For Quick Alerts
  ALLOW NOTIFICATIONS  
  For Daily Alerts

  ಸಲ್ಮಾನ್ ಖಾನ್ ಸಹೋದರಿ ಅರ್ಪಿತಾಗೆ ಕೊರೊನಾ ಪಾಸಿಟಿವ್

  |

  ಬಾಲಿವುಡ್ ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಅವರ ಸಹೋದರಿ ಅರ್ಪಿತಾ ಖಾನ್‌ಗೆ ಕೊರೊನಾ ಸೋಂಕು ತಗುಲಿತ್ತು ಎಂಬ ವಿಚಾರ ಬೆಳಕಿಗೆ ಬಂದಿದೆ. ಈ ಕುರಿತು ಖುದ್ದು ಸಲ್ಮಾನ್ ಖಾನ್ ಮಾಧ್ಯಮವೊಂದರ ಜೊತೆ ಮಾತನಾಡಿದ ವೇಳೆ ಬಹಿರಂಗಪಡಿಸಿದ್ದಾರೆ..

  ಅರ್ಪಿತಾಗೆ ಕೊರೊನಾ ಪಾಸಿಟಿವ್ ಬಂದಿತ್ತು. ಆಕೆಗೆ ರೋಗಲಕ್ಷಣಗಳು ಇರಲಿಲ್ಲ. ಈಗ ಸಂಪೂರ್ಣವಾಗಿ ಚೇತರಿಕೆ ಕಂಡಿದ್ದಾರೆ ಎಂದು ಇಂಡಿಯನ್ ಎಕ್ಸ್‌ಪ್ರೆಸ್‌ಗೆ ಸಲ್ಮಾನ್ ಖಾನ್ ಮಾಹಿತಿ ನೀಡಿದ್ದಾರೆ ಎಂದು ವರದಿಯಾಗಿದೆ.

  ಸಲ್ಮಾನ್ ಖಾನ್ ಬಾಡಿಗಾರ್ಡ್ ಶೇರಾ ಹೊರಹಾಕಿದ ಆಸಕ್ತಿಕರ ಸಂಗತಿಸಲ್ಮಾನ್ ಖಾನ್ ಬಾಡಿಗಾರ್ಡ್ ಶೇರಾ ಹೊರಹಾಕಿದ ಆಸಕ್ತಿಕರ ಸಂಗತಿ

  ಇದೀಗ, ಈ ಕುರಿತು ಸ್ವತಃ ಅರ್ಪಿತಾ ಖಾನ್ ತಮ್ಮ ಇನ್ಸ್ಟಾಗ್ರಾಂನಲ್ಲಿ ಸ್ಪಷ್ಟನೆ ನೀಡಿದ್ದಾರೆ. ನನಗೆ ಕೊರೊನಾ ವೈರಸ್ ತಗುಲಿತ್ತು. ದೇವರ ಆಶೀರ್ವಾದದಿಂದ ಗುಣಮುಖ ಆಗಿದ್ದೇನೆ ಎಂದು ಪೋಸ್ಟ್ ಹಾಕಿದ್ದಾರೆ.

  ''ಏಪ್ರಿಲ್ 2021ರ ಆರಂಭದಲ್ಲಿ ನಾನು ಕೋವಿಡ್ -19 ಪರೀಕ್ಷೆಗೆ ಒಳಪಟ್ಟಿದ್ದೆ. ಆ ಸಂದರ್ಭದಲ್ಲಿ ನನಗೆ ಯಾವುದೇ ರೋಗಲಕ್ಷಣಗಳು ಇರಲಿಲ್ಲ. ಎಲ್ಲಾ ಮಾರ್ಗಸೂಚಿಗಳು ಮತ್ತು ಪ್ರೋಟೋಕಾಲ್‌ಗಳನ್ನು ಅನುಸರಿಸಿದ್ದೇನೆ. ದೇವರ ಅನುಗ್ರಹದಿಂದ ಸಂಪೂರ್ಣವಾಗಿ ಚೇತರಿಸಿಕೊಂಡಿದ್ದೇನೆ, ಈಗ ಉತ್ತಮವಾಗಿದ್ದೇನೆ'' ಎಂದು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

  ಸಲ್ಮಾನ್ ಖಾನ್ ಪೋಷಕರಾದ ಸಲೀಮ್ ಮತ್ತು ಸಲ್ಮಾ ಖಾನ್ ಇಬ್ಬರೂ ಕೋವಿಡ್ ಲಸಿಕೆ ಪಡೆದುಕೊಂಡಿದ್ದು, ಆರೋಗ್ಯವಾಗಿದ್ದಾರೆ ಎಂದು ತಿಳಿದು ಬಂದಿದೆ.

  ''ಎರಡನೇ ಅಲೆಯಲ್ಲಿ ಕೋವಿಡ್ ಎನ್ನುವುದು ಬಹಳ ಅಪಾಯಕಾರಿಯಾಗಿ ವರ್ತಿಸುತ್ತಿದೆ. ಕಳೆದ ವರ್ಷ ಬೇರೆ ಯಾರಿಗೋ ವೈರಸ್ ಬಂದಿದೆ ಎಂದು ಕೇಳುತ್ತಿದ್ದೆವು. ಆದರೆ ಈ ಸಲ ನಮ್ಮ ಕುಟುಂಬದಲ್ಲಿ ಕೋವಿಡ್ ಪ್ರಕರಣಗಳಿವೆ. ಕಳೆದ ಬಾರಿ ನಮ್ಮ ಮನೆಯ ಚಾಲಕರು ಕೊರೊನಾಗೆ ತುತ್ತಾಗಿದ್ದರು. ಆದರೆ ಈ ಬಾರಿ ಬಹಳಷ್ಟು ಜನರಿಗೆ ಸೋಂಕು ತಗುಲುತ್ತಿದೆ'' ಎಂದು ಸಲ್ಮಾನ್ ಖಾನ್ ಆತಂಕ ವ್ಯಕ್ತಪಡಿಸಿದ್ದಾರೆ.

  ಇನ್ನು ಸಲ್ಮಾನ್ ಖಾನ್ ನಟನೆಯಲ್ಲಿ ತಯಾರಾಗಿರುವ 'ರಾಧೇ' ಸಿನಿಮಾ ಬಿಡುಗಡೆಗೆ ತರಾಯಾಗಿದೆ. ಈದ್ ಹಬ್ಬದ ಪ್ರಯುಕ್ತ ಮೇ 13 ರಂದು ಸಿನಿಮಾ ರಿಲೀಸ್ ಆಗಬೇಕಿತ್ತು. ಆದರೆ, ಚಿತ್ರಮಂದಿರಗಳು ಬಂದ್ ಆಗಿರುವ ಕಾರಣ ಮುಂದೂಡುವ ಸಾಧ್ಯತೆ ಹೆಚ್ಚಿದೆ.

  Ragini Dwivedi, Corona Vaccination ಹಾಕಿಸಿಕೊಂಡ್ಮೇಲೆ ಏನಾಗುತ್ತೆ?ಎಲ್ಲೆಲ್ಲಿ ಸಿಗುತ್ತೆ ವ್ಯಾಕ್ಸಿನೇಷನ್?
  English summary
  Bollywood superstar Salman Khan’s Sister Arpita Test Corona Positive and she fully recovered.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X