For Quick Alerts
  ALLOW NOTIFICATIONS  
  For Daily Alerts

  ಸಿಧು ಮೂಸೆವಾಲಾ ಕೊಂದವರ ಹಿಟ್‌ಲಿಸ್ಟ್‌ನಲ್ಲಿ ಸಲ್ಮಾನ್ ಖಾನ್

  |

  ಪಂಜಾಬಿ ಗಾಯಕ, ಕಾಂಗ್ರೆಸ್ ಮುಖಂಡ ಸಿಧು ಮೂಸೆವಾಲ ಅನ್ನು ನಡು ರಸ್ತೆಯನ್ನು ಶೂಟ್ ಮಾಡಿ ಸಾಯಿಸಿದ ಹಂತಕನ ಹಿಟ್‌ ಲಿಸ್ಟ್‌ನಲ್ಲಿ ಸಲ್ಮಾನ್ ಖಾನ್ ಸಹ ಇದ್ದರು ಎಂದು ಪಂಜಾಬ್‌ನ ಪೊಲೀಸ್ ವರಿಷ್ಠಾಧಿಕಾರಿ ಹೇಳಿದ್ದಾರೆ.

  ಇದೇ ವರ್ಷದ ಮೇ 29 ರಂದು ನಡೆದ ಸಿಧು ಮೂಸೆವಾಲಾ ಹತ್ಯೆಯ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ಹತ್ಯಾಕೋರರಲ್ಲಿ ಒಬ್ಬನಾದ ಕಪಿಲ್ ಪಂಡಿತ್ ಎಂಬಾತನನ್ನು ಬಂಧಿಸಿದ್ದು, ಹಿಟ್‌ ಲಿಸ್ಟ್‌ನಲ್ಲಿ ಸಿಧು ಮೂಸೆವಾಲಾ ಬಳಿಕ ಸಲ್ಮಾನ್ ಖಾನ್ ಇದ್ದುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.

  ಸಚಿನ್ ಬಿಷ್ಣೋಯಿ, ಸಂತೋಶ್ ವಾದವ್ ಜೊತೆಗೆ ಸೇರಿ ಸಲ್ಮಾನ್ ಖಾನ್ ಅನ್ನು ಕೊಲ್ಲಲು ಮುಂಬೈನಲ್ಲಿ ಸಲ್ಮಾನ್ ಖಾನ್ ಮನೆ ಕಚೇರಿ ಇನ್ನಿತರೆ ಕಡೆಗಳಲ್ಲಿ ಓಡಾಡಿದ್ದಾಗಿ ಸಹ ಕಪಿಲ್ ಪಂಡಿತ್ ಪೊಲೀಸರ ಬಳಿ ಬಾಯಿಬಿಟ್ಟಿದ್ದಾನೆ. ಸಿಧು ಮೂಸೆವಾಲಾ ಪ್ರಕರಣದಲ್ಲಿ ಆರೋಪಿಗಳಾದ ಸಂತೋಶ್ ವಾದವ್ ಹಾಗೂ ಅಜ್ಮಲ್‌ಪುರ್‌ನಲ್ಲಿ ಬೇರೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಸಚಿನ್ ತಪ್ಪನ್ ಸಹ ಸಲ್ಮಾನ್ ಖಾನ್‌ ಅನ್ನು ಕೊಲ್ಲುವ ಷಡ್ಯಂತ್ರದಲ್ಲಿ ಪಾಲುದಾರರು ಎಂದು ಬಂಧಿತ ಕಪಿಲ್ ಪಂಡಿತ್ ಹೇಳಿದ್ದಾನೆ.

  ಸಲ್ಮಾನ್ ಖಾನ್ ಅನ್ನು ಕೊಲ್ಲಲು ಪಣತೊಟ್ಟಿರುವ ಲಾರೆನ್ಸ್ ಬೀಶ್ನೋಯಿ ಗ್ಯಾಂಗ್‌, ಸಂಪತ್ ನೆಹ್ರಾ ಹಾಗೂ ಗೋಲ್ಡಿ ಬ್ರಾರ್ ಕಡೆಯಿಂದ ಕಪಿಲ್ ಪಂಡಿತ್ ಹಾಗೂ ಇತರರನ್ನು ಸಂಪರ್ಕಿಸಿ, ಸಲ್ಮಾನ್ ಖಾನ್ ಅನ್ನು ಕೊಲ್ಲಲು ಸುಫಾರಿ ನೀಡಲಾಗಿತ್ತಂತೆ.

  ಸಲ್ಮಾನ್ ಖಾನ್ ಗೆ ಸಿಧು ಮೂಸೆವಾಲಾ ಹತ್ಯೆ ಬಳಿಕ ಸಲ್ಮಾನ್ ಖಾನ್‌ಗೆ ಅದೇ ಗ್ಯಾಂಗ್‌ನಿಂದ ಕೊಲೆ ಬೆದರಿಕೆ ಬಂದಿದೆ. ಸಿಧು ಮೂಸೆವಾಲಾ ರೀತಿಯಲ್ಲಿಯೇ ನಿನ್ನನ್ನು ಕೊಲ್ಲುತ್ತೇವೆ ಎಂದು ಪತ್ರ ಬರೆದು ಆ ಪತ್ರ ಸಲ್ಮಾನ್ ಖಾನ್‌ರ ತಂದೆಯನ್ನು ತಲುಪುವಂತೆ ಹಂತಕರು ಮಾಡಿದ್ದಾರೆ. ಸಲ್ಮಾನ್ ಖಾನ್‌ಗೆ ಬೆದರಿಕೆ ಹಾಕಿರುವ ಹಿಂದೆ ಲಾರೆನ್ಸ್ ಬಿಷ್ಣೋಯಿ ಹಾಗೂ ಬ್ರಾರ್ ಸಹೋದರ ಕೈವಾಡವಿದೆ ಎಂದು ಪೊಲೀಸರು ಹೇಳಿದ್ದಾರೆ.

  ಸಲ್ಮಾನ್ ಖಾನ್ ಕೊಲೆ ಬೆದರಿಕೆ ಪ್ರಕರಣ ಬೆನ್ನಟ್ಟಿದ ಪೊಲೀಸರಿಗೆ ಹಲವು ಆಘಾತಕಾರಿ ಸಂಗತಿಗಳು ಗೊತ್ತಾಗಿವೆ. ಸಲ್ಮಾನ್ ಖಾನ್ ಅನ್ನು ಕೊಲ್ಲಲು ಹಲವು ಬಾರಿ ವಿಫಲ ಯತ್ನಗಳು ನಡೆದಿರುವುದಾಗಿ, ಸಲ್ಮಾನ್ ಖಾನ್ ಅನ್ನು ಕೊಲ್ಲಲು ವಿದೇಶಿ, ಅತ್ಯಾಧುನಿಕ ಮಾದರಿ ಬಂದೂಕನ್ನು ಸಹ ಹಂತಕರು ಖರೀದಿಸಿರುವುದು ಬೆಳಕಿಗೆ ಬಂದಿದೆ.

  ಸಲ್ಮಾನ್ ಖಾನ್‌ಗೆ ಬೆದರಿಕೆ ಬಂದ ಬಳಿಕ ಅವರಿಗೆ ನೀಡಿದ್ದ ಭದ್ರತೆಯನ್ನು ಹೆಚ್ಚು ಮಾಡಲಾಗಿದೆ. ಸಲ್ಮಾನ್ ಖಾನ್ ಸಹ ತಮ್ಮ ಭದ್ರತೆಗೆ ಪರವಾನಗಿ ಹೊಂದಿರುವ ಅತ್ಯಾಧುನಿಕ ಬಂದೂಕು ತೆಗೆದುಕೊಂಡಿದ್ದಾರೆ. ಬಹಿರಂಗ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದನ್ನು ಸಹ ಕಡಿಮೆ ಮಾಡಿದ್ದಾರೆ.

  ಸಿಧು ಮೂಸೆವಾಲಾ ಹತ್ಯೆ ಪ್ರಕರಣದ ಆರು ಮಂದಿ ಪ್ರಮುಖ ಆರೋಪಿಗಳನ್ನು ಪಂಜಾಬ್ ಪೊಲೀಸರು ಬಂಧಿಸಿದ್ದಾರೆ. ಆರನೇ ಮತ್ತು ಕೊನೆಯ ಶೂಟರ್ ದೀಪಕ್ ಮುಂಡಿಯನ್ನು ಪಂಜಾಬ್ ಪೊಲೀಸರು ಸೆಪ್ಟೆಂಬರ್ 10 ರಂದು ಬಂಧಿಸಿದ್ದಾರೆ.

  English summary
  Salman Khan was in the hit list of Sidhu Moosewala killers. Punjab Police said Sidhu Moosewala case accused Kapil Pandit revele he tried to kill Salman Khan.
  Monday, September 12, 2022, 19:36
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X