ಸಲ್ಮಾನ್ ಫಾರ್ಮ್ ಹೌಸ್‌ನಲ್ಲಿ ಸೆಲೆಬ್ರಿಟಿಗಳ ಶವ ಹೂಳಲಾಗುತ್ತಿದೆ ಎಂದ ಕಕ್ಕಡ್!

ಸಲ್ಮಾನ್ ಖಾನ್‌ರ ಪನ್ವೇಲ್ ಫಾರಂ ಹೌಸ್ ಬಳಿಯಲ್ಲಿಯೇ ಜಮೀನು ಹೊಂದಿದ್ದ ವ್ಯಕ್ತಿ ಕೇತನ್ ಕಕ್ಕಡ್. ಯೂಟ್ಯೂಬ್ ಚಾನೆಲ್ ಒಂದರಲ್ಲಿ ಮಾತನಾಡಿದ್ದ ಕೇತನ್ ಕಕ್ಕಡ್, ಸಲ್ಮಾನ್ ಖಾನ್‌ ತಮ್ಮ ಜಮೀನು ಕಬಳಿಸಿದ್ದಾರೆಂದು ಆರೋಪಿಸಿದ್ದರು. ಅದು ಮಾತ್ರವೇ ಅಲ್ಲದೆ ಸಲ್ಮಾನ್‌ರ ಧರ್ಮದ ಬಗ್ಗೆಯೂ ನಿಂದನೆ ಮಾಡಿದ್ದರು. ಸಲ್ಮಾನ್ ವ್ಯಕ್ತಿತ್ವದ ಬಗ್ಗೆಯೂ ಟೀಕೆಗಳನ್ನು ಮಾಡಿದ್ದರು. ಈ ಬಗ್ಗೆ ವಕೀಲರ ಮೂಲಕ ನ್ಯಾಯಾಲಯದಲ್ಲಿ ಉತ್ತರಿಸಿರುವ ಸಲ್ಮಾನ್ ಖಾನ್, ''ಜಮೀನಿನ ವಿಷಯಕ್ಕೆ ನೀವು ನನ್ನ ಧರ್ಮದ ವಿಷಯವನ್ನು ಏಕೆ ಎಳೆದು ತಂದಿರಿ. ಜಮೀನಿನ ವಿಷಯದಲ್ಲಿ ನೀವು ನನ್ನ ವೈಯಕ್ತಿಕ ನಿಂದನೆ, ತೇಜೊವಧೆ ಏಕೆ ಮಾಡಿದಿರಿ?'' ಎಂದು ಪ್ರಶ್ನೆ ಮಾಡಿದ್ದರು.

ಇದೆಲ್ಲದರ ಬೆನ್ನಲ್ಲೆ ಇದೀಗ ಮತ್ತೆ ಕೇತನ್ ಕಕ್ಕಡ್ ಮತ್ತೊಂದಷ್ಟು ಆರೋಪಗಳನ್ನು ಮಾಡಿದ್ದಾರೆ. ಸಲ್ಮಾನ್ ಖಾನ್ ಫಾರ್ಮ್‌ ಹೌಸ್‌ನಲ್ಲಿ ಅಕ್ರಮಗಳು ನಡೆಯುತ್ತಿದೆ. ಹಾಗೂ ಸಲ್ಮಾನ್ ಖಾನ್ ಅವರ ಫಾರ್ಮ್‍ಹೌಸ್‍ನಲ್ಲಿ ಸಿನಿಮಾ ತಾರೆಯರ ಶವಗಳನ್ನು ಹೂಳಲಾಗುತ್ತಿದೆ. ಅದು ಅಲ್ಲದೇ ಇಲ್ಲಿ ಮಕ್ಕಳ ಕಳ್ಳಸಾಗಣೆ ಕೂಡ ನಡೆಯುತ್ತದೆ ಎಂದು ಆರೋಪಿಸಿದ್ದಾರೆ. ಕಕ್ಕಡ್ ಅವರ ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಸಲ್ಮಾನ್ ಖಾನ್ ಪರ ವಕೀಲ ಪ್ರದೀಪ್ ಗಾಂಧಿ, ಈ ಆರೋಪಗಳಿಗೆ ಯಾವುದೇ ಸಾಕ್ಷಿಗಳು ಇಲ್ಲ. ಇದು ಸಲ್ಮಾನ್ ಖಾನ್ ಅವರ ಪ್ರತಿಷ್ಠೆಗೆ ಕಳಂಕ ತರುವ ಉದ್ದೇಶಪೂರ್ವಕ ಪ್ರಯತ್ನವಾಗಿದೆ ಎಂದು ಹೇಳಿಕೆ ನೀಡಿದ್ದಾರೆ.

ಹೀಗೆ ತನ್ನ ಮೇಲೆ ಪದೇ ಪದೇ ಸುಳ್ಳು, ಅವಹೇಳನಕಾರಿ ಮತ್ತು ಮಾನಹಾನಿಕರ ಆರೋಪಗಳನ್ನು ಕಕ್ಕಡ್ ಮಾಡುವುದನ್ನು ತಡೆಯಲು ಸಲ್ಮಾನ್ ಖಾನ್ ಕಕ್ಕಡ್ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನು ಹಾಕಿದ್ದಾರೆ. ಆದರೆ ಮಧ್ಯಂತರ ಆದೇಶದಿಂದ ಸಲ್ಮಾನ್ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

Salman Khans farmhouse neighbour Ketan Kakkad claims that bodies of film stars are buried

ಇದಿಷ್ಟೇ ಅಲ್ಲದೇ ಕೆಲ ದಿನಗಳ ಹಿಂದೆ ಕೂಡ ಕೇತನ್ ಕಕ್ಕಡ್ ಯೂಟ್ಯೂಬ್ ಚಾನೆಲ್ ಒಂದರಲ್ಲಿ ಮಾತನಾಡಿದ್ದ ಸಲ್ಮಾನ್ ಖಾನ್‌ ತಮ್ಮ ಜಮೀನು ಕಬಳಿಸಿದ್ದಾರೆಂದು ಆರೋಪ ಮಾಡಿದ್ದರು. ಮತ್ತು ಅದು ಸಲ್ಮಾನ್‌ ಖಾನ್ ಅವರ ಧರ್ಮದ ಬಗ್ಗೆಯೂ ನಿಂದನೆ ಮಾಡಿದ್ದರು. ಸಲ್ಮಾನ್ ವ್ಯಕ್ತಿತ್ವದ ಬಗ್ಗೆಯೂ ಟೀಕೆಗಳನ್ನು ಮಾಡಿದ್ದರು.ಈಗ ಈ ರೀತಿ ಗಂಭಿರ ವಿಚಾರದ ಬಗ್ಗೆ ಆರೋಪ ಮಾಡುತ್ತಿರುವುದಕ್ಕೆ ಸಲ್ಮಾನ್ ಖಾನ್ ಮತ್ತು ಕುಟುಂಬಸ್ತರು ಆಕ್ರೋಶ ಭರಿತರಾಗಿದ್ದಾರೆ.

"ನನ್ನ ತಾಯಿ ಹಿಂದು, ತಂದೆ ಮುಸ್ಲಿಂ. ನನ್ನ ಸಹೋದರರು ಮದುವೆ ಆಗಿರುವುದು ಹಿಂದುಗಳನ್ನು ನಾವು ಮನೆಯಲ್ಲಿ ಎಲ್ಲ ಧರ್ಮಗಳನ್ನು ಪಾಲಿಸುತ್ತೇವೆ. ಎಲ್ಲ ಧರ್ಮದ ಹಬ್ಬಗಳನ್ನು ಆಚರಿಸುತ್ತೇವೆ. ಹೀಗಿರುವಾಗ ಧರ್ಮದ ಕಾರಣಕ್ಕೆ ನನ್ನನ್ನು ನಿಂದಿಸುವ ಅಗತ್ಯವೇನು'' ಎಂದು ಪ್ರಶ್ನೆ ಮಾಡಿದ್ದಾರೆ. ಕಕ್ಕಡ್‌ ಅವರ ಜಮೀನನ್ನು ಅರಣ್ಯ ಇಲಾಖೆ ರದ್ದು ಮಾಡಿದೆಯೇ ಹೊರತು ನಾನಲ್ಲ. ನಾನು ರಾಜಕೀಯದಿಂದ ದೂರ ಇರುವ ವ್ಯಕ್ತಿ. ಕಕ್ಕಡ್ ಮಾಡಿರುವುದು ಸುಳ್ಳು ಆರೋಪ'' ಎಂದು ಸಲ್ಮಾನ್ ಖಾನ್ ಪರವಾಗಿ ವಕೀಲ ಪ್ರದೀಪ್ ನ್ಯಾಯಾಲಯಕ್ಕೆ ತಿಳಿಸಿದ್ದರು.

ಇನ್ನು ಸಲ್ಮಾನ್‌ ಖಾನ್‌ ಅವರ ಪನ್ವೆಲ್ ಫಾರ್ಮ್‌ ಹೌಸ್‌ ಒಟ್ಟು ವಿಸ್ತೀರ್ಣ 150 ಎಕರೆ. 150 ಎಕರೆಯ ವಿಶಾಲ ಜಾಗದಲ್ಲಿ ಸಲ್ಮಾನ್‌ ಖಾನ್‌ ಅವರು ಫಾರ್ಮ್‌ ಹೌಸ್‌ ನಿರ್ಮಾಣ ಮಾಡಿಕೊಂಡಿದ್ದಾರೆ. ಫಾರ್ಮ್ ಹೌಸ್‌ಗೆ ಇಷ್ಟು ಜಾಗ ಬೇಕಾ ಎಂದು ಅಚ್ಚರಿ ಆಗಬಹುದು. ಆದರೆ ಈ ಜಾಗದಲ್ಲಿ ಮನೆ, ತೋಟ, ಸೇರಿದಂತೆ ಅಗತ್ಯ ಇರುವ ಎಲ್ಲವನ್ನು ಸಲ್ಲು ನಿರ್ಮಾಣ ಮಾಡಿಕೊಂಡಿದ್ದಾರೆ. ಆಗಾಗ ಇಲ್ಲಿಗೆ ಭೇಟಿ ನೀಡುತ್ತಾ ಸಲ್ಮಾನ್ ಖಾನ್‌ ಸುದ್ದಿ ಆಗುತ್ತಾರೆ. ಲಾಕ್ ಡೌನ್‌ ಸಮಯದಲ್ಲಿ ಸಲ್ಮಾನ್ ಖಾನ್ ಹೆಚ್ಚಾಗಿ ಇಲ್ಲೇ ಕಾಲ ಕಳೆದಿದ್ದಾರೆ.

150 ಎಕರೆ ಜಾಗದಲ್ಲಿ ನಿರ್ಮಾಣ ಆಗಿರುವ ಈ ಫಾರ್ಮ್‌ ಹೌಸ್‌ ಬೆಲೆ 80 ಕೋಟಿ ಎಂದು ವರದಿ ಆಗಿದೆ. ಸಂಪೂರ್ಣ ಫಾರ್ಮ್ ಹೌಸನ್ನು ತಮಗೆ ಬೇಕಾದ ರೀತಿಯಲ್ಲಿ ಸಲ್ಮಾನ್‌ ಖಾನ್‌ ನಿರ್ಮಾಣ ಮಾಡಿದ್ದಾರೆ.150 ಎಕರೆಯ ಈ ಜಾಗದಲ್ಲಿ 3 ಭವ್ಯವಾದ ಬಂಗಲೆಗಳನ್ನು ನಿರ್ಮಾಣ ಮಾಡಲಾಗಿದೆ. ಕುಟುಂಬಸ್ಥರು, ಸ್ನೇಹಿತರು ಇಲ್ಲಿಗೆ ಭೇಟಿ ನೀಡಿದರೆ, ವಾಸ ಮಾಡಲೆಂದು 3 ಪ್ರತ್ಯೇಕ ಬಂಗಲೆಗಳನ್ನು ಕಟ್ಟಲಾಗಿದೆ.

More from Filmibeat

English summary
Ketan Kakkad alleged that bodies of film stars are buried at Salman Khan's farmhouse and that even child trafficking takes places there.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X