ಇಷ್ಟು ವರ್ಷವಾದ್ರು ಸಲ್ಮಾನ್ ಮದುವೆ ಆಗಿಲ್ಲ: ಕಾರಣ ಬಿಚ್ಚಿಟ್ಟ ಖಾನ್
ಬಾಲಿವುಡ್ ಮೋಸ್ಟ್ ಎಲಿಜಿಬಲ್ ಬ್ಯಾಚುಲರ್ ಯಾರು ಅಂದ್ರೆ ಸಲ್ಮಾನ್ ಖಾನ್ ಅಂತ ಮೊದಲು ಹೇಳ್ತಾರೆ. ಇಷ್ಟು ವರ್ಷವಾದ್ರೂ ಸಲ್ಮಾನ್ ಖಾನ್ ಯಾಕೆ ಮದುವೆ ಆಗಿಲ್ಲ ಅನ್ನೋದಕ್ಕೆ ಅಸಲಿ ಕಾರಣ ಮಾತ್ರ ಇನ್ನು ಬಹಿರಂಗವಾಗಿಲ್ಲ.
ಈ ಮಧ್ಯೆ ಸಲ್ಲು ಬ್ಯಾಚುಲರ್ ಆಗಿ ಉಳಿಯಲು ಬಲವಾದ ಕಾರಣ ಇದೆ ಎಂಬ ಸುದ್ದಿ ಈಗ ಬಿ ಟೌನ್ ನಗರದಲ್ಲಿ ಹರಿದಾಡುತ್ತಿದೆ. ಕೊನೆಗೂ ಸಲ್ಲು ಯಾಕೆ ಮದುವೆ ಆಗ್ತಿಲ್ಲ ಎನ್ನುವುದನ್ನ ಸ್ವತಃ ಖಾನ್ ಬಿಚ್ಚಿಟ್ಟಿದ್ದಾರೆ.
''ಮದುವೆ ಎಂಬುದು ದೊಡ್ಡ ವಿಷಯವಾಗಿದೆ. ಸಾಮಾನ್ಯವಾಗಿ ವಿವಾಹವಾಗಲು ಲಕ್ಷಗಟ್ಟಲೇ ಮತ್ತು ಕೋಟಿಗಟ್ಟಲೇ ಹಣವನ್ನು ಖರ್ಚು ಮಾಡುತ್ತಾರೆ. ನನಗೆ ಅದು ಸಾಧ್ಯವಿಲ್ಲ. ಅದಕ್ಕಾಗಿಯೇ ನಾನು ಒಬ್ಬಂಟಿಯಾಗಿದ್ದೇನೆ'' ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ ಎಂದು ಹಿಂದಿ ಮಾಧ್ಯಮಗಳು ವರದಿ ಮಾಡಿವೆ.

''ಅನೇಕ ಜನರು ನನ್ನ ಮದುವೆ ಬಗ್ಗೆ ಕಾಳಜಿ ವಹಿಸುತ್ತಿರುವುದು ನನಗೆ ಖುಷಿ ಕೊಟ್ಟಿದೆ. ಆದ್ರೆ, ನನ್ನ ಮದುವೆಯಿಂದ ಅವರಿಗೆ ಆಗುವ ಪ್ರಯೋಜನವಾದರೂ ಏನು ಎಂಬುದು ನನಗೆ ಚಿಂತೆಯಾಗಿದೆ. ಇರದಿಂದ ಏನೂ ಆಗಲ್ಲ. ಬಹುಶಃ ಅದು ಆಗಬಹುದು, ಅಥವಾ ಆಗದೇ ಇರಬಹುದು'' ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ರೋಮ್ ಹುಡುಗಿ ಲೂಲಿಯಾ ವೆಂಟರ್ ಜೊತೆ ಸಲ್ಮಾನ್ ಡೇಟಿಂಗ್ ಮಾಡುತ್ತಿದ್ದು, ಅವರ ಜೊತೆಯಲ್ಲಿ ವಿವಾಹವಾಗುವ ಸಾಧ್ಯತೆ ಎಂದು ಹೇಳಲಾಗುತ್ತಿದೆ. ಇವರಿಬ್ಬರು ಒಟ್ಟಿಗೆ ಓಡಾಡುತ್ತಿದ್ದು, ಪಾರ್ಟಿ, ಪಬ್ ಎಂದು ತಿರುಗಾಡುತ್ತಿರುವ ಫೋಟೋಗಳು ಕೂಡ ಈ ಚರ್ಚೆಗೆ ಕಾರಣವಾಗಿತ್ತು. ಈಗ ಇದೆಲ್ಲ ಬರಿ ಅಂತೆ-ಕಂತೆ ಎಂದು ಸಲ್ಲು ಸ್ಪಷ್ಟಪಡಿಸಿದ್ದಾರೆ.


Click it and Unblock the Notifications











