For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್ ಸಿನಿಮಾಕ್ಕೆ ನೀರಸ ಓಪನಿಂಗ್, ತೀರ ಕಡಿಮೆ ಕಲೆಕ್ಷನ್

  |

  ಸಲ್ಮಾನ್ ಖಾನ್ ಸಿನಿಮಾಗಳ ಕ್ರೇಜ್ ಬೇರೆ ಮಟ್ಟದ್ದೇ ಆಗಿರುತ್ತದೆ. ಅದರಲ್ಲಿಯೂ ರಂಜಾನ್ ಸಮಯದಲ್ಲಿ ಸಲ್ಮಾನ್ ಸಿನಿಮಾ ಬಿಡುಗಡೆ ಆಯಿತೆಂದರೆ ಮುಗಿಯಿತು, ಬೇರಾವ ಸಿನಿಮಾಗಳೂ ಅದರ ಎದುರು ನಿಲ್ಲುವಂತೆಯೇ ಇಲ್ಲ.

  ಸಲ್ಮಾನ್ ಖಾನ್ ಎಷ್ಟೆ ಕೆಟ್ಟ ಸಿನಿಮಾಗಳನ್ನು ಮಾಡಲಿ ಅವರ ಸಿನಿಮಾಗಳು 100 ಕೋಟಿ ಕ್ಲಬ್ ಸೇರುವುದು ಪಕ್ಕಾ. ಒಂದು ಲೆಕ್ಕದ ಪ್ರಕಾರ ಸಲ್ಮಾನ್ ಖಾನ್‌ರ ಈ ಹಿಂದಿನ ಸಿನಿಮಾ 'ರಾಧೆ'ಯನ್ನು ಒಟಿಟಿಯು ಬರೋಬ್ಬರಿ 200 ಕೋಟಿ ಕೊಟ್ಟು ಖರೀದಿಸಿತು ಮತ್ತು ಆ ಬಂಡವಾಳವನ್ನು ತಿಂಗಳೊಳಗಾಗಿ ಮರಳಿ ಪಡೆಯಿತು ಸಹ.

  ಭಾರತದಲ್ಲೇ ಅತಿ ದೊಡ್ಡ ಮಾರುಕಟ್ಟೆ ಹೊಂದಿರುವ ನಟ ಸಲ್ಮಾನ್ ಖಾನ್ ಆದರೆ ಅವರ ಹೊಸ ಸಿನಿಮಾ 'ಅಂತಿಮ್' ಈ ಹೇಳಿಕೆಯನ್ನು ಸುಳ್ಳಾಗಿಸುವಂತೆ ಕೆಟ್ಟ ಓಪನಿಂಗ್ ಪಡೆದುಕೊಂಡಿದೆ. ಸಲ್ಮಾನ್ ಖಾನ್‌ರ 'ಅಂತಿಮ್' ಸಿನಿಮಾದ ಓಪನಿಂಗ್ ದಕ್ಷಿಣ ಭಾರತದ ಸಾಮಾನ್ಯ ನಟನ ಸಿನಿಮಾಕ್ಕಿಂತಲೂ ಕಳಪೆ ಓಪನಿಂಗ್ ಪಡೆದುಕೊಂಡಿದೆ.

  'ಅಂತಿಮ್' ಸಿನಿಮಾವು ನವೆಂಬರ್ 26ರಂದು ಬಿಡುಗಡೆ ಆಗಿದ್ದು ಭಾರತದಾದ್ಯಂತ ಮೊದಲ ದಿನದ ಕಲೆಕ್ಷನ್ ಕೇವಲ 4.50 ಕೋಟಿ ರೂಪಾಯಿ. ಇತ್ತೀಚಿನ ವರ್ಷಗಳಲ್ಲಿ ಸಲ್ಮಾನ್ ಖಾನ್‌ರ ಸಿನಿಮಾವೊಂದು ಇಷ್ಟು ಕಡಿಮೆ ಮೊತ್ತದ ಹಣವನ್ನು ಮೊದಲ ದಿನ ಗಳಿಸುತ್ತಿರುವುದು ಇದೇ ಮೊದಲು ಎನ್ನಲಾಗುತ್ತಿದೆ.

  'ಅಂತಿಮ್' ಸಿನಿಮಾಕ್ಕೆ 'ದಬಂಗ್', 'ರಾಧೆ', 'ಏಕ್‌ ಥಾ ಟೈಗರ್' ಮಾದರಿಯಲ್ಲಿ ದೊಡ್ಡ ಮಟ್ಟದ ಪ್ರಚರ ನೀಡಲಾಗಿರಲಿಲ್ಲ ಹಾಗಾಗಿ ಸಿನಿಮಾ ಮೊದಲ ದಿನ ಬಹಳ ಕಡಿಮೆ ಕಲೆಕ್ಷನ್ ಗಳಿಸಿದೆ ಎನ್ನಲಾಗುತ್ತಿದೆ. ಇದರ ಜೊತೆಗೆ 'ಅಂತಿಮ್' ಸಿನಿಮಾಕ್ಕೆ ಜಾನ್ ಅಬ್ರಹಾಂರ 'ಸತ್ಯಮೇವ ಜಯತೆ 2' ಸಿನಿಮಾದ ಸ್ಪರ್ಧೆ ಸಹ ಎದುರಾಯ್ತು ಮತ್ತು ದಕ್ಷಿಣ ಭಾರತದಲ್ಲಿ 'ಅಂತಿಮ್‌'ಗೆ ಇಲ್ಲಿನ ಸ್ಥಳೀಯ ಸಿನಿಮಾಗಳ ಪೈಪೋಟಿ ಎದುರಿಸಬೇಕಾಯ್ತಾದ್ದರಿಂದ ಕಲೆಕ್ಷನ್ ತೀವ್ರ ಇಳಿಮುಖವಾಗಿದೆ.

  Salman Khans Antim Movie Collects Very Less Money At Box Office On First Day

  ಸಲ್ಮಾನ್ ಖಾನ್‌ರ ಅತಿ ಕೆಟ್ಟ ಸಿನಿಮಾಗಳಲ್ಲಿ ಒಂದು ಎನ್ನಲಾಗುವ 'ರೇಸ್ 3' ಸಿನಿಮಾ ಸಹ ಮೊದಲ ದಿನ 21 ಕೋಟಿ ರುಪಾಯಿ ಕಲೆಕ್ಷನ್ ಮಾಡಿತ್ತು, ಅದೂ ಮೂರು ವರ್ಷದ ಹಿಂದೆ. ಇನ್ನು ಕೆಲವು ದಿನಗಳ ಹಿಂದಷ್ಟೇ ಬಿಡುಗಡೆ ಆದ ಬಾಲಿವುಡ್ ಸಿನಿಮಾ 'ಸೂರ್ಯವಂಶಿ' ಮೂರು ವಾರಗಳಲ್ಲಿ ಬರೋಬ್ಬರಿ 175 ಕೋಟಿ ರುಪಾಯಿ ಕಲೆಕ್ಷನ್ ಮಾಡಿ ಹಿಟ್ ಸಿನಿಮಾ ಎನಿಸಿಕೊಂಡಿದೆ. ಆದರೆ 'ಅಂತಿಮ್' ಸಿನಿಮಾದ ಮೊದಲ ದಿನದ ಕಲೆಕ್ಷನ್ ನೋಡಿದರೆ ಈ ಸಿನಿಮಾ 100 ಕೋಟಿ ಗಳಿಕೆ ದಾಟುವುದು ಅನುಮಾನ ಎನ್ನಲಾಗುತ್ತಿದೆ.

  ಸಲ್ಮಾನ್ ಖಾನ್‌ರ 'ಅಂತಿಮ್' ಸಿನಿಮಾ ಮರಾಠಿಯ 'ಮುಲ್ಶಿ ಪಟ್ಟೇರನ್' ಸಿನಿಮಾದ ರೀಮೇಕ್ ಆಗಿದ್ದು, ಸಿನಿಮಾವನ್ನು ಮಹೇಶ್ ಮಂಜ್ರೇಕರ್ ನಿರ್ಮಾಣ ಮಾಡಿದ್ದಾರೆ. ಸಿನಿಮಾಕ್ಕೆ ಹೆಚ್ಚಿನ ಪ್ರಚಾರ ಮಾಡಲಾಗಿಲ್ಲ. ಸಿನಿಮಾದಲ್ಲಿ ಸಲ್ಮಾನ್ ಖಾನ್ ಪೊಲೀಸ್ ಪಾತ್ರಧಾರಿಯಾಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ನಾಯಕನಿಗಿಂತಲೂ ವಿಲನ್ ಪಾತ್ರ ಹೆಚ್ಚು ಪವರ್‌ಫುಲ್ ಆಗಿದೆ ಎಂಬುದು ಸಹ ಸಲ್ಮಾನ್ ಅಭಿಮಾನಿಗಳ ನಿರಾಸೆಗೆ ಕಾರಣ. 'ಅಂತಿಮ್' ಸಿನಿಮಾದಲ್ಲಿ ಸಲ್ಮಾನ್‌ರದ್ದು ಕೇವಲ ಅತಿಥಿ ಪಾತ್ರ ಎಂಬ ಗಾಳಿ ಸುದ್ದಿ ಸಹ ಬಿಡುಗಡೆಗೆ ಮುನ್ನ ಹರಿದಾಡಿತ್ತು, ಸಿನಿಮಾದ ಕಲೆಕ್ಷನ್ ಕುಸಿಯಲು ಅದು ಸಹ ಕಾರಣ ಆಗಿರಬಹುದು. ಆದರೆ 'ಅಂತಿಮ್' ಸಿನಿಮಾ ಹಿಟ್ ಆಗಲಿದೆಯೇ? ಅಥವಾ ಫ್ಲಾಪ್ ಆಗಲಿದೆಯೇ ಎಂದು ಶನಿವಾರ ಹಾಗೂ ಭಾನುವಾರ ಆಗುವ ಕಲೆಕ್ಷನ್‌ನಿಂದ ಗೊತ್ತಾಗಲಿದೆ.

  English summary
  Salman Khan's Antim movie collects very less amount at box office on its first day of release. Movie able to collect only 4.50 crore rs.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X