»   » ಸಲ್ಲು ಮಾಡಿದ ಕೆಲಸದಿಂದ ಕತ್ರಿನಾ ಬಗ್ಗೆ ಗುಲ್ಲೆಬ್ಬಿದೆ ಹೊಸ ಸುದ್ದಿ

ಸಲ್ಲು ಮಾಡಿದ ಕೆಲಸದಿಂದ ಕತ್ರಿನಾ ಬಗ್ಗೆ ಗುಲ್ಲೆಬ್ಬಿದೆ ಹೊಸ ಸುದ್ದಿ

Posted By:
Subscribe to Filmibeat Kannada

ಬಾಲಿವುಡ್ ನ ಮಾಜಿ ಪ್ರಣಯ ಪಕ್ಷಿಗಳಾಗಿದ್ದ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಈಗ ಬಾಲಿವುಡ್ ನ ಹಾಟ್ ಟಾಪಿಕ್ ಆಗಿದ್ದಾರೆ. ಇವರಿಬ್ಬರ ಲವ್ ಬ್ರೇಕ್ ಅಪ್ ಆಗಿ ವರ್ಷಗಳೇ ಕಳೆದಿವೆ. ಆದ್ರೀಗ, ಇವರಿಬ್ಬರ ಮಧ್ಯೆ ಮತ್ತೆ ಪ್ರೀತಿ ಶುರುವಾಗಿದೆ ಎಂಬ ಚರ್ಚೆಗಳು ಬಿಟೌನ್ ದುನಿಯಾದಲ್ಲಿ ಹರಿದಾಡುತ್ತಿದೆ.

ಇದಕ್ಕೆ ತಾಜಾ ನಿರ್ದಶನವಾಗಿದ್ದು ಐಫಾ ಪ್ರಶಸ್ತಿ ಸಮಾರಂಭದ ಸುದ್ದಿಗೋಷ್ಠಿ. ನ್ಯೂಯಾರ್ಕ್ ನಲ್ಲಿ ಐಫಾ ಪ್ರಶಸ್ತಿ ಸಮಾರಂಭ ನಡೆಯುತ್ತಿದೆ. ಈ ವೇದಿಕೆಯಲ್ಲಿ ಬಾಲಿವುಡ್ ತಾರೆಯರಲ್ಲಾ ಭಾಗವಹಿಸಿದ್ದಾರೆ. ಈ ವೇಳೆ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ವಿಶೇಷವಾಗಿ ಎಲ್ಲರ ಗಮನ ಸೆಳೆದಿದ್ದಾರೆ.

Salman Khan Wish To Katrina Kaif Birthday

ಹೌದು, ಸಾರ್ವಜನಿಕವಾಗಿ ಎಲ್ಲರ ಮುಂದೆ ಕತ್ರಿನಾಗೆ ಕಿಸ್ ಮಾಡಿದ ಸಲ್ಮಾನ್ ಖಾನ್, ವಿಶೇಷವಾಗಿ ಹುಟ್ಟುಹಬ್ಬಕ್ಕೆ ಸ್ಪೆಷಲ್ ವಿಶ್ ಮಾಡಿದ್ದಾರೆ. ಜುಲೈ 16 ರಂದು ಕತ್ರಿನಾ ಕೈಫ್ ಬರ್ತ್ ಡೇ ಆಚರಿಸಿಕೊಳ್ಳುತ್ತಿದ್ದು, ಎರಡು ದಿನ ಮುಂಚೆಯೇ ಸಲ್ಲು, ಕತ್ರಿನಾಗೆ ಶುಭ ಕೋರಿದ್ದಾರೆ.

Salman Khan Wish To Katrina Kaif Birthday

''ಹ್ಯಾಪಿ ಬರ್ತ್ ಡೇ......ಹ್ಯಾಪಿ ಬರ್ತ್ ಡೇ ಡಿಯರ್ ಕತ್ರಿನಾ......'' ಎಂದು ಹಾಡುವ ಮೂಲಕ ನೆರದಿದ್ದವರಿಗೆ ಆಶ್ಚರ್ಯ ನೀಡಿದ್ದಾರೆ. ಹಾಗೆ ಒಂದು ಹೆಜ್ಜೆ ಮುಂದೆ ಹೋದ ಸಲ್ಲು, ಕತ್ರಿನಾ ಅವರನ್ನ ತಬ್ಬಿಕೊಂಡು ಚುಂಬಿಸಿದ್ದಾರೆ. ಇದನ್ನ ನೋಡಿದ ಬಾಲಿವುಡ್ ಮಂದಿ, ಸಲ್ಲು ಮತ್ತು ಕತ್ರಿನಾ ಅವರ ಸಂಬಂಧ ಮತ್ತೆ ಚಿಗುರಿದೆ ಎನ್ನುವ ಮಾತುಗಳನ್ನಾಡಿದ್ದಾರೆ.

English summary
Ever since Katrina Kaif has broken up with Ranbir Kapoor, she has become closer than ever with Salman Khan. Again. From shooting Tiger Zinda Hai to IIFA presser in Mumbai, the two have been sharing the cutest banter ever.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada