ರಾತ್ರೋರಾತ್ರಿ ಟ್ವಿಟ್ಟರ್ ನಲ್ಲಿ ಬಾಂಬ್ ಸಿಡಿಸಿದ ಸಲ್ಮಾನ್: ದೇಶದಲ್ಲೆಡೆ ಅದೇ ಚರ್ಚೆ

By Bharath Kumar

Recommended Video

ಎಲ್ಲರಿಗೂ ಶಾಕ್ ಕೊಟ್ಟ ಸಲ್ಮಾನ್ ಖಾನ್ | Filmibeat Kannada

ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಈಗ ರಾಷ್ಟ್ರ ಮಟ್ಟದಲ್ಲಿ ಸುದ್ದಿಯಾಗಿದ್ದಾರೆ. ಸೋಮವಾರ ರಾತ್ರಿ ಸಲ್ಲು ಮಾಡಿರುವ ಒಂದು ಟ್ವೀಟ್ ಈಗ ಹೆಡ್ ಲೈನ್ ಆಗಿದೆ.

52 ವರ್ಷದ ಸಲ್ಮಾನ್ ಖಾನ್ ಇನ್ನು ಬ್ಯಾಚುಲರ್ ಆಗಿ ಉಳಿದಿರುವುದು ಒಂದು ಕಡೆಯಾದ್ರೆ, ಪದೇ ಪದೇ ಸಲ್ಲು ಮದುವೆ ಸುದ್ದಿ ಚರ್ಚೆಯಾಗುತ್ತಿರುವುದು ಮತ್ತೊಂದೆಡೆ. ಈ ಮಧ್ಯೆ ಸಲ್ಲು ಮಾಡಿರುವ ಟ್ವೀಟ್ ದೊಡ್ಡ ಡಿಬೆಟ್ ಆಗಿದೆ.

ಈ ಟ್ವೀಟ್ ನಂತರ ಇಡೀ ಬಾಲಿವುಡ್ ಚಿತ್ರರಂಗ ಅಚ್ಚರಿಗೆ ಒಳಗಾಗಿದೆ. ಅಷ್ಟಕ್ಕೂ, ಸಲ್ಮಾನ್ ಖಾನ್ ಮಾಡಿರುವ ಟ್ವೀಟ್ ನಲ್ಲಿ ಏನಿದೆ? ಯಾವ ವಿಷ್ಯದ ಬಗ್ಗೆ ಸಲ್ಲು ಬಾಯ್ ಟ್ವೀಟ್ ಮಾಡಿದ್ದಾರೆ? ಮುಂದೆ ಓದಿ....

ನನಗೆ ಸಿಕ್ಕಳು ಹುಡುಗಿ

ನನಗೆ ಸಿಕ್ಕಳು ಹುಡುಗಿ

ಬಾಲಿವುಡ್ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಸಲ್ಮಾನ್ ಖಾನ್ ''ನನಗೆ ಹುಡುಗಿ ಸಿಕ್ಕಳು' ಎಂದು ಟ್ವೀಟ್ ಮಾಡಿ ದೊಡ್ಡ ಸರ್ಪ್ರೈಸ್ ನೀಡಿದ್ದಾರೆ.

ಸಲ್ಲುಗೆ ಮದುವೆನಾ?

ಸಲ್ಲುಗೆ ಮದುವೆನಾ?

''ಮುಜೆ ಲಡಕಿ ಮಿಲ್ ಗಯಾ'' (ನನಗೆ ಹುಡುಗಿ ಸಿಕ್ಕಳು).....ಈ ಟ್ವೀಟ್ ನೋಡಿದ ಮಂದಿ ಸಲ್ಮಾನ್ ಖಾನ್ ಮದುವೆ ಆಗಲು ನಿರ್ಧರಿಸಿದ್ದಾರ? ಬಹುಶಃ ಹುಡುಗಿ ಸಿಕ್ಕಿರಬಹುದಾ? ಎಂದು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಇದು ಬರಿ ಗಿಮಿಕ್ ಅಷ್ಟೇ.!

ಇದು ಬರಿ ಗಿಮಿಕ್ ಅಷ್ಟೇ.!

ಇನ್ನು ಕೆಲವರು ಇದು ಕೇವಲ ಗಿಮಿಕ್ ಅಷ್ಟೇ. ಬಹುಶಃ ಸಲ್ಮಾನ್ ಖಾನ್ ಅವರ ಮುಂದಿನ ಸಿನಿಮಾ ಅಥವಾ ಸಿನಿಮಾದ ಹಾಡಿನ ಬಗ್ಗೆ ಪ್ರಮೋಷನ್ ಮಾಡಲು ಈ ರೀತಿ ಮಾಡಿದ್ದಾರೆ ಎನ್ನುವವರು ಕೂಡ ಇದ್ದಾರೆ.

ಲೂಲಿಯಾ ಜತೆ ಡೇಟಿಂಗ್

ಲೂಲಿಯಾ ಜತೆ ಡೇಟಿಂಗ್

ಬಾಲಿವುಡ್ ನಟಿ ಕತ್ರಿನಾ ಕೈಫ್ ಜೊತೆ ಡೇಟಿಂಗ್ ಮಾಡಿದ್ದ ಸಲ್ಮಾನ್ ಖಾನ್, ಸದ್ಯ ಲೂಲಿಯಾ ಎಂಬ ವಿದೇಶಿ ಬೆಡಗಿ ಜೊತೆ ಸುತ್ತಾಡುತ್ತಿದ್ದಾರೆ. ಬಹುಶಃ ಈ ಟ್ವೀಟ್ ಲೂಲಿಯಾಗೆ ಸಂಬಂಧಪಟ್ಟಿದ್ದಿರಬಹುದು ಎನ್ನಲಾಗುತ್ತಿದೆ.

ಸಲ್ಲು ಹೇಳಬೇಕಿದೆ?

ಸಲ್ಲು ಹೇಳಬೇಕಿದೆ?

ಸದ್ಯ, 'ರೇಸ್-3' ಚಿತ್ರದ ಚಿತ್ರೀಕರಣದಲ್ಲಿ ಭಾಗಿಯಾಗಿರುವ ಸಲ್ಮಾನ್ ಖಾನ್ ದಿಢೀರ್ ಎಂದು ಈ ರೀತಿ ಟ್ವೀಟ್ ಮಾಡಿರುವುದು ಎಲ್ಲರಿಗೂ ಅಚ್ಚರಿಯಾಗಿರುವುದಂತು ನಿಜಾ. ಆದ್ರೆ, ಈ ಟ್ವೀಟ್ ನ ಮರ್ಮವೇನು ಎಂಬುದು ಸ್ವತಃ ಸಲ್ಮಾನ್ ಖಾನ್ ಅವರೇ ಹೇಳಬೇಕಿದೆ.

More from Filmibeat

English summary
Superstar Salman Khan is seen as the most eligible bachelors in B-Town, and rightly so! The actor, who has had his share of link-ups and break-ups has finally admitted to being in love with someone.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X