»   » ಮದುವೆ ಬಗ್ಗೆ ಪ್ರಚಾರ ಮಾಡಿದ್ದಕ್ಕೆ ಆಕ್ರೋಶಗೊಂಡ ಸಲ್ಮಾನ್ ಖಾನ್

ಮದುವೆ ಬಗ್ಗೆ ಪ್ರಚಾರ ಮಾಡಿದ್ದಕ್ಕೆ ಆಕ್ರೋಶಗೊಂಡ ಸಲ್ಮಾನ್ ಖಾನ್

By: ಸೋನು ಗೌಡ
Subscribe to Filmibeat Kannada

ಬಾಲಿವುಡ್ ಭಾಯ್ ಜಾನ್ ಸಲ್ಮಾನ್ ಖಾನ್ ಅವರು ಈ ವರ್ಷದ ಅಂತ್ಯಕ್ಕೆ ಮದುವೆಯಾಗುತ್ತಿದ್ದಾರೆ, ತಮ್ಮ 51ನೇ ಹುಟ್ಟುಹಬ್ಬದಂದು ರೊಮೆನಿಯಾ ಬೆಡಗಿ ಲುಲಿಯಾ ವಂಟೂರ್ ಅವರ ಜೊತೆ ಸಪ್ತಪದಿ ತುಳಿಯುತ್ತಿದ್ದಾರೆ ಎಂದು ಅಂತೆ-ಕಂತೆಗಳ ಸುದ್ದಿ ಇಡೀ ಬಿಟೌನ್ ನಲ್ಲಿ ಹರಿದಾಡುತ್ತಿತ್ತು.

ಇಷ್ಟು ದಿನ ಎಲ್ಲರೂ ತಮಗಿಷ್ಟ ಬಂದಂಗೆ ಸಲ್ಲುಮಿಯಾ ಅವರ ಮದುವೆ ಬಗ್ಗೆ ಮಾತನಾಡುತ್ತಿದ್ದರೆ ಬಾಲಿವುಡ್ ಬಾಕ್ಸಾಫೀಸ್ ಸುಲ್ತಾನ ಮಾತ್ರ ತಮ್ಮ ಮದುವೆ ಬಗ್ಗೆ ತುಟಿ ಪಿಟಕ್ ಎಂದಿರಲಿಲ್ಲ. ಆದರೆ ಇದೀಗ ಬೇಸತ್ತ ಸಲ್ಮಾನ್ ಖಾನ್ ಅವರು ತಮ್ಮ ಮದುವೆ ಸುದ್ದಿ ಎತ್ತಿದವರಿಗೆ ಸರಿಯಾಗಿ ಬೆಂಡೆತ್ತಿದ್ದಾರೆ.[ವಾವ್.! ಸಲ್ಮಾನ್ ಖಾನ್-ಲುಲಿಯಾ ಮದುವೆ ದಿನಾಂಕ ಫಿಕ್ಸ್ ಆಯ್ತು]

Salman Khan Upset About Lulia Vantur 'Wedding Rumours'

'ನಾನು ಮದುವೆಯಾಗುವುದಾದರೆ, ಅದನ್ನು ಖುದ್ದಾಗಿ ನಾನೇ ನನ್ನ ಟ್ವಿಟ್ಟರ್, ಫೇಸ್ ಬುಕ್ ನಲ್ಲಿ ಬಹಿರಂಗವಾಗಿ ನನ್ನ ಅಭಿಮಾನಿಗಳಿಗೆ ಹೇಳುತ್ತೇನೆ' ಎಂದು ಮೋಸ್ಟ್ ಎಲಿಜೆಬಲ್ ಬ್ಯಾಚುಲರ್ ಸಲ್ಮಾನ್ ಖಾನ್ ಗುಡುಗಿದ್ದಾರೆ.[ಮದುವೆ ಕನಸು ಕಾಣುತ್ತಾ ಕೈ ಹಿಡಿದು ಓಡಾಡುತ್ತಿದ್ದಾರೆ ಪ್ರಣಯ ಹಕ್ಕಿಗಳು]

Salman Khan Upset About Lulia Vantur 'Wedding Rumours'

ಮೊನ್ನೆ ಮುಂಬೈನಲ್ಲಿ ನಟಿ ಪ್ರೀತಿ ಜಿಂಟಾ ಅವರ ಆರತಕ್ಷತೆ ಸಮಾರಂಭದಲ್ಲಿ ನಟ ಸಲ್ಮಾನ್ ಖಾನ್ ಮತ್ತು ಲೂಲಿಯಾ ವಂಟೂರ್ ಅವರು ಒಟ್ಟಾಗಿ ಕಾಣಿಸಿಕೊಂಡಿದ್ದನ್ನು ಕಂಡು ಎಲ್ಲರೂ ಅವರಿಬ್ಬರ ಮದುವೆ ಬಗ್ಗೆ ಇಲ್ಲ-ಸಲ್ಲದ ಸುದ್ದಿ ಹಬ್ಬಿಸಿದ್ದರು.[ಅಬ್ಬಾ.! ಕೊನೆಗೂ ಸಲ್ಮಾನ್ ಖಾನ್ ವಿವಾಹ ಆಗ್ತಾರಂತೆ]

Salman Khan Upset About Lulia Vantur 'Wedding Rumours'

ಇದೀಗ ಈ ಬಗ್ಗೆ ಸಲ್ಮಾನ್ ಖಾನ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. 'ಹೌದು ಪ್ರೀತಿ ಜಿಂಟಾ ಅವರ ಆರತಕ್ಷತೆ ಪಾರ್ಟಿಗೆ ನಾವಿಬ್ಬರು ಒಟ್ಟಿಗೆ ಹೋಗಿದ್ದೆವು. ಹಾಗಂತ ನನಗೆ ಯಾರ ಜೊತೆ ಹೋಗಲೂ ಸ್ವಾತಂತ್ರ್ಯ ಇಲ್ಲವೇ?. ನಾನು ಒಂದು ಮಹಿಳೆ ಜೊತೆ ಮದುವೆಗೆ ಹೋದ ಮಾತ್ರಕ್ಕೆ ಆಕೆಯನ್ನು ಮದುವೆ ಆಗಬೇಕೆಂದಿದೆಯೇ'? ಎಂದು ಸಲ್ಮಾನ್ ಖಡಕ್ ಆಗಿ ಪ್ರಶ್ನೆ ಮಾಡಿದ್ದಾರೆ.

Salman Khan Upset About Lulia Vantur 'Wedding Rumours'

'ಮಾಧ್ಯಮಗಳು ಏನು ಬೇಕಾದರೂ ಹೇಳುತ್ತವೆ. ಕೊನೆಗೆ ಮದುವೆ ಆಗದಿದ್ದರೆ, ಇದರಿಂದ ಹೆಚ್ಚು ತೊಂದರೆ ಆಗೋದು ಒಬ್ಬ ಹುಡುಗಿಗೆ. ಈ ರೀತಿ ಸುಳ್ಳು ಪ್ರಚಾರ ಮಾಡಿ ಒಂದು ಹುಡುಗಿಯ ಜೀವನದ ಜೊತೆ ಆಟ ಆಡುತ್ತಿದ್ದೀರಾ'? ಎಂದು ಸಲ್ಮಾನ್ ಖಾನ್ ಅವರು ಸುದ್ದಿ ಹಬ್ಬಿಸಿದವರಿಗೆ ಸರಿಯಾಗಿ ಜಾಡಿಸಿದ್ದಾರೆ.

English summary
Bollywood Actor Salman Khan rubbished all rumours about his wedding with Iulia Vantur .

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada