For Quick Alerts
  ALLOW NOTIFICATIONS  
  For Daily Alerts

  'ಕೃಷ್ಣಮೃಗ'ವನ್ನ ಸಲ್ಲು ಕೊಂದಿಲ್ಲ: ಯಾರನ್ನೋ ಕಾಪಾಡಲು ಆರೋಪಿಯಾದ್ರಂತೆ.!

  By Bharath Kumar
  |

  1998 ರಲ್ಲಿ ನಡೆದಿದ್ದ ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ ಬಾಲಿವುಡ್ ನಟ ಸಲ್ಮಾನ್ ಖಾನ್ ದೋಷಿ ಎಂದು ಜೋಧ್ ಫುರ್ ನ್ಯಾಯಾಲಯ ತೀರ್ಪು ನೀಡಿದೆ. ಇದರ ಪರಿಣಾಮ 5 ವರ್ಷ ಜೈಲುಶಿಕ್ಷೆ ಮತ್ತು 10 ಸಾವಿರ ರೂಪಾಯಿ ದಂಡ ಕೂಡ ವಿಧಿಸಲಾಗಿತ್ತು. ಆದ್ರೆ, ಈ ಪ್ರಕರಣದಲ್ಲಿ ಜೈಲು ಸೇರಿದ್ದ ಸಲ್ಮಾನ್ ಜಾಮೀನು ಪಡೆದು ಹೊರಗೆ ಬಂದಿದ್ದಾರೆ.

  ಸಲ್ಮಾನ್ ಜೊತೆಯಲ್ಲಿ ಆರೋಪಿಗಳ ಸ್ಥಾನದಲ್ಲಿ ಸೈಫ್ ಅಲಿ ಖಾನ್, ಸೋನಾಲಿ ಬೇಂದ್ರೆ, ಟಬು ಹಾಗೂ ನೀಲಂ ಅವರ ವಿರುದ್ಧ ಸಾಕ್ಷ್ಯಾಧಾರದ ಕೊರತೆ ಇದ್ದ ಕಾರಣ ನಿರ್ದೋಷಿ ಎಂದು ಪ್ರಕರಣದಿಂದ ಖುಲಾಸೆ ಸಿಕ್ಕಿದೆ.

  ಸಲ್ಮಾನ್ ಖಾನ್ ಪರ ನಿಂತ ನಟಿ ಜಯಾಬಚ್ಚನ್ ಸಲ್ಮಾನ್ ಖಾನ್ ಪರ ನಿಂತ ನಟಿ ಜಯಾಬಚ್ಚನ್

  ಇಷ್ಟೆಲ್ಲಾ ಆದ ಬಳಿಕ ಈಗ ಹೊಸ ಅನುಮಾನ ಬಾಲಿವುಡ್ ಮಂದಿಯನ್ನ ಹಾಗೂ ಅಭಿಮಾನಿಗಳನ್ನ ಕಾಡುತ್ತಿದೆ. ಅಷ್ಟಕ್ಕೂ, ಸಲ್ಮಾನ್ ಖಾನ್ ಕೃಷ್ಣಮೃಗವನ್ನ ಶೂಟ್ ಮಾಡಲೇ ಇಲ್ವಂತೆ., ಯಾರನ್ನೋ ಕಾಪಾಡುವ ಉದ್ದೇಶದಿಂದ ಸಲ್ಲು ಆರೋಪಿಯಾಗಿದ್ದಾರಂತೆ. ಏನಿದು ಟ್ವಿಸ್ಟ್.? ಯಾರನ್ನ ರಕ್ಷಿಸುತ್ತಿದ್ದಾರೆ ಭಜರಂಗಿ ಭಾಯ್ ಜಾನ್ ಎಂಬುದು ತಿಳಿಯಲು ಮುಂದೆ ಓದಿ.....

  ಸಲ್ಲು ಯಾರನ್ನೋ ರಕ್ಷಿಸುತ್ತಿದ್ದಾರೆ.?

  ಸಲ್ಲು ಯಾರನ್ನೋ ರಕ್ಷಿಸುತ್ತಿದ್ದಾರೆ.?

  ''ಸಲ್ಮಾನ್ ಖಾನ್ ಯಾವುದೇ ಪ್ರಾಣಿಗಳಿಗೆ ಹಾನಿ ಮಾಡುವುದಿಲ್ಲ. ಅವರು ಹೆಚ್ಚು ಪ್ರೀತಿಸುತ್ತಾರೆ. ನಿಜವಾದ ಅಪರಾಧಿಯನ್ನ ಬಹಿರಂಗ ಮಾಡಬೇಕು. 20 ವರ್ಷಗಳು ಬೇರೊಬ್ಬರ ಶಿಲುಬೆಯನ್ನು ಹೊತ್ತುಕೊಂಡಿದ್ದಾರೆ. ಅವರು ಬಂದೂಕಿನ ಪ್ರಚೋದಕವನ್ನ ಒತ್ತಿರುವುದಿಲ್ಲ. ಅವರು ಅಪರಾಧವನ್ನು ಮಾಡಲಿಲ್ಲ. ಮೂರ್ಖ ಭಾವನಾತ್ಮಕ ಕಾರಣಗಳಿಗಾಗಿ ಯಾರನ್ನೋ ರಕ್ಷಿಸುತ್ತಿದ್ದಾರೆ'' ಎಂದು ಸಲ್ಮಾನ್ ಖಾನ್ ಗೆಳತಿ ಸಿಮಿ ಗೆರ್ ವಾಲ್ ಅನುಮಾನ ವ್ಯಕ್ತಪಡಿಸುತ್ತಿದ್ದಾರೆ.

  ಏನಿದು ಕೃಷ್ಣಮೃಗ ಬೇಟೆ ಪ್ರಕರಣ? ನೀವು ತಿಳಿದುಕೊಳ್ಳಬೇಕಾದ ಸಂಗತಿಗಳುಏನಿದು ಕೃಷ್ಣಮೃಗ ಬೇಟೆ ಪ್ರಕರಣ? ನೀವು ತಿಳಿದುಕೊಳ್ಳಬೇಕಾದ ಸಂಗತಿಗಳು

  ಸತ್ಯ ನಮಗೆ ಗೊತ್ತಿದೆ

  ಸತ್ಯ ನಮಗೆ ಗೊತ್ತಿದೆ

  ''ಕೃಷ್ಣಮೃಗ ಬೇಟೆ ಪ್ರಕರಣದಲ್ಲಿ 20 ವರ್ಷದ ನಂತರ ಅಪರಾಧಿ ಆಗಿರುವ ಸಲ್ಲು ಎಂದಿಗೂ ಕೊಲ್ಲಲ್ಲ. ಸಲ್ಮಾನ್ ಹೆಸರಿನಲ್ಲಿ ಎಫ್.ಐ.ಆರ್ ದಾಖಲಾಗಿದೆ ಎಂಬ ಕಾರಣಕ್ಕೆ ಅವರು ಈ ಪ್ರಕರಣದ ಪ್ರಮುಖ ಆರೋಪಿಯಾಗಿದ್ದಾರೆ. ಬೇರೆ ಎಲ್ಲರೂ ಹೇಗೆ ಈ ಪ್ರಕರಣದಿಂದ ಖುಲಾಸೆಯಾದರು. ಸಲ್ಮಾನ್ ನಮಗೆ ಸತ್ಯವನ್ನು ತಿಳಿದಿದೆ. ನಾಳೆಯಾದರೂ ನ್ಯಾಯ ಸಿಗಲಿದೆ ಎಂಬ ಭರವಸೆ ನಮಗಿದೆ'' ನಟಿ ನಫೀಸಾ ಆಲಿಯಾ ತಿಳಿಸಿದ್ದಾರೆ.

  ಆದಷ್ಟೂ ಬೇಗ ಸತ್ಯ ಹೊರಬರುತ್ತೆ.!

  ಆದಷ್ಟೂ ಬೇಗ ಸತ್ಯ ಹೊರಬರುತ್ತೆ.!

  ''ಸೆಮಿ ಗೆರ್ ವಾಲ್, ಸಲ್ಮಾನ್ ಖಾನ್ ಮುಗ್ದತೆ ಬಗ್ಗೆ ನೀವು ಟ್ವೀಟ್ ಮಾಡಿರುವುದಕ್ಕೆ ನಾನು ಅಬಾರಿ. ಈ ಪ್ರಕರಣದಲ್ಲಿ ನಾನು ಕೂಡ ಅದೇ ಹೇಳಿದ್ದೇನೆ. ಹೌದು, ಇದು ನಿಜ, ಬೇರೆ ಯಾರನ್ನೋ ರಕ್ಷಿಸುವುದಕ್ಕಾಗಿ ಸಲ್ಮಾನ್ ಸತ್ಯವನ್ನ ಮುಚ್ಚಿಡುತ್ತಿದ್ದಾರೆ. ನನಗೆ ಭರವಸೆ ಇದೆ. ಅವರ ಮೇಲಿನ ಆರೋಪ ಮುಕ್ತವಾಗುತ್ತೆ ಮತ್ತು ಸತ್ಯ ಹೊರಬೀಳುತ್ತೆ'' ಎಂದು ಪತ್ರಕರ್ತ ಅಫ್ಸನಾ ಅಹ್ಮದ್ ಹೇಳಿದ್ದಾರೆ.

  ಕೃಷ್ಣ ಮೃಗ ಪ್ರಕರಣದಲ್ಲಿ ಸಲ್ಲು ಜೊತೆಗಿದ್ದ 4 ಕಲಾವಿದರ ಹಿಸ್ಟರಿ ಕೃಷ್ಣ ಮೃಗ ಪ್ರಕರಣದಲ್ಲಿ ಸಲ್ಲು ಜೊತೆಗಿದ್ದ 4 ಕಲಾವಿದರ ಹಿಸ್ಟರಿ

  ಗುಂಡಿನಿಂದ ಕೃಷ್ಣಮೃಗ ಸತ್ತಿರುವುದಕ್ಕೆ ಪುರಾವೆ ಇಲ್ಲ

  ಗುಂಡಿನಿಂದ ಕೃಷ್ಣಮೃಗ ಸತ್ತಿರುವುದಕ್ಕೆ ಪುರಾವೆ ಇಲ್ಲ

  ವಕೀಲ ನಿಶಾಂತ್ ಬೋರಾ ಅವರು ಹೇಳುವ ಪ್ರಕಾರ ''ಯಾವುದೇ ಗುಂಡಿನಿಂದ ಕೃಷ್ಣಮೃಗಗಳು ಸಾಯುವುದಿಲ್ಲ ಎಂಬ ನಿಲುವಿದೆ. ಇನ್ನು ಮೊದಲ ಪೋಸ್ಟ್ ಮಾರ್ಟಮ್ ವರದಿಯ ಪ್ರಕಾರ ಸತ್ತಿರುವ ಪ್ರಾಣಿ ಗುಂಡಿನ ಏಟಿಗೆ ಬಲಿಯಾಗಿಲ್ಲ. ನಾಯಿ ಕಚ್ಚಿರುವುದರಿಂದ ಸತ್ತಿದೆ ಎನ್ನಲಾಗಿದೆ.

  ಸಲ್ಮಾನ್ ನ ಜೈಲು ಪಾಲು ಮಾಡಿದ ಬಿಷ್ಣೋಯಿ ಸಮುದಾಯ: ಯಾರಿವರು?ಸಲ್ಮಾನ್ ನ ಜೈಲು ಪಾಲು ಮಾಡಿದ ಬಿಷ್ಣೋಯಿ ಸಮುದಾಯ: ಯಾರಿವರು?

  ಸಲ್ಮಾನ್ ಹಾರಿಸಿದ ಗುಂಡು ಎಂದು ಹೇಳಲು ಸಾಧ್ಯವಿಲ್ಲ

  ಸಲ್ಮಾನ್ ಹಾರಿಸಿದ ಗುಂಡು ಎಂದು ಹೇಳಲು ಸಾಧ್ಯವಿಲ್ಲ

  ''ಮೃತ ಕೃಷ್ಣಮೃಗದ ಬಳಿ ಗನ್ ಮತ್ತು ಗುಂಡು ಪತ್ತೆಯಾಗಿರಬಹುದು. ಆದ್ರೆ, ಅದನ್ನ ಸಲ್ಮಾನ್ ಖಾನ್ ಹಾರಿಸಿದ ಗುಂಡು ಎಂದು ಹೇಳಲು ಸಾಧ್ಯವಿಲ್ಲ ಮತ್ತು ಬೇರೆ ಯಾರೂ ಬೇಟೆ ಆಡಿದರು ಎಂಬುದನ್ನ ನಾವು ಹೇಳಲು ಆಗಲ್ಲ'' ಎಂದು ವಕೀಲರು ವಾದಿಸಿದ್ದಾರೆ.

  ಸಲ್ಮಾನ್ ಖಾನ್ ಜೈಲು ಸೇರಿದ್ದಕ್ಕೆ ಅತೀವ ಸಂತಸಗೊಂಡ ನಟಿ.!ಸಲ್ಮಾನ್ ಖಾನ್ ಜೈಲು ಸೇರಿದ್ದಕ್ಕೆ ಅತೀವ ಸಂತಸಗೊಂಡ ನಟಿ.!

  English summary
  Black buck poaching case: Salman Khan is protecting someone for silly emotional reasons say Simi Garewal. Based on the first post-mortem report Salman’s lawyers had argued that the blackbuck died because of dog bites.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X