ಸುಶಾಂತ್ ಸಿಂಗ್ ಬಗ್ಗೆ ಸಲ್ಮಾನ್ ಖಾನ್ ಟ್ವೀಟ್: ಮಾಡಿದರೊಂದು ಮನವಿ
ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಶರಣಾಗಿ ಒಂದು ವಾರವಾಗಿದೆ. ಸುಶಾಂತ್ ಆತ್ಮಹತ್ಯೆ ಬಾಲಿವುಡ್‌ನಲ್ಲಿ ಬಿರುಗಾಳಿ ಎಬ್ಬಿಸಿದೆ.
Recommended Video
ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಬಾಲಿವುಡ್‌ನ ಗುಂಪುಗಾರಿಕೆಯೇ ಕಾರಣ ಎನ್ನುವ ಬಲವಾದ ಚರ್ಚೆ ಜೋರಾಗಿ ನಡೆಯುತ್ತಿದೆ. ಕೆಲವು ಸ್ಟಾರ್ ನಟರನ್ನು ಇದಕ್ಕೆ ದೋಷಿಗಳನ್ನಾಗಿ ಮಾಡಲಾಗುತ್ತಿದೆ ಅವರಲ್ಲಿ ಸಲ್ಮಾನ್ ಖಾನ್ ಸಹ ಒಬ್ಬರು.
ಸುಶಾಂತ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಮಾನ್ ಖಾನ್ ಸೇರಿ ಒಟ್ಟು ಎಂಟು ಮಂದಿಯ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ಸುಶಾಂತ್ ಸಾವಿನ ನೋವು ಸಲ್ಮಾನ್ ಖಾನ್ ಮೇಲೆ ಸಿಟ್ಟಾಗಿ ತಿರುಗಿದೆ ಇಂಥಹಾ ಸಂದರ್ಭದಲ್ಲಿ ಸಲ್ಮಾನ್ ಖಾನ್, ಸುಶಾಂತ್ ಸಿಂಗ್ ಸಾವಿನ ಬಗ್ಗೆ ಮಾತನಾಡಿದ್ದಾರೆ.

ಜೂನ್ 14 ರಂದು ಟ್ವೀಟ್ ಮಾಡಿದ್ದ ಸಲ್ಮಾನ್ ಖಾನ್
ಸುಶಾಂತ್ ಸಿಂಗ್ ರಜಪೂತ್ ಸಾವನ್ನಪ್ಪಿದ್ದ ಜೂನ್ 14 ರಂದು ಟ್ವೀಟ್ ಮಾಡಿದ್ದ ಸಲ್ಮಾನ್ ಖಾನ್, 'ನಿನ್ನನ್ನು ಮಿಸ್ ಮಾಡಿಕೊಳ್ಳುತ್ತೇನೆ' 'ಸುಶಾಂತ್' ಆತ್ಮಕ್ಕೆ ಶಾಂತಿ ಸಿಗಲಿ' ಎಂದಷ್ಟೆ ಹೇಳಿದ್ದರು. ಅದಾದ ಬಳಿಕ ಈಗ ಮತ್ತೆ ಸುಶಾಂತ್ ಸಿಂಗ್ ಬಗ್ಗೆ ಟ್ವೀಟ್ ಮಾಡಿದ್ದಾರೆ.

ಸುಶಾಂತ್ ಅಭಿಮಾನಿಗಳ ಬೆಂಬಲಕ್ಕೆ ನಿಲ್ಲಿ: ಸಲ್ಮಾನ್ ಖಾನ್
'ನನ್ನ ಅಭಿಮಾನಿಗಳೆಲ್ಲರೂ ಸುಶಾಂತ್ ಸಿಂಗ್ ಸಿಂಗ್ ಅಭಿಮಾನಿಗಳ ಬೆಂಬಲಕ್ಕೆ ನಿಲ್ಲಿರಿ' ಎಂದು ಸಲ್ಮಾನ್ ಖಾನ್ ತನ್ನ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. 'ಅವರು ನನ್ನ ವಿರುದ್ಧ ಬಳಸಿದ ಭಾಷೆ, ಬೈಗುಳವನ್ನು ಗಮನಿಸದಿರಿ, ಅದರ ಹಿಂದಿನ ಭಾವನೆ ಮಾತ್ರ ಅರ್ಥ ಮಾಡಿಕೊಳ್ಳಿ' ಎಂದು ಸುಶಾಂತ್ ಹೇಳಿದ್ದಾರೆ.

ಸಲ್ಮಾನ್ ವಿರುದ್ಧ ಆಕ್ರೋಶ ಹೊರಹಾಕಲಾಗಿದೆ
ಸುಶಾಂತ್ ಸಿಂಗ್ ಅಭಿಮಾನಿಗಳು ಸಲ್ಮಾನ್ ಖಾನ್, ಕರಣ್ ಜೋಹರ್, ಆಲಿಯಾ ಭಟ್ ಇನ್ನೂ ಹಲವರನ್ನು ಸುಶಾಂತ್ ಸಾವಿಗೆ ಕಾರಣ ಎಂದು ಆರೋಪಿಸುತ್ತಿದ್ದಾರೆ. ಹಾಗಾಗಿ ಸಲ್ಮಾನ್ ಖಾನ್ ಈ ಟ್ವೀಟ್ ಮಾಡಿದ್ದು, ಸುಶಾಂತ್ ಅಭಿಮಾನಿಗಳನ್ನು ಬೆಂಬಲಿಸಿ ಅವರ ಬೈಗುಳವನ್ನು ಮನಸ್ಸಿಗೆ ಹಚ್ಚಿಕೊಳ್ಳಬೇಡಿ ಎಂದಿದ್ದಾರೆ.

ಎಲ್ಲರನ್ನೂ ಅಪ್‌ಫಾಲೋ ಮಾಡಿರುವ ಕರಣ್ ಜೋಹರ್
ಕರಣ್ ಜೋಹರ್ ಅಂತೂ ಟ್ವಿಟ್ಟರ್ ನಲ್ಲಿ ಎಲ್ಲ ನಟರನ್ನೂ ಅನ್‌ಫಾಲೋ ಮಾಡಿದ್ದು, ಕೇವಲ ಎಂಟು ಮಂದಿಯನ್ನು ಮಾತ್ರವೇ ಉಳಿಸಿಕೊಂಡಿದ್ದಾರೆ. ಎಲ್ಲದರ ಬಗ್ಗೆಯೂ ಟ್ವಿಟ್ಟರ್‌ನಲ್ಲಿ ಪ್ರತಿಕ್ರಿಯಿಸುತ್ತಿದ್ದ ಸುಶಾಂತ್ ಸಾವಿನ ಬಗ್ಗೆ ಅವರು ದೀರ್ಘ ಮೌನವಹಿಸಿದ್ದಾರೆ.


Click it and Unblock the Notifications











