For Quick Alerts
  ALLOW NOTIFICATIONS  
  For Daily Alerts

  ವೃತ್ತಿ ಜೀವನದಲ್ಲೇ ಮೊದಲ ಬಾರಿಗೆ ಬಯೋಪಿಕ್ ಗೆ ಸಹಿ ಹಾಕಿದ ಸಲ್ಮಾನ್; ಯಾರ ಪಾತ್ರದಲ್ಲಿ ನಟನೆ?

  |

  ಬಾಲಿವುಡ್ ನ ಖ್ಯಾತ ನಟ, ಬ್ಯಾಡ್ ಬಾಯ್ ಸಲ್ಮಾನ್ ಖಾನ್ ತರಹೇವಾರಿ ಪಾತ್ರಗಳ ಮೂಲಕ ಅಭಿಮಾನಿಗಳನ್ನು ರಂಜಿಸಿದ್ದಾರೆ, ಮತ್ತು ರಂಜಿಸುತ್ತಿದ್ದಾರೆ. ಚಿತ್ರರಂಗದಲ್ಲಿ 32 ವರ್ಷಗಳನ್ನು ಪೂರೈಸಿರುವ ಸಲ್ಮಾನ್ ತನ್ನ ವೃತ್ತಿ ಜೀವನದಲ್ಲಿ ಇದುವರೆಗೂ ಬಯೋಪಿಕ್ ನಲ್ಲಿ ಕಾಣಿಸಿಕೊಂಡಿರಲಿಲ್ಲ. ಇದೀಗ ಮೊದಲ ಬಾರಿಗೆ ಜೀವನಚರಿತ್ರೆಯಲ್ಲಿ ಮಿಂಚಲು ಸಜ್ಜಾಗಿದ್ದಾರೆ.

  ಬಾಲಿವುಡ್ ನಲ್ಲಿ ಈಗಾಗಲೇ ಸಾಕಷ್ಟು ಬಯೋಪಿಕ್ ಗಳು ಬಂದಿವೆ ಮತ್ತು ತಯಾರಾಗುತ್ತಿವೆ. ಕೆಲವು ಬಯೋಪಿಕ್ ಗಳು ಸೂಪರ್ ಹಿಟ್ ಆದರೆ ಇನ್ನು ಕೆಲವು ಹೇಳುವಷ್ಟು ಸದ್ದು ಮಾಡಿಲ್ಲ. ಆದರೂ ಬಯೋಪಿಕ್ ಗಳ ನಿರ್ಮಾಣದಲ್ಲಿ ಬಾಲಿವುಡ್ ಹಿಂದೆ ಬಿದ್ದಿಲ್ಲ. ಇದೀಗ ಸಲ್ಮಾನ್ ಖಾನ್ ನಟಿಸುತ್ತಿರುವ ಬಯೋಪಿಕ್ ಭಾರಿ ಕುತೂಹಲ ಮೂಡಿಸಿದೆ. ಮುಂದೆ ಓದಿ..

  ಸಲ್ಮಾನ್ ಬಳಿಕ 'ಹಮ್ ದಿಲ್ ದೇ ಚುಕೆ ಸನಮ್' ಚಿತ್ರದ ಬಗ್ಗೆ ಐಶ್ವರ್ಯಾ ಪೋಸ್ಟ್: ಏನಿದೆ? ಸಲ್ಮಾನ್ ಬಳಿಕ 'ಹಮ್ ದಿಲ್ ದೇ ಚುಕೆ ಸನಮ್' ಚಿತ್ರದ ಬಗ್ಗೆ ಐಶ್ವರ್ಯಾ ಪೋಸ್ಟ್: ಏನಿದೆ?

  ಭಾರತದ ಖ್ಯಾತ ಗೂಢಚಾರಿ ಪಾತ್ರದಲ್ಲಿ ಸಲ್ಮಾನ್

  ಭಾರತದ ಖ್ಯಾತ ಗೂಢಚಾರಿ ಪಾತ್ರದಲ್ಲಿ ಸಲ್ಮಾನ್

  ಇದೀಗ ಸಲ್ಮಾನ್ ಖಾನ್ ಸಹಿ ಮಾಡಿರುವುದು ಬ್ಲ್ಯಾಕ್ ಟೈಗರ್ ಎಂದೇ ಖ್ಯಾತಿ ಗಳಿಸಿದ್ದ ಭಾರತದ ಖ್ಯಾತ ಗೂಢಚಾರಿ ರವೀಂದ್ರ ಕೌಶಿಕ ಪಾತ್ರಕ್ಕೆ. ನಿರ್ದೇಶಕ ರಾಜ್ ಕುಮಾರ್ ಗುಪ್ತಾ, ರವೀಂದ್ರ ಕೌಶಿಕ್ ಜೀವನವನ್ನು ತೆರೆಮೇಲೆ ತರಲು ಸಿದ್ಧತೆ ನಡೆಸಿದ್ದು, ಸಲ್ಮಾನ್ ಖಾನ್ ಅವರನ್ನು ರವೀಂದ್ರ ಪಾತ್ರಕ್ಕೆ ಆಯ್ಕೆ ಮಾಡಿದ್ದಾರೆ.

  ಬ್ಲ್ಯಾಕ್ ಟೈಗರ್ ಎಂದೇ ಖ್ಯಾತಿಗಳಿಸಿದ್ದ ರವೀಂದ್ರ ಕೌಶಿಕ್

  ಬ್ಲ್ಯಾಕ್ ಟೈಗರ್ ಎಂದೇ ಖ್ಯಾತಿಗಳಿಸಿದ್ದ ರವೀಂದ್ರ ಕೌಶಿಕ್

  ಈ ಚಿತ್ರಕ್ಕೆ ಹತ್ತಿರವಾದ ಮೂಲವೊಂದು ಚಿತ್ರದ ಬಗ್ಗೆ ಸಂಪೂರ್ಣವಾ ಮಾಹಿತಿ ಬಹಿರಂಗ ಪಡಿಸಿದ್ದಾರೆ. ಆಂಗ್ಲ ವೆಬ್ ಪೋರ್ಟಲ್ ಜೊತೆ ಮಾತನಾಡಿ, "ಇದು ಪಕ್ಕಾ ಆಕ್ಷನ್ ಥ್ರಿಲ್ಲರ್ ಸಿನಿಮಾವಾಗಿದ್ದು, ಭಾರತೀಯ ಇತಿಹಾಸದ ನಂಬಲಾಗದ ನಿಜ ಕಥೆಯನ್ನು ಆಧರಿಸಿದೆ. ಇದು ಭಾರತದ ಗೂಢಚಾರಿ ರವೀಂದ್ರ ಕೌಶಿಕ್ ಅವರ ಜೀವನವನ್ನು ಆಧರಿಸಿದ ಚಿತ್ರ. ಬ್ಲ್ಯಾಕ್ ಟೈಗರ್ ಎಂದು ಪ್ರಸಿದ್ಧರಾಗಿದ್ದರು. ಭಾರತದ ಖ್ಯಾತ ಗೂಢಚಾರಿಯಾಗಿದ್ದರು.

  ಸಲ್ಮಾನ್ ಖಾನ್ ಜೊತೆ ಸಿನಿಮಾ ಮಾಡಿ ತಪ್ಪು ಮಾಡಿದೆ: ನಟಿ ಜರೀನ್ಸಲ್ಮಾನ್ ಖಾನ್ ಜೊತೆ ಸಿನಿಮಾ ಮಾಡಿ ತಪ್ಪು ಮಾಡಿದೆ: ನಟಿ ಜರೀನ್

  5 ವರ್ಷಗಳಿಂದ ರಾಜ್ ಕುಮಾರ್ ಸಂಶೋದನೆ

  5 ವರ್ಷಗಳಿಂದ ರಾಜ್ ಕುಮಾರ್ ಸಂಶೋದನೆ

  "ರಾಜ್ ಕುಮಾರ್ ಗುಪ್ತಾ ಕಳೆದ 5 ವರ್ಷಗಳಿಂದ ಅವರ ಜೀವನದ ಬಗ್ಗೆ ಸಂಶೋದನೆ ನಡೆಸುತ್ತಿದ್ದಾರೆ. ಅವರ ಸಾಧನೆ ಮತ್ತು ಪರಂಪರೆಗೆ ನ್ಯಾಯ ಒದಗಿಸುವ ಚಿತ್ರಕಥೆಯನ್ನು ಲಾಕ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ರೆಟ್ರಸಲ್ಮಾನ್ ಅವರಿಗೂ ವಿವರಿಸಿದ್ದಾರೆ. ಚಿತ್ರ ಮಾಡಲು ಸಲ್ಮಾನ್ ಖಾನ್ ಕೂಡ ಒಪ್ಪಿಕೊಂಡಿದ್ದಾರೆ. ಇದು ಭಾರತೀಯ ಗುಪ್ತಚರ ಇತಿಹಾಸ ಅತ್ಯಂತ ವಿರೋಚಿತ ಮತ್ತು ಆಘಾತಕಾರಿ ಕಥೆಗಳಲ್ಲಿ ಒಂದಾಗಿದೆ" ವೆಬ್ ಪೋರ್ಟಲ್ ಗೆ ಬಹಿರಂಗ ಪಡಿಸಿದ್ದಾರೆ.

  ರೆಟ್ರೋ ಶೈಲಿಯಲ್ಲಿ ಮೂಡಿಬರಲಿದೆ ಸಿನಿಮಾ

  ರೆಟ್ರೋ ಶೈಲಿಯಲ್ಲಿ ಮೂಡಿಬರಲಿದೆ ಸಿನಿಮಾ

  ಇನ್ನು ಚಿತ್ರಕ್ಕೆ ಬ್ಲ್ಯಾಕ್ ಟೈಗರ್ ಎಂದೇ ಹೆಸರಿಡಲು ಸಿನಿಮಾತಂಡ ನಿರ್ಧರಿಸಿತ್ತು. ಆದರೆ ಈ ಹೆಸರನ್ನು ಇಡಲು ತಯಾರಾಕರು ಹಿಂದೇಟು ಹಾಕಿದ್ದಾರೆ. 70 ಮತ್ತು 80ರ ದಶಕದ ಕಥೆ ಇದಾಗಿದ್ದು, ಈ ಸಿನಿಮಾ ರೆಟ್ರೋ ಶೈಲಿಯಲ್ಲಿ ಮೂಡಿಬರಲಿದೆ.

  ಸಂಚಾರಿ ವಿಜಯ್ ಹೆಸರಲ್ಲಿ ದೇವರು ಮೆಚ್ಚುವ ಕೆಲಸ ಮಾಡಿದ ಚಕ್ರವರ್ತಿ ಚಂದ್ರಚೂಡ್ | Filmibeat Kannada
  ಏಕ್ ಥಾ ಟೈಗರ್ ನಲ್ಲಿತ್ತ ರವೀಂದ್ರ ಕೌಶಿಕ್ ಕಥೆ?

  ಏಕ್ ಥಾ ಟೈಗರ್ ನಲ್ಲಿತ್ತ ರವೀಂದ್ರ ಕೌಶಿಕ್ ಕಥೆ?

  ಅಂದಹಾಗೆ ಸಲ್ಮಾನ್ ಖಾನ್ ನಟನೆಯ 2012ರಲ್ಲಿ ಬಿಡುಗಡೆಯಾದ ಏಕ್ ಥಾ ಟೈಗರ್ ಸಿನಿಮಾ ರವೀಂದ್ರ ಕೌಶಿಕ್ ಅವರ ಜೀವನ ಆಧರಿಸಿದೆ ಎನ್ನುವ ವದಂತಿ ಹಬ್ಬಿತ್ತು. ಆದರೆ ಕಾಲ್ಪನಿಕ ಕಥೆಯಾಗಿತ್ತು. ಇದೀಗ ರವೀಂದ್ರ ಕೌಶಿಕ್ ಸಿನಿಮಾದ ಮೂಲಕ ಸಲ್ಮಾನ್ ಖಾನ್ ಅಭಿಮಾನಿಗಳ ಮುಂದೆ ಬರಲು ತಯಾರಿ ನಡೆಸುತ್ತಿದ್ದಾರೆ.

  ಸಲ್ಮಾನ್ ಈಗಾಗಲೇ ಸಾಕಷ್ಟು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಕಭಿ ಈದ್ ಕಭಿ ದಿವಾಳಿ, ಟೈಗರ್-3, ಮಾಸ್ಟರ್ ಹಿಂದಿ ರಿಮೇಕ್ ಸೇರಿದಂತೆ ಇನ್ನು ಕೆಲವು ಸಿನಿಮಾಗಳಿವೆ. ಇದೀಗ ಬಯೋಪಿಕ್ ಕೂಡ ಸೇರ್ಪಡೆಯಾಗಿದೆ.

  English summary
  Salman Khan to play Indian spy Ravindra Kaushik role in his first ever biopic.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X