ಸಲ್ಮಾನ್ ಗೆ ಮಕ್ಕಳು ಬೇಕಂತೆ ಮದುವೆ ಬೇಡವಂತೆ
ಇದಕ್ಕೆ ಉತ್ತರಿಸಿರುವ ಸಲ್ಲು, "ಮದುವೆ ಬಗ್ಗೆ ನನಗಿನ್ನೂ ಖಚಿತತೆ ಇಲ್ಲ. ಆದರೆ ಮದುವೆಯಾಗದಿದ್ದರೂ ಮಕ್ಕಳಂತೂ ಬೇಕು. ಮಕ್ಕಳಿಗಾಗಿ ಮದುವೆನೇ ಬೇಡ ಎಂದುಕೊಂಡಿದ್ದೇನೆ" ಎಂದಿದ್ದಾರೆ. ಬಹುಶಃ ಮಕ್ಕಳನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸಿದ್ದಾರೆ ಎಂಬರ್ಥದಲ್ಲಿದೆ ಸಲ್ಲು ಪ್ರತಿಕ್ರಿಯೆ.
ಸಲ್ಲು ಮದುವೆ ಬಗ್ಗೆ ಆಗಾಗ ಪ್ರಸ್ತಾಪವಾಗುತ್ತಲೇ ಇದೆ. ಈಗಾಗಲೆ ಅವರ ಮದುವೆ ವಯಸ್ಸು ಮೀರಿ ಹೋಗಿದೆ. ಮಿಂಚಿ ಹೋದ ಕಾರ್ಯಕ್ಕೆ ಚಿಂತಿಸಿ ಫಲವಿಲ್ಲ ಎಂಬಂತಾಗಿದೆ ಸಲ್ಲು ಪರಿಸ್ಥಿತಿ. ಆದರೆ ಅವರ ತಂದೆ ಮಾತ್ರ ವಧು ಹುಡುಕುವ ಪ್ರಯತ್ನದಲ್ಲಿ ಬಿಜಿಯಾಗಿದ್ದಾರೆ.
ಪದೇ ಪದೇ ಭಗ್ನಪ್ರೇಮಿಯಾಗಿ ನೊಂದಿರುವ ಸಲ್ಮಾನ್ ಖಾನ್, ಮದುವೆ ಎಂಬ ಮೂರಕ್ಷರದ ಪದದಲ್ಲಿ ಬಹುತೇಕ ನಂಬಿಕೆ ಕಳೆದುಕೊಂಡಿದ್ದಾರೆ. ಈ ಹಿಂದೊಮ್ಮೆ ಅವರು ಅದ್ಯಾವುದೋ ಮದುವೆಗೆ ಹೋಗಿದ್ದರು. ಅಲ್ಲಿ ಪುರೋಹಿತರು ಇವರಿಗೆ ಶೀಘ್ರಮೇವ ಕಲ್ಯಾಣ ಪ್ರಾಪ್ತಿರಸ್ತು ಎಂದು ಆಶೀರ್ವದಿಸಿದ್ದರು.
ಬೆಚ್ಚಿಬಿದ್ದದ್ದ ಸಲ್ಲು, "ನನಗೆ ಮದುವೆ,ಮಕ್ಕಳು ಎಂದೆಲ್ಲಾ ಆಶೀರ್ವಾದ ಮಾಡುವ ಬದಲು ಐಶ್ವರ್ಯ, ಆರೋಗ್ಯ ಹಾಗೂ ಯಶಸ್ಸು ಸಿಗಲಿ ಎಂದು ಆಶೀರ್ವದಿಸಿ" ಎಂದಿದ್ದರು. ಪುರೋಹಿತರು ಒಂದು ಕ್ಷಣ ಯಾವ ಐಶ್ವರ್ಯ ಎಂದು ಯೋಚನೆಗೆ ಬಿದ್ದಿದ್ದರು.
ಸಲ್ಲು ವಿರುದ್ಧ ಕೆಲವೊಂದು ಕೇಸ್ ಗಳು ದಾಖಲಾಗಿದ್ದು ವಿಚಾರಣೆ ನಡೆಯುತ್ತಿದೆ. ಒಂದು ವೇಳೆ ತನ್ನ ವಿರುದ್ಧದ ಕೇಸ್ ಗಳು ಖುಲಾಸೆಯಾದರೆ ಮದುವೆಯಾಗುತ್ತೇನೆ. ಇಲ್ಲ ಅಂದ್ರೆ ಇಲ್ಲ ಎಂದೊಮ್ಮೆ ಹೇಳಿದ್ದರು. (ಏಜೆನ್ಸೀಸ್)


Click it and Unblock the Notifications












