»   » ಟಿಬಿ ಕಾಯಿಲೆಯಿಂದ ಬಳಲುತ್ತಿದ್ದ ನಟಿಗೆ ಕಡೆಗೂ ಸಹಾಯ ಹಸ್ತ ಚಾಚಿದ ಸಲ್ಮಾನ್!

ಟಿಬಿ ಕಾಯಿಲೆಯಿಂದ ಬಳಲುತ್ತಿದ್ದ ನಟಿಗೆ ಕಡೆಗೂ ಸಹಾಯ ಹಸ್ತ ಚಾಚಿದ ಸಲ್ಮಾನ್!

Posted By:
Subscribe to Filmibeat Kannada

ಕಡೆಗೂ ನಟಿ ಪೂಜಾ ದದ್ವಾಲ್ ಮೊಗದಲ್ಲಿ ಮಂದಹಾಸ ಮೂಡಿದೆ. ಟಿಬಿ ಕಾಯಿಲೆಗೆ ತುತ್ತಾಗಿ, ಚಿಕಿತ್ಸೆಗೆ ಹಣವಿಲ್ಲದೇ ಒದ್ದಾಡುತ್ತಿದ್ದ ನಟಿ ಪೂಜಾ ದದ್ವಾಲ್ ಗೆ ಸಹಾಯ ಮಾಡಲು ಬಾಲಿವುಡ್ ನಟ ಸಲ್ಮಾನ್ ಖಾನ್ ಮುಂದಾಗಿದ್ದಾರೆ.

ಮೂರು ವಾರಗಳಿಂದ ಮುಂಬೈನ ಟಿಬಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಪೂಜಾ ದದ್ವಾಲ್, ಸಲ್ಮಾನ್ ಖಾನ್ ರಿಂದ ಸಹಾಯ ನಿರೀಕ್ಷಿಸಿದ್ದರು. ಯಾಕಂದ್ರೆ, 1995 ರಲ್ಲಿ ತೆರೆಕಂಡ 'ವೀರ್ ಗತಿ' ಚಿತ್ರದಲ್ಲಿ ಸಲ್ಮಾನ್ ಖಾನ್ ಜೊತೆಗೆ ಪೂಜಾ ದದ್ವಾಲ್ ಅಭಿನಯಿಸಿದ್ದರು. ಅಂದು ಸಲ್ಲು ಜೊತೆಗೆ ಅಭಿನಯಿಸಿದ್ದ ಈ ನಟಿ ಇಂದು ಅದೇ ಸಲ್ಲು ಭಾಯ್ ರಿಂದ ಸಹಾಯ ಕೋರಿದ್ದರು.

ತಮ್ಮ ಆರ್ಥಿಕ ಸಂಕಷ್ಟ ಹಾಗೂ ಅನಾರೋಗ್ಯ ಪರಿಸ್ಥಿತಿಯನ್ನು ವಿವರಿಸಿ ಸಲ್ಮಾನ್ ಖಾನ್ ಗೆ ಪೂಜಾ ದದ್ವಾಲ್ ಒಂದು ವಿಡಿಯೋ ಕೂಡ ಕಳುಹಿಸಿದ್ದರು. ಈಗ ಆ ವಿಡಿಯೋ ನೋಡಿ, ನಟಿಗೆ ಸಹಾಯ ಹಸ್ತ ಚಾಚಲು ಸಲ್ಮಾನ್ ಖಾನ್ ನಿರ್ಧರಿಸಿದ್ದಾರೆ. ಮುಂದೆ ಓದಿರಿ...

ಪೂಜಾ ಸಹಾಯಕ್ಕೆ ಬಂದ ಸಲ್ಮಾನ್ ಖಾನ್

ಟಿಬಿ ಕಾಯಿಲೆಯಿಂದ ನರಳುತ್ತಿರುವ ನಟಿ ಪೂಜಾ ದದ್ವಾಲ್ ಆರ್ಥಿಕವಾಗಿ ಸಹಾಯಕ್ಕೆ ಮಾಡಲು ಸಲ್ಮಾನ್ ಖಾನ್ ಮನಸ್ಸು ಮಾಡಿದ್ದಾರೆ. ''ವಿಷಯ ಕೇಳಿ ಮನಸ್ಸಿಗೆ ತುಂಬಾ ಬೇಸರ ಆಯ್ತು. ಅವರಿಗೆ ಖಂಡಿತ ಸಹಾಯ ಮಾಡುತ್ತೇನೆ. ಪೂಜಾ ಆರೋಗ್ಯದಲ್ಲಿ ಸುಧಾರಣೆ ಕಾಣಲಿದೆ'' ಎಂದು ಪತ್ರಿಕಾಗೋಷ್ಟಿಯಲ್ಲಿ ಸಲ್ಮಾನ್ ಖಾನ್ ಹೇಳಿದ್ದಾರೆ.

ಟಿಬಿ ಕಾಯಿಲೆಯಿಂದ ಬಳಲುತ್ತಿರುವ ಬಾಲಿವುಡ್ ಬೆಡಗಿ: ಸಲ್ಮಾನ್ ಸಹಾಯಕ್ಕೆ ಅಂಗಲಾಚುತ್ತಿರುವ ನಟಿ

ಚಿಕಿತ್ಸೆಗೆ ಹಣ ಸಿಕ್ಕರೆ ಸಾಕು

''ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಆರ್ಥಿಕವಾಗಿ ಸಹಾಯ ಮಾಡಿದರೆ ಸಾಕು. ನನ್ನ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದರೆ, ಕೆಲಸ ಮಾಡಿಕೊಂಡು ಜೀವನ ನಡೆಸುತ್ತೇನೆ'' ಎಂದು ಪೂಜಾ ದದ್ವಾಲ್ ತಿಳಿಸಿದ್ದಾರೆ.

ಟಿಬಿ ರೋಗಕ್ಕೆ ತುತ್ತಾಗಿ, ದುಡ್ಡಿಲ್ಲದೆ ಒದ್ದಾಡುತ್ತಿದ್ದ ನಟಿಯ ಸಹಾಯಕ್ಕೆ ಬಂದ ನಟ ಇವರೇ!

ಪೂಜಾಗೆ ಸಹಾಯ ಮಾಡಿದ ರವಿ ಕಿಶನ್

ಆರ್ಥಿಕ ಸಂಕಷ್ಟ ಹಾಗೂ ಅನಾರೋಗ್ಯದಿಂದ ಬಳಲುತ್ತಿರುವ ನಟಿ ಪೂಜಾ ದದ್ವಾಲ್ ಗೆ ಭೋಜ್ ಪುರಿ ನಟ ರವಿ ಕಿಶನ್ ಕೂಡ ಸಹಾಯ ಮಾಡಿದ್ದರು. ಹೈದರಾಬಾದ್ ನಲ್ಲಿ ಚಿತ್ರೀಕರಣದಲ್ಲಿ ಬಿಜಿಯಾಗಿದ್ದರೂ, ಪೂಜಾ ಪರಿಸ್ಥಿತಿ ತಿಳಿದ ಕೂಡಲೆ, ಮುಂಬೈನಲ್ಲಿ ಇರುವ ತಮ್ಮ ಪರಿಚಯಸ್ಥರಿಗೆ ಫೋನ್ ಮಾಡಿ, ಹಣ್ಣುಗಳ ಜೊತೆಗೆ ಹಣವನ್ನೂ ಪೂಜಾಗೆ ನೀಡಿ ಬರುವಂತೆ ರವಿ ಕಿಶನ್ ಕೋರಿದ್ದರು. ರವಿ ಕಿಶನ್ ಕೋರಿಕೆ ಮೇರೆಗೆ ಪರಿಚಯಸ್ಥರು ನಟಿ ಪೂಜಾ ರನ್ನ ಭೇಟಿ ಮಾಡಿ ಹಣ ಸಹಾಯ ಮಾಡಿ ಬಂದಿದ್ದರು.

ಇದಕ್ಕಿದ್ದಂತೆ ಪೂಜಾಗೆ ಏನಾಯಿತು.?

90 ರ ದಶಕದಲ್ಲಿ ತೆರೆಮೇಲೆ ಮಿನುಗಿದ್ದ ನಟಿ ಪೂಜಾ ದದ್ವಾಲ್, ಬಳಿಕ ಗೋವಾದ ಕೆಸಿನೋ ಒಂದರಲ್ಲಿ ಹಲವು ವರ್ಷಗಳ ಕಾಲ ಮ್ಯಾನೇಜರ್ ಆಗಿ ಕೆಲಸ ನಿರ್ವಹಿಸಿದ್ದರಂತೆ. ಆರು ತಿಂಗಳ ಹಿಂದೆ ಟಿ.ಬಿ ಕಾಯಿಲೆ ಇರುವುದು ಪೂಜಾಗೆ ಗೊತ್ತಾಗಿದೆ. ಪೂಜಾ ಆರೋಗ್ಯ ಕ್ಷೀಣಿಸುತ್ತಿದ್ದಂತೆ, ಆಕೆಯ ಪತಿ ಹಾಗೂ ಕುಟುಂಬದವರು ಬೀದಿಪಾಲು ಮಾಡಿದ್ದಾರೆ. ಹೀಗಾಗಿ ಪೂಜಾ ಕೈಯಲ್ಲಿ ಈಗ ದುಡ್ಡು ಇಲ್ಲ. ಒಂದು ಕಪ್ ಟೀ ಕುಡಿಯಬೇಕು ಅಂದರೂ ಇನ್ನೊಬ್ಬರನ್ನ ಬೇಡಿಕೊಳ್ಳುವ ಪರಿಸ್ಥಿತಿಗೆ ಪೂಜಾ ಬಂದುಬಿಟ್ಟಿದ್ದಾರೆ. ತಮ್ಮ ಆರ್ಥಿಕ ಸಂಕಷ್ಟ ಹಾಗೂ ಅನಾರೋಗ್ಯ ಪರಿಸ್ಥಿತಿಯನ್ನು ವಿವರಿಸಿ ಸಲ್ಮಾನ್ ಖಾನ್ ಗೆ ನಟಿ ಪೂಜಾ ದದ್ವಾಲ್ ಒಂದು ವಿಡಿಯೋ ಕಳುಹಿಸಿದ್ದರು. ಪೂಜಾ ಸಹಾಯಕ್ಕೆ ಇದೀಗ ಸಲ್ಮಾನ್ ಖಾನ್ ಹಾಗೂ ರವಿ ಕಿಶನ್ ಮುಂದೆ ಬಂದಿದ್ದಾರೆ.

English summary
Bollywood Actor Salman Khan to take care of 'Veergati' Actress Pooja Dadwal Medical treatment.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X