ಕೆ ಮತ್ತೆ ಜೈ ಎಂದಿದ್ದಾರೆ.

  'ದಬ್ಬಂಗ್ 3'ಗೆ ನಿರ್ದೇಶನ ಮಾಡ್ತಾರೆ ಪ್ರಭುದೇವ!'ದಬ್ಬಂಗ್ 3'ಗೆ ನಿರ್ದೇಶನ ಮಾಡ್ತಾರೆ ಪ್ರಭುದೇವ!

  ಇನ್ನುಳಿದಂತೆ ಸಲ್ಮಾನ್ ಖಾನ್ ಅಭಿನಯಿಸುತ್ತಿರುವ ಈ ಚಿತ್ರದಲ್ಲಿ ಬಹುದೊಡ್ಡ ತಾರಬಳಗವಿದ್ದು, ಜಾಕ್ವೆಲಿನ್ ಫರ್ನಾಂಡಿಸ್ ನಾಯಕಿಯಾಗಿದ್ದಾರೆ. ಅನಿಲ್ ಕಪೂರ್, ಬಾಬಿ ಡಿಯೋಲ್, ಡೈಸಿ ಶಾ ಸೇರಿದಂತೆ ಹಲವರು ಬಣ್ಣ ಹಚ್ಚಲಿದ್ದಾರೆ. ರೆಮೋ ಡಿಸೋಜಾ ಈ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದು, ಸಲ್ಮಾನ್ ಖಾನ್ ಸಹ ನಿರ್ಮಾಪಕರಾಗಿದ್ದಾರೆ.

  English summary
  We all know that Salman Khan is all set to start shooting for Race 3 along with Jacqueline Fernandez and it is now reported that the actor will play the role of a villain.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X