ನೀವು ನನಗಾಗಿ ಹಾಡಿದ ಪ್ರತಿಯೊಂದು ಹಾಡಿಗೂ ಧನ್ಯವಾದಗಳು: ಎಸ್ ಪಿ ಬಿ ಬಗ್ಗೆ ಸಲ್ಮಾನ್ ಖಾನ್ ಭಾವುಕ ಮಾತು
ಕಳೆದ ಒಂದು ತಿಂಗಳಿಂದ ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಲೆಜೆಂಡರಿ ಗಾಯಕ ಎಸ್.ಪಿ ಬಾಲಸುಬ್ರಹ್ಮಣ್ಯಂ ಆರೋಗ್ಯ ಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಕಳೆದ ಕೆಲವು ದಿನಗಳಿಂದ ಸುಧಾರಿಸಕೊಳ್ಳುತ್ತಿದ್ದ ಎಸ್ ಪಿ ಬಿ ಆರೋಗ್ಯ ಇನ್ನಷ್ಟು ಬಿಗಡಾಯಿಸಿದೆ ಎಂದು ಚೆನ್ನೈನ ಎಂಜಿಎಂ ಆಸ್ಪತ್ರೆಯ ಹೆಲ್ತ್ ಬುಲೆಟಿನ್ ನಲ್ಲಿ ತಿಳಿಸಲಾಗಿದೆ.
ಎಸ್ ಪಿ ಬಿ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ ಎಂದು ಗೊತ್ತಾಗುತ್ತಿದ್ದಂತೆ ಅಭಿಮಾನಿಗಳು, ಸ್ನೇಹಿತರು ಚಿತ್ರರಂಗದ ಗಣ್ಯರು ಬೇಗ ಗುಣಮುಖರಾಗುವಂತೆ ಪ್ರಾರ್ಥಿಸುತ್ತಿದ್ದಾರೆ. ಬಾಲಿವುಡ್ ನಟ ಸಲ್ಮಾನ್ ಖಾನ್ ಸಹ ಎಸ್ ಪಿ ಬಿ ಬೇಗ ಚೇತರಿಸಿಕೊಳ್ಳಲಿ ಎಂದಿದ್ದಾರೆ. ಜೊತೆಗೆ ನೀವು ಹಾಡಿದ ಪ್ರತಿಯೊಂದು ಹಾಡಿಗೂ ಧನ್ಯವಾದಗಳು ಎಂದು ಭಾವುಕವಾಗಿ ಟ್ವೀಟ್ ಮಾಡಿದ್ದಾರೆ.

ಎಸ್ ಪಿ ಬಿ ಬಗ್ಗೆ ಸಲ್ಮಾನ್ ಖಾನ್ ಟ್ವೀಟ್
ಎಸ್ ಪಿ ಬಿ ಬಗ್ಗೆ ಸಲ್ಮಾನ್, " ಎಸ್ ಪಿ ಬಾಲಸುಬ್ರಹ್ಮಣ್ಯಂ ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನನ್ನ ಹೃದಯದಿಂದ ಆಶೀಸುತ್ತಿದ್ದೀನಿ. ನೀವು ನನಗಾಗಿ ಹಾಡಿದ ಪ್ರತಿ ಹಾಡಿಗೂ ಧನ್ಯವಾದಗಳು. ವಿಶೇಷವಾಗಿ ದಿಲ್ ದಿವಾನ ಹೀರೋ ಪ್ರೇಮ್ ಗಾಗಿ ಹಾಡಿರುವ ಹಾಡುಗಳಿಗೆ. ಲವ್ ಯು ಸರ್" ಎಂದು ಬರೆದುಕೊಂಡಿದ್ದಾರೆ.

ಸಲ್ಮಾನ್ ಖಾನ್ ಹಿಟ್ ಸಿನಿಮಾಗಳಲ್ಲಿ ಎಸ್ ಪಿ ಬಿ ಧ್ವನಿ
ಎಸ್ ಪಿ ಬಿ ಹಿಂದಿ ಸಿನಿಮಾಗಳಿಗೂ ಸಾಕಷ್ಟು ಹಾಡುಗಳನ್ನು ಹಾಡಿದ್ದಾರೆ. ಸಲ್ಮಾನ್ ಖಾನ್ ಅಭಿನಯದ ಹಮ್ ಆಪ್ ಕೇ ಹೈ ಕೌನ್, ಮೈನೆ ಪ್ಯಾರ್ ಕಿಯಾ ಅಂತಹ ಸೂಪರ್ ಹಿಟ್ ಸಿನಿಮಾಗಳಿಗೆ ಎಸ್ ಪಿ ಬಿ ಅದ್ಭುತ ಧ್ವನಿ ನೀಡಿದ್ದಾರೆ.

ಹೆಚ್ಚು ಲೈಫ್ ಸಪೋರ್ಟ್ ಸಾಧನಗಳ ಅಳವಡಿಕೆ
ಕಳೆದ 24ಗಂಟೆಯಿಂದ ಎಸ್ ಪಿ ಬಿ ಆರೋಗ್ಯ ಕ್ಷೀಣಿಸುತ್ತಿದ್ದು. ಹೆಚ್ಚು ಲೈಫ್ ಸಪೋರ್ಟ್ ಸಾಧನಗಳನ್ನು ಬಳಕೆ ಮಾಡಲಾಗಿದೆ. ಎಂ ಜಿ ಎಂ ಆಸ್ಪತ್ರೆಯ ನುರಿತ ತಜ್ಞರು ಖ್ಯಾತ ಗಾಯಕನ ಆರೋಗ್ಯದ ಮೇಲೆ ನಿಗಾ ಇರಿಸಿದೆ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
Recommended Video

ಕಮಲ್ ಹಾಸನ್ ಭೇಟಿ
ಎಸ್ ಪಿ ಬಿ ಆರೋಗ್ಯ ಮತ್ತಷ್ಟು ಹದಗೆಟ್ಟಿದೆ ಎಂದು ಗೊತ್ತಾಗುತ್ತಿದ್ದಂತೆ ಖ್ಯಾತ ನಟ ಕಮಲ್ ಹಾಸನ್ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ್ದಾರೆ. ರಾತ್ರಿ ಎಂಜಿಎಂ ಆಸ್ಪತ್ರೆಗೆ ಭೇಟಿ ನೀಡಿ ಎಸ್ ಪಿ ಬಿ ಆರೋಗ್ಯದ ಸ್ಥಿತಿಯ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ಗಾನ ಗಾರುಡಿಗ ಗುಣಮುಖರಾಗುತ್ತಿದ್ದಾರೆ ಎಂದು ಕೋಟ್ಯಂತರ ಅಭಿಮಾನಿಗಳ ಮೊಗದಲ್ಲಿ ಸಂತಸ ಮೂಡಿತ್ತು. ಆದರೆ ಮತ್ತೆ ಆರೋಗ್ಯ ಸ್ಥಿತಿ ಗಂಭೀರವಾಗಿದೆ ಎನ್ನುವ ಸುದ್ದಿ ಕೇಳಿ ಆತಂಕ ಮನೆ ಮಾಡಿದೆ.


Click it and Unblock the Notifications











