For Quick Alerts
  ALLOW NOTIFICATIONS  
  For Daily Alerts

  'ರಾಧೆ' ಸಿನಿಮಾ ಪೈರಸಿ: ವಾರ್ನಿಂಗ್ ಕೊಟ್ಟ ಸಲ್ಲು ಭಾಯ್

  |

  ನಟ ಸಲ್ಮಾನ್ ಖಾನ್ ನಟಿಸಿರುವ 'ರಾಧೆ' ಸಿನಿಮಾ ಎರಡು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದೆ. ಚಿತ್ರಮಂದಿರಗಳು ಇಲ್ಲದ ಸಮಯದಲ್ಲಿ 'ರಾಧೆ' ಸಿನಿಮಾವನ್ನು ಜೀ5 ಒಟಿಟಿಯಲ್ಲಿ ಬಿಡುಗಡೆ ಮಾಡಲಾಗಿದೆ. ಚಿತ್ರಮಂದಿರಗಳು ಎಲ್ಲೆಲ್ಲಿ ಕಾರ್ಯನಿರ್ವಹಿಸುತ್ತಿವೆಯೋ ಅಲ್ಲಿಯೂ ಸಿನಿಮಾವನ್ನು ಬಿಡುಗಡೆ ಮಾಡಲಾಗಿದೆ.

  'ರಾಧೆ' ಸಿನಿಮಾ ಬಗ್ಗೆ ಅತ್ಯಂತ ಕೆಟ್ಟ ವಿಮರ್ಶೆಗಳು ಹೊರಗೆ ಬರುತ್ತಿವೆ. ಸಿನಿಮಾ ಅತ್ಯಂತ ಕಳಪೆ ಎನ್ನಲಾಗುತ್ತಿದೆ. ಹಾಗಿದ್ದರೂ ಸಹ ಸಲ್ಮಾನ್ ಸಿನಿಮಾ ನೋಡುವವರ ಸಂಖ್ಯೆ ಕಡಿಮೆ ಇಲ್ಲ. 'ರಾಧೆ' ಸಿನಿಮಾದ ಬಿಡುಗಡೆ ನಂತರ ಹೆಚ್ಚಿದ ಒತ್ತಡದಿಂದಾಗಿ ಜೀ 5 ಒಟಿಟಿ ಕ್ರಾಶ್ ಆದ ಬಗ್ಗೆ ವರದಿಯಾಗಿತ್ತು.

  ಆದರೂ ಸಲ್ಮಾನ್ ಖಾನ್ ನಿರೀಕ್ಷಿಸದಷ್ಟು ಸಿನಿಮಾಕ್ಕೆ ವೀವ್ಸ್‌ ಬಂದಿಲ್ಲವಂತೆ. ಇದಕ್ಕೆ ಮುಖ್ಯ ಕಾರಣ ಪೈರಸಿ. ಸಿನಿಮಾ ಒಟಿಟಿಯಲ್ಲಿ ಬಿಡುಗಡೆ ಆದ ದಿನವೇ 'ರಾಧೆ' ಸಿನಿಮಾದ ಎಚ್‌ಡಿ ಪ್ರಿಂಟ್ ಪೈರಸಿ ಹರಿದಾಡಲು ಆರಂಭಿಸಿದೆ. ಇದು ಸಲ್ಮಾನ್ ಖಾನ್ ಗಮನಕ್ಕೂ ಬಂದಿದ್ದು, ಪೈರಸಿಯಲ್ಲಿ ಸಿನಿಮಾ ನೋಡುವವರಿಗೆ ಎಚ್ಚರಿಕೆ ನೀಡಿದ್ದಾರೆ ಸಲ್ಮಾನ್ ಖಾನ್.

  'ನಾವು ಕೇವಲ 249 ರು. ಬೆಲೆಗೆ ನಿಮಗೆ ಸಿನಿಮಾ ನೋಡಲು ಅವಕಾಶ ಮಾಡಿಕೊಟ್ಟಿದ್ದೇವೆ. ಆದರೂ ಕೆಲವು ಪೈರಸಿಕೋರರು ಸಿನಿಮಾವನ್ನು ಪೈರಸಿ ಮಾಡಿ ವೆಬ್‌ಸೈಟ್‌ಗಳಲ್ಲಿ ಪ್ರಕಟಿಸಿದ್ದಾರೆ ಇದು ಗಂಭೀರ ಅಪರಾಧ. ಸೈಬರ್ ಠಾಣೆಗೆ ನಾವು ಈಗಾಗಲೇ ದೂರು ನೀಡಿದ್ದು ಅಕ್ರಮವಾಗಿ ನಮ್ಮ ಸಿನಿಮಾವನ್ನು ಪ್ರದರ್ಶಿಸುತ್ತಿರುವ, ಹಂಚುತ್ತಿರುವವರ ವಿರುದ್ಧ ಅವರು ಕ್ರಮ ಕೈಗೊಳ್ಳಲಿದ್ದಾರೆ. ದಯವಿಟ್ಟು ಪೈರಸಿ ಅಂಥಹಾ ಅಪರಾಧಗಳಲ್ಲಿ ಪಾಲ್ಗೊಳ್ಳಬೇಡಿ. ಪೈರಸಿ ಸಿನಿಮಾ ನೋಡಿ ಅವರಿಗೆ ಬೆಂಬಲ ಸಹ ನೀಡಬೇಡಿ. ನೀವು ಸಾಕಷ್ಟು ಸಮಸ್ಯೆಗೆ ಸಿಲುಕಬಹುದು' ಎಂದಿದ್ದಾರೆ ಸಲ್ಮಾನ್ ಖಾನ್.

  ಕೊರೋನಾ ಪ್ರಶ್ನೆಗೆ ಉತ್ತರ ಕೊಟ್ಟು ಮಿಸ್ ಯೂನಿವರ್ಸ್ ಆದ್ರು ಆಂಡ್ರಿಯಾ ಮೆಜಾ | Filmibeat Kannada

  'ರಾಧೆ' ಸಿನಿಮಾದಲ್ಲಿ ಸಲ್ಮಾನ್ ಖಾನ್, ದಿಶಾ ಪಟಾನಿ, ರಣದೀಪ್ ಹುಡಾ, ಜಾಕಿ ಶ್ರಾಫ್ ಇನ್ನೂ ಕೆಲವರು ನಟಿಸಿದ್ದಾರೆ. ಸಿನಿಮಾವನ್ನು ಖ್ಯಾತ ನೃತ್ಯ ನಿರ್ದೇಶಕ ಪ್ರಭುದೇವಾ ನಿರ್ದೇಶನ ಮಾಡಿದ್ದಾರೆ. ಸಿನಿಮಾದ ಬಗ್ಗೆ ಬಹಳ ಋಣಾತ್ಮಕ ವಿಮರ್ಶೆಗಳು ಬಂದಿವೆ. ಸಲ್ಮಾನ್ ಖಾನ್ ನಟಿಸಿರುವ ಅತ್ಯಂತ ಕಳಪೆ ಸಿನಿಮಾಗಳ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು 'ರಾಧೆ' ಪಡೆದುಕೊಂಡಿದೆ. 'ರೇಸ್‌ 3'ಗೆ ಮೊದಲ ಸ್ಥಾನ.

  English summary
  Salman Khan warned people who pirating his movie 'Radhe'. He also requested people to not watch Radhe pirated movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X