ಎಲ್ಲರಿಗಿಂತ ವಿಭಿನ್ನವಾಗಿ 'ಬಾಟಲ್ ಕ್ಯಾಪ್ ಚಾಲೆಂಜ್' ಮಾಡಿದ ಸಲ್ಮಾನ್ ಖಾನ್
ಸಿನಿ ಜಗತ್ತಿನಲ್ಲಿ ಬಾಟಲ್ ಕ್ಯಾಪ್ ಚಾಲೆಂಜ್ ವಿಶೇಷವಾಗಿ ಗಮನ ಸೆಳೆಯುತ್ತಿದೆ. ಎದುರುಗಡೆ ಇರುವ ಬಾಟಲ್ ಕ್ಯಾಪ್ ನ್ನು ಕಾಲಿನಿಂದ ಪಂಚ್ ಮಾಡಿ ತೆಗೆಯುವುದು ಈ ಚಾಲೆಂಜ್.
ಇಂತಹ ವಿಶೇಷವಾದ ಚಾಲೆಂಜ್ ಸ್ವೀಕರಿಸಿ ಬಹುತೇಕ ನಟ, ನಟಿಯರು ಬಾಟಲ್ ಕ್ಯಾಪ್ ಓಪನ್ ಮಾಡಿ ಸಂಭ್ರಮ ಪಟ್ಟಿದ್ದರು. ಅಕ್ಷಯ್ ಕುಮಾರ್, ಗೋಲ್ಡನ್ ಸ್ಟಾರ್ ಗಣೇಶ್, ಅರ್ಜುನ್ ಸರ್ಜಾ, ಪುನೀತ್ ರಾಜ್ ಕುಮಾರ್, ರಚಿತಾ ರಾಮ್, ಚಿರಂಜೀವಿ ಸರ್ಜಾ ಹೀಗೆ ಅನೇಕರು ಮಾಡಿದ್ದಾರೆ.
ಈ ಬಾಟಲ್ ಚಾಲೆಂಜ್ ಸ್ವೀಕರಿಸಿ ಪ್ರಚಾರ ಮಾಡಿದವರಂತೆ ವಿರೋಧಿಸಿದವರು ಇದ್ದಾರೆ. ಹಾಗೂ ಅದನ್ನ ವಿಭಿನ್ನವಾಗಿ ಮಾಡುವಂತೆ ಸಲಹೆ ನೀಡಿದ್ದವರು ಕೂಡ ಇದ್ದಾರೆ. ಇದೀಗ, ಬಾಲಿವುಡ್ ನಟ ಸಲ್ಮಾನ್ ಖಾನ್ ಬಾಟಲ್ ಕ್ಯಾಪ್ ಚಾಲೆಂಜ್ ಮಾಡಿ ಗಮನ ಸೆಳೆದಿದ್ದಾರೆ.

ಈ ಹಿಂದೆ ಸೆಲೆಬ್ರಿಟಿಗಳು ಮಾಡಿದ್ದಕ್ಕಿಂತ ವಿಭಿನ್ನವಾಗಿ ಸಲ್ಲು ಬಾಟಲ್ ಕ್ಯಾಪ್ ಚಾಲೆಂಜ್ ಮಾಡಿದ್ದು, ಸಮಾಜಕ್ಕೆ ಮತ್ತು ತನ್ನ ಸಹ ಕಲಾವಿದರಿಗೆ ತಿಳುವಳಿಕೆ ನೀಡಿದ್ದಾರೆ.
'ಪಾನಿ ಬಚಾವ್' ಎಂಬ ಕ್ಯಾಪ್ಷನ್ ಹಾಕಿ ಬಾಟಲ್ ಕ್ಯಾಪ್ ಚಾಲೆಂಜ್ ವಿಡಿಯೋ ಅಪ್ ಲೌಡ್ ಮಾಡಿರುವ ಸಲ್ಲು, ಕಾಲಿನಿಂದ ಬಾಟಲ್ ಕ್ಯಾಪ್ ತೆಗೆಯದೇ, ಬಾಯಿಂದ ಊದಿ ಕ್ಯಾಪ್ ತೆಗೆದು ಬಾಟಲ್ ನಲ್ಲಿದ್ದ ನೀರು ಕುಡಿದು ನೀರನ್ನ ಉಳಿಸಿ ಎಂದಿದ್ದಾರೆ.
ಇದು ಅಭಿಮಾನಿಗಳಿಂದ ಭಾರಿ ಮೆಚ್ಚುಗೆ ಪಡೆದುಕೊಂಡಿದೆ. ರೆಗ್ಯುಲರ್ ಆಗಿ ಎಲ್ಲರೂ ಮಾಡಿದ್ದನ್ನ ಒಪ್ಪದ ಬ್ಯಾಡ್ ಬಾಯ್, ತಮ್ಮದೇ ಸ್ಟೈಲ್ ನಲ್ಲಿ ಚಾಲೆಂಜ್ ಮಾಡಿ ಹೊಸ ರೀತಿಯ ಚಾಲೆಂಜ್ ಗೆ ಬುನಾದಿ ಹಾಕಿದ್ದಾರೆ. ಬಹುಶಃ ಇದನ್ನ ನೋಡಿದ ಅಭಿಮಾನಿಗಳು ಮುಂದಿನ ದಿನದಲ್ಲಿ ಬಾಟಲ್ ಕ್ಯಾಪ್ ಚಾಲೆಂಜ್ ನ್ನ ಸಲ್ಲು ರೀತಿ ಮಾಡಿದ್ರು ಅಚ್ಚರಿ ಇಲ್ಲ.


Click it and Unblock the Notifications











