twitter
    For Quick Alerts
    ALLOW NOTIFICATIONS  
    For Daily Alerts

    25,000 ಸಿನಿಮಾ ಕಾರ್ಮಿಕರಿಗೆ ಸಹಾಯ ಮಾಡಲು ಮುಂದಾದ ಸಲ್ಮಾನ್ ಖಾನ್

    |

    ಚಿತ್ರೋದ್ಯಮ ಸ್ಥಗಿತದಿಂದ ಸಂಕಷ್ಟಕ್ಕೆ ಸಿಲುಕಿರುವ ಹಿಂದಿ ಚಿತ್ರರಂಗದ ದಿನಗೂಲಿ ಕಾರ್ಮಿಕರಿಗೆ ಬಾಲಿವುಡ್ ನಟ ಸಲ್ಮಾನ್ ಖಾನ್ ಸಹಾಯಹಸ್ತ ಚಾಚಿದ್ದಾರೆ. ನಿತ್ಯದ ಊಟಕ್ಕೆ ಪರದಾಡುವ ಸ್ಥಿತಿಯಲ್ಲಿರುವ 25,000 ದಿನಗೂಲಿ ನೌಕರರಿಗೆ ಸಲ್ಮಾನ್, ಆರ್ಥಿಕ ಸಹಾಯ ಮಾಡಲು ಮುಂದಾಗಿದ್ದಾರೆ.

    Recommended Video

    ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ ಪುನೀತ್ ರಾಜ್ ಕುಮಾರ್ | Puneeth Rajkumar | Birthday | Filmibeat Kannada

    21 ದಿನಗಳ ಲಾಕ್‌ಡೌನ್‌ನಿಂದ ಸಿನಿಮಾ ದಿನಗೂಲಿ ನೌಕರರ ಜೀವನೋಪಾಯಕ್ಕೆ ತೀವ್ರ ಹೊಡೆತ ಬಿದ್ದಿದೆ. ಹೀಗಾಗಿ ಸಲ್ಮಾನ್ ಖಾನ್, ತಮ್ಮ ಬೀಯಿಂಗ್ ಹ್ಯೂಮನ್ ಫೌಂಡೇಷನ್ ಮೂಲಕ ಆರ್ಥಿಕ ಸಂಕಷ್ಟದಲ್ಲಿರುವ ಸಿನಿ ಕಾರ್ಮಿಕರಿಗೆ ನೆರವಾಗುವ ಸಲುವಾಗಿ ತಮ್ಮನ್ನು ಸಂಪರ್ಕಿಸಿದ್ದಾರೆ ಎಂದು ಫೆಡರೇಷನ್ ಆಪ್ ವೆಸ್ಟರ್ನ್ ಇಂಡಿಯನ್ ಸಿನಿ ಎಂಪ್ಲಾಯೀಸ್ ಅಧ್ಯಕ್ಷ ಬಿ.ಎನ್. ತಿವಾರಿ ಹೇಳಿದ್ದಾರೆ. ಮುಂದೆ ಓದಿ...

    ಕೊರೊನಾ ವಿರುದ್ಧ ಹೋರಾಟಕ್ಕೆ ಅಕ್ಷಯ್ ಭಾರಿ ಮೊತ್ತದ ದೇಣಿಗೆ: ಹೆಮ್ಮೆಯಾಗುತ್ತೆ ಎಂದ ಪತ್ನಿಕೊರೊನಾ ವಿರುದ್ಧ ಹೋರಾಟಕ್ಕೆ ಅಕ್ಷಯ್ ಭಾರಿ ಮೊತ್ತದ ದೇಣಿಗೆ: ಹೆಮ್ಮೆಯಾಗುತ್ತೆ ಎಂದ ಪತ್ನಿ

    25,000 ಜನರಿಗೆ ನೆರವು

    25,000 ಜನರಿಗೆ ನೆರವು

    'ದಿನಗೂಲಿ ಕಾರ್ಮಿಕರಿಗೆ ಸಹಾಯ ಮಾಡಲು ಸಲ್ಮಾನ್ ಅವರ ಬೀಯಿಂಗ್ ಹ್ಯೂಮನ್ ಫೌಂಡೇಷನ್ ಮುಂದೆ ಬಂದಿದೆ. ನಮ್ಮಲ್ಲಿ ಸುಮಾರು ಐದು ಲಕ್ಷ ದಿನಗೂಲಿ ಕಾರ್ಮಿಕರಿದ್ದಾರೆ. ಅವರಲ್ಲಿ 25,000 ಜನರಿಗೆ ನೆರವಿನ ಅತಿ ಅಗತ್ಯವಿದೆ. ಈ ಎಲ್ಲ ಕಾರ್ಮಿಕರ ಅಗತ್ಯಗಳನ್ನು ತಾವೇ ಪೂರೈಸುವುದಾಗಿ ಬೀಯಿಂಗ್ ಹ್ಯೂಮನ್ ತಿಳಿಸಿದೆ' ಎಂದು ತಿಳಿಸಿದ್ದಾರೆ.

    ಖಾತೆಗಳಿಗೆ ನೇರವಾಗಿ ಹಣ

    ಖಾತೆಗಳಿಗೆ ನೇರವಾಗಿ ಹಣ

    ಈ 25,000 ಕಾರ್ಮಿಕರ ಖಾತೆಯ ವಿವರಗಳನ್ನು ಅವರು ಕೇಳಿದ್ದಾರೆ. ಅವರಿಗೆ ನೇರವಾಗಿ ಹಣ ತಲುಪುವುದನ್ನು ಖಾತರಿಪಡಿಸಿಕೊಳ್ಳಲು ಅವರು ಬಯಸಿದ್ದಾರೆ ಎಂದು ತಿವಾರಿ ಹೇಳಿದ್ದಾರೆ. ಇದರಿಂದ ಭಾರಿ ಸಂಖ್ಯೆಯ ಕಾರ್ಮಿಕರ ಜೀವನೋಪಾಯಕ್ಕೆ ಸಲ್ಮಾನ್ ಖಾನ್ ನೆರವಾಗಲಿದ್ದಾರೆ.

    ಐ ಸ್ಟ್ಯಾಂಡ್ ವಿತ್ ಹ್ಯುಮಾನಿಟಿ

    ಐ ಸ್ಟ್ಯಾಂಡ್ ವಿತ್ ಹ್ಯುಮಾನಿಟಿ

    ಕರಣ್ ಜೋಹರ್, ಕಿಯಾರಾ ಅಡ್ವಾಣಿ, ಆಯುಷ್ಮಾನ್ ಖುರಾನಾ, ತಾಪ್ಸಿ ಪನ್ನು ಮುಂತಾದ ಬಾಲಿವುಡ್ ಸೆಲೆಬ್ರಿಟಿಗಳು 'ಐ ಸ್ಟ್ಯಾಂಡ್ ವಿತ್ ಹ್ಯುಮಾನಿಟಿ' ಚಟುವಟಿಕೆಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಭಾರತೀಯ ಚಲನಚಿತ್ರ ಮತ್ತು ಟೆಲಿವಿಷನ್ ಉದ್ಯಮ, ಆರ್ಟ್ ಆಫ್ ಲಿವಿಂಗ್ ಫೌಂಡೇಷನ್, ಅಂತಾರಾಷ್ಟ್ರೀಯ ಮಾನವೀಯ ಮೌಲ್ಯಗಳ ಸಂಘಟನೆ ಜತೆಗೂಡಿ ಈ ಚಟುವಟಿಕೆ ಆರಂಭಿಸಿವೆ.

    ನಿರ್ಮಾಪಕರ ಪರಿಹಾರ ನಿಧಿ

    ನಿರ್ಮಾಪಕರ ಪರಿಹಾರ ನಿಧಿ

    ಸಿನಿಮಾ, ಟೆಲಿವಿಷನ್ ಮತ್ತು ವೆಬ್ ಪ್ರೊಡಕ್ಷನ್ಸ್ ಕ್ಷೇತ್ರಗಳಲ್ಲಿನ ದಿನಗೂಲಿ ಕಾರ್ಮಿಕರಿಗೆ ಸಹಾಯ ಮಾಡುವ ಸಲುವಾಗಿ ಪರಿಹಾರ ನಿಧಿಯನ್ನು ಸ್ಥಾಪಿಸುವುದಾಗಿ ಪ್ರೊಡ್ಯೂಸರ್ಸ್ ಗಿಲ್ಡ್ ಆಫ್ ಇಂಡಿಯಾ ಮಾರ್ಚ್ 18ರಂದು ತಿಳಿಸಿತ್ತು. ಸುಧೀರ್ ಮಿಶ್ರಾ, ವಿಕ್ರಮಾದಿತ್ಯ ಮೋಟ್ವಾನಿ ಮತ್ತು ಅನುರಾಗ್ ಕಶ್ಯಪ್ ನೇತೃತ್ವದಲ್ಲಿ ಈ ಕಾರ್ಯ ಆರಂಭವಾಗಿತ್ತು.

    English summary
    Bollywood actor Salman Khan through his Being Human foundation has come forward to provide financial support to 25,000 daily wage workers of film industry.
    Monday, March 30, 2020, 9:49
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X