»   » ಕರೀನಾ ಸಮೀಪ ಬರಲು ಸಲ್ಮಾನ್ ಖಾನ್ ಹಿಂದೇಟು!

ಕರೀನಾ ಸಮೀಪ ಬರಲು ಸಲ್ಮಾನ್ ಖಾನ್ ಹಿಂದೇಟು!

Posted By:
Subscribe to Filmibeat Kannada
<ul id="pagination-digg"><li class="next"><a href="/bollywood/kareena-kapoor-saif-ali-khan-marriage-salman-khan-movie-069251.html">Next »</a></li></ul>
Salman Kareena
ಇತ್ತೀಚಿಗೆ ನಟಿ ಕರೀನಾ ಕಪೂರ್ ಮದುವೆಯಾಗಿರುವುದು ಗೊತ್ತೇ ಇದೆ. ಅದರಲ್ಲೂ ಕರೀನಾ ಮದುವೆಯಾಗಿರುವುದು ಬೇರೆ ಯಾರನ್ನೋ ಅಲ್ಲ, ಬಾಲಿವುಡ್ ನಟ ಸೈಫ್ ಅಲಿ ಖಾನ್ ಅವರನ್ನು. ಹೀಗಿರುವಾಗ ನಟ ಸಲ್ಮಾನ್ ಖಾನ್ ತೆಗೆದುಕೊಂಡ ನಿರ್ಧಾರ ಸರಿಯಾಗಿಯೇ ಇದೆ ಎಂಬುದು ಬಾಲಿವುಡ್ ನಲ್ಲಿ ಬಹಳಷ್ಟು ಮಂದಿಯ ಅಭಿಪ್ರಾಯ. ಅಷ್ಟಕ್ಕೂ ಸಲ್ಲೂ ಮಾಡಿದ ಕೆಲಸವೇನು? 'ದಬಾಂಗ್ 2' ಚಿತ್ರದ ಸೆಟ್ ನಿಂದ ಬಂದ ಸಮಾಚಾರ ಓದಿ...

'ದಬಾಂಗ್ 2' ಚಿತ್ರದಲ್ಲಿ ಸಲ್ಮಾನ್ ಖಾನ್ ಹಾಗೂ ಕರೀನಾ ಕಪೂರ್ ಜೋಡಿಯ ಹಾಡೊಂದು ಚಿತ್ರೀಕರಣವಾಗಬೇಕಿದೆ. ಅಷ್ಟರಲ್ಲೇ ಕರೀನಾ ಮದುವೆಯಾಗಿದೆ. ಈಗ ಸೈಫ್ ಪತ್ನಿ ಕರೀನಾ ಸಲ್ಲೂಗೆ ತಂಗಿಯ ಸಮಾನವಂತೆ. ಹೀಗಿರುವಾಗ "ನಾವಿಬ್ಬರೂ ಅತೀ ಹತ್ತಿರ ಇರುವ ಹಾಗೂ ರೊಮಾನ್ಸ್ ನಲ್ಲಿ ತೊಡಗಿರುವ ದೃಶ್ಯಗಳನ್ನು ಸಾಧ್ಯವಾದಷ್ಟು ಕಡಿಮೆ ಇರುವಂತೆ ನೋಡಿಕೊಳ್ಳಿ' ಎಂಬ ಸಲಹೆ ನೀಡಿದ್ದಾರಂತೆ.

ಸುದ್ದಿ ಮೂಲಗಳಿಂದ ಮಾಧ್ಯಮಕ್ಕೆ ಬಂದ ಮಾಹಿತಿ ಪ್ರಕಾರ "ಕರೀನಾ ಕಪೂರ್ ಅವರಿಗೆ ಮದುವೆಯಿಂದ ಯಾವುದೇ ಕಟ್ಟುಪಾಡು ಎದುರಾಗಿಲ್ಲ. ಅವರು ಮೊದಲಿನಂತೆ ಫ್ರೀ ಬರ್ಡ್. ಪಟೌಡಿ ಕುಟುಂಬದಿಂದ ಕರೀನಾಗೆ ಯಾವುದೇ ರಿಸ್ಟ್ರಿಕ್ಷನ್ ಎದುರಾಗಲು ಸಾಧ್ಯವಿಲ್ಲ. ಏಕೆಂದರೆ, ಶರ್ಮಿಳಾ ಅಥವಾ ಸೋಹ ಯಾರೊಬ್ಬರೂ ಮದುವೆಯಾಗಿದೆ ಎಂಬ ಕಾರಣಕ್ಕೆ ತಮಗೆ ತಾವೇ ಯಾವುದೇ ಕಟ್ಟುಪಾಡನ್ನು ಹೇರಿಕೊಂಡಿಲ್ಲ.

ಹೀಗಿರುವಾಗ ಕರೀನಾಗೆ ಸೈಫ್ ಕುಟುಂಬದಿಂದ ನಟನೆಗೆ ವಿರೋಧವಾಗಲೀ ಅಥವಾ ಹಾಗೆ ಮಾಡು ಹೀಗೆ ಮಾಡಬೇಡ ಎಂಬ ಉಪದೇಶವಾಗಲೀ ಬರಲು ಸಾಧ್ಯವಿಲ್ಲ. ಹೀಗಿದ್ದೂ ಸಲ್ಲೂ ಹಾಗೆನ್ನಲು ಕಾರಣ ಅದು ಸಲ್ಲೂ ಸ್ವತಃ ಆ ಬಗ್ಗೆ ತಮ್ಮಲ್ಲೇ ಒಂದು ಅಭಿಪ್ರಾಯ ಇಟ್ಟುಕೊಂಡಿರುವುದಷ್ಟೇ. ಈ ಮೊದಲೂ ಕೂಡ ಸಲ್ಲೂ ಹಾಗೊಮ್ಮೆ ನಡೆದುಕೊಂಡಿದ್ದರು. ಅವರ ಸಂಬಂಧಿಯಾಗಿರುವ ಮಲೈಕಾ 'ಮುನ್ನಿ ಬದ್ನಾಮ್' ಚಿತ್ರದಲ್ಲಿ ನಟಿಸುವಾಗ ನೃತ್ಯ ನಿರ್ದೇಶಕರಿಗೆ ಇದೇ ರೀತಿ ಸೂಚನೆ ಕೊಟ್ಟಿದ್ದರು. ಮುಂದಿನ ಪುಟ ನೋಡಿ... 

<ul id="pagination-digg"><li class="next"><a href="/bollywood/kareena-kapoor-saif-ali-khan-marriage-salman-khan-movie-069251.html">Next »</a></li></ul>
English summary
Kareena Kapoor Khan will shoot a raunchy song 'Fevicol' for Salman Khan's Dabangg 2. But Salman Khan is not comfortable in getting intimate with Kareena.&#13; &#13;
Please Wait while comments are loading...