For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್ ಮಾಡಬೇಕಿದ್ದ ಸೂಪರ್ ಹಿಟ್ 'ಚಕ್ ದೇ ಇಂಡಿಯಾ' ಚಿತ್ರ ಶಾರುಖ್ ಪಾಲಾಗಿದ್ದು ಹೇಗೆ?

  |

  ಶಾರುಖ್ ಖಾನ್ ಸಿನಿ ಜೀವನದ ಅತ್ಯುತ್ತಮ ಸಿನಿಮಾಗಳಲ್ಲಿ ಚಕ್ ದೇ ಇಂಡಿಯಾ ಕೂಡ ಒಂದು. 2007ರಲ್ಲಿ ಬಂದ ಕ್ರೀಡಾ ಆಧಾರಿತ ಚಕ್ ದೇ ಇಂಡಿಯಾ ಸಿನಿಮಾ ಬಾಲಿವುಡ್‌ನ ಸೂಪರ್ ಹಿಟ್ ಚಿತ್ರವಾಗಿ ಹೊರಹೊಮ್ಮಿತ್ತು. ವಿಮರ್ಶಾತ್ಮಕವಾಗಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು.

  ಮಹಿಳಾ ಹಾಕಿ ಬಗ್ಗೆ ಇದ್ದ ಸಿನಿಮಾ ಇದಾಗಿದ್ದು, ಶಾರುಖ್ ಖಾನ್ ಕೋಚ್ ಆಗಿ ಮಿಂಚಿದ್ದರು. ಶಿಮಿತ್ ಅಮಿನ್ ಸಾರಥ್ಯದಲ್ಲಿ ಬಂದ ಈ ಸಿನಿಮಾ ಇಂದಿಗೂ ಎವರ್ ಗ್ರೀನ್ ಚಿತ್ರಗಳಲ್ಲಿ ಒಂದಾಗಿದೆ. ಸಿನಿಮಾ ರಿಲೀಸ್ ಆಗಿ ಸೂಪರ್ ಹಿಟ್ ಆಗಿ ವರ್ಷಗಳೇ ಆಗಿದೆ. ಆದರೆ ಚಿತ್ರದ ಬಗ್ಗೆ ಇರುವ ಒಂದು ಇಂಟರೆಸ್ಟಿಂಗ್ ಮಾಹಿತಿ ಬಹುತೇಕರಿಗೆ ಗೊತ್ತಿಲ್ಲ. ಮುಂದೆ ಓದಿ...

  ಸಲ್ಮಾನ್ ಖಾನ್ ನನಗೆ ಮೋಸ ಮಾಡಿದ: ಮಾಜಿ ಪ್ರೇಯಸಿಸಲ್ಮಾನ್ ಖಾನ್ ನನಗೆ ಮೋಸ ಮಾಡಿದ: ಮಾಜಿ ಪ್ರೇಯಸಿ

  ಚಕ್ ದೇ ಇಂಡಿಯಾ ಚಿತ್ರಕ್ಕೆ ಮೊದಲ ಆಯ್ಕೆ ಸಲ್ಮಾನ್ ಖಾನ್

  ಚಕ್ ದೇ ಇಂಡಿಯಾ ಚಿತ್ರಕ್ಕೆ ಮೊದಲ ಆಯ್ಕೆ ಸಲ್ಮಾನ್ ಖಾನ್

  ಸಾಕಷ್ಟು ಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ಚಕ್ ದೇ ಇಂಡಿಯಾ ಸಿನಿಮಾಗೆ ಮೊದಲು ಆಯ್ಕೆ ಆಗಿದ್ದು ಬಾಲಿವುಡ್ ಬ್ಯಾಡ್ ಬಾಯ್ ಸಲ್ಮಾನ್ ಖಾನ್. ಈ ಸಿನಿಮಾ ಮಾಡಲು ನಿರ್ಧರಿಸಿದ ಯಶ್ ರಾಜ್ ಫಿಲ್ಮ್ ಅವರ ಮೊದಲ ಆಯ್ಕೆ ಸಲ್ಮಾನ್ ಖಾನ್ ಆಗಿದ್ದರು. ಕತೆ ಸಲ್ಮಾನ್ ಖಾನ್ ಬಳಿ ಬಂದ ಬಳಿಕ ರಿಜೆಕ್ಟ್ ಆಗಿ ವಾಪಸ್ ಹೋಗುತ್ತೆ. ಸಲ್ಮಾನ್ ತಿರಸ್ಕರಿಸಿದ ಬಳಿಕ ಶಾರುಖ್ ಖಾನ್ ಬಳಿ ಹೋಗುತ್ತೆ.

  ಸುಲ್ತಾನ್ ಚಿತ್ರದ ವೇಳೆ ಬಹಿರಂಗ ಪಡಿಸಿದ ಸಲ್ಮಾನ್

  ಸುಲ್ತಾನ್ ಚಿತ್ರದ ವೇಳೆ ಬಹಿರಂಗ ಪಡಿಸಿದ ಸಲ್ಮಾನ್

  ಕತೆ ಕೇಳಿ ಶಾರುಖ್ ಸಿನಿಮಾ ಮಾಡಲು ಗ್ರೀನ್ ಸಿಗ್ನಲ್ ನೀಡುತ್ತಾರೆ. ಬಳಿಕ ನಡೆದಿದ್ದೆಲ್ಲ ಇತಿಹಾಸ. ಈ ಬಗ್ಗೆ ಸಲ್ಮಾನ್ ಸುಲ್ತಾನ್ ಸಿನಿಮಾದ ಪ್ರಮೋಷನ್ ವೇಳೆ ಮಾತನಾಡಿದ್ದಾರೆ. ಮೊದಲ ಕ್ರೀಡಾ ಸಿನಿಮಾ ಸುಲ್ತಾನ್ ಎಂದು ಹೇಳಿದ ಸಲ್ಮಾನ್ ಗೆ ಮಾಧ್ಯಮದವರು ಚಕ್ ದೇ ಇಂಡಿಯಾ ರಿಜೆಕ್ಟ್ ಮಾಡಿದ ಘಟನೆಯನ್ನು ನೆನಪಿಸುತ್ತಾರೆ.

  'ಮಾಸ್ಟರ್' ಹಿಂದಿ ರಿಮೇಕ್: ದಳಪತಿ ವಿಜಯ್ ಪಾತ್ರದಲ್ಲಿ ಬಾಲಿವುಡ್ ಖ್ಯಾತ ನಟ'ಮಾಸ್ಟರ್' ಹಿಂದಿ ರಿಮೇಕ್: ದಳಪತಿ ವಿಜಯ್ ಪಾತ್ರದಲ್ಲಿ ಬಾಲಿವುಡ್ ಖ್ಯಾತ ನಟ

  ಶಾರುಖ್ ಕೂಡ ಉತ್ತಮ ಸಿನಿಮಾ ಮಾಡಲಿ ಎಂದು ರಿಜೆಕ್ಟ್ ಮಾಡಿದೆ

  ಶಾರುಖ್ ಕೂಡ ಉತ್ತಮ ಸಿನಿಮಾ ಮಾಡಲಿ ಎಂದು ರಿಜೆಕ್ಟ್ ಮಾಡಿದೆ

  'ಬಳಿಕ ನಿಜ, ಚಕ್ ದೇ ಇಂಡಿಯಾ ಕತೆ ನನ್ನ ಬಳಿ ಬಂದಿತ್ತು' ಎಂದು ಒಪ್ಪಿಕೊಂಡಿದ್ದಾರೆ. ರಿಜೆಕ್ಟ್ ಮಾಡಲು ಕಾರಣ ಕೇಳಿದ್ರೆ, 'ಶಾರುಖ್ ಖಾನ್ ಕೂಡ ಉತ್ತಮ ಸಿನಿಮಾ ಮಾಡಲಿ' ಎಂದು ತಮಾಷೆ ಮಾಡಿ ಜೋರಾಗಿ ನಗುತ್ತಾರೆ. ಬಳಿಕ ಇದು ತಮಾಷೆಯಷ್ಟೆ ಎಂದು ನಿಜವಾದ ಕಾರಣ ಬಿಚ್ಚಿಡುತ್ತಾರೆ.

  ಸಲ್ಮಾನ್ ಖಾನ್ ಉತ್ತರ ಹೀಗಿತ್ತು

  ಸಲ್ಮಾನ್ ಖಾನ್ ಉತ್ತರ ಹೀಗಿತ್ತು

  'ಚಕ್ ದೇ ಇಂಡಿಯಾಗೆ ಆಫರ್ ಬಂದ ಸಮಯದಲ್ಲಿ ನನ್ನ ಇಮೇಜ್ ಬೇರೆ ತರ ಇತ್ತು, ಕಮರ್ಷಿಯಲ್ ಸಿನಿಮಾಗಳನ್ನು ಹೆಚ್ಚಾಗಿ ಮಾಡುತ್ತಿದೆ. ನನ್ನ ಉದ್ದೇಶ ಎಂದರೆ ನನ್ನ ಅಭಿಮಾನಿಗಳು ನಾನು ವಿಗ್ ಧರಿಸಿ ಭಾರತಕ್ಕಾಗಿ ಗೆಲ್ಲುತ್ತೇನೆ, ಸಿನಿಮಾಗಾಗಿ ಅಲ್ಲ ಎಂದು ನಿರೀಕ್ಷಿಸುತ್ತಾರೆ. ಆ ಸಮಯದಲ್ಲಿ ಆ ಕತೆ ನನಗೆ ಸಾಟ್ ಆಗುತ್ತಿರಲಿಲ್ಲ. ಹೆಚ್ಚು ಗಂಭೀರವಾದ ಸಿನಿಮಾ. ಅಲ್ಲದೆ ನಾನು ಕಮರ್ಷಿಯಲ್ ಸಿನಿಮಾ ಹೆಚ್ಚು ಮಾಡುತ್ತಿದ್ದೆ. ಕಮರ್ಷಿಯಲ್ ಸಿನಿಮಾದಿಂದ ನಾನು ಹೊರಹೋಗುವುದಿಲ್ಲ. ಇಲ್ಲೂ ಉತ್ತಮ ಸಿನಿಮಾಗಳಿವೆ' ಎಂದು ಹೇಳಿದ್ದರು.

  ಸಲ್ಮಾನ್ ಕುಡಿದು ಹಿಂಸೆ ನೀಡುತ್ತಿದ್ದ ಕೆಟ್ಟ ಸಮಯದಲ್ಲೂ ಜೊತೆಗಿದ್ದೆ: ಬ್ರೇಕಪ್ ಬಗ್ಗೆ ಐಶ್ವರ್ಯಾ ಮಾತುಸಲ್ಮಾನ್ ಕುಡಿದು ಹಿಂಸೆ ನೀಡುತ್ತಿದ್ದ ಕೆಟ್ಟ ಸಮಯದಲ್ಲೂ ಜೊತೆಗಿದ್ದೆ: ಬ್ರೇಕಪ್ ಬಗ್ಗೆ ಐಶ್ವರ್ಯಾ ಮಾತು

  ಸೋನು ಸೂದ್ ದೋಸೆ ಮಾಡಿದ್ದಕ್ಕೆ ಫರಾ ಖಾನ್ ಕಾಮೆಂಟ್ ನೋಡಿ ನೆಟ್ಟಿಗರು ಶಾಕ್ | Filmibeat Kannada
  ಸುಲ್ತಾನ್ ನಲ್ಲಿ ಮಿಂಚಿದ್ದ ಸಲ್ಲು

  ಸುಲ್ತಾನ್ ನಲ್ಲಿ ಮಿಂಚಿದ್ದ ಸಲ್ಲು

  ಬಳಿಕ ಸಲ್ಮಾನ್ 'ಸುಲ್ತಾನ್' ನಲ್ಲಿ ಅದ್ಭುತವಾಗಿ ನಟಿಸುವ ಮೂಲಕ ಅಭಿಮಾನಿಗಳ ಹೃದಯ ಗೆದ್ದಿದ್ದರು. ಸಲ್ಮಾನ್ ನಟಿಸಿದ ಮೊದಲ ಕ್ರೀಡಾ ಆಧಾರಿತ ಚಿತ್ರ ಇದಾಗಿದೆ. ಸಲ್ಮಾನ್ ಸದ್ಯ ರಾಧೆ ಸಿನಿಮಾ ರಿಲೀಸ್‌ಗೆ ಎದುರು ನೋಡುತ್ತಿದ್ದಾರೆ. ಇನ್ನು ಟೈಗರ್ ಸರಣಿಯ 3ನೇ ಆವೃತ್ತಿ ಸೇರಿದಂತೆ ಎರಡು ಸಿನಿಮಾಗಳ ಚಿತ್ರೀಕರಣಕ್ಕೆ ಹೊರಡಲು ಸಿದ್ಧರಾಗಿದ್ದಾರೆ.

  English summary
  Bollywood Actor Salman Khan was first choice for the iconic film Chak De India.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X