ಬಾಲಿವುಡ್‌ನ ಬ್ರಹ್ಮಚಾರಿ ಈಗ ಹಿರಿಯ ನಾಗರಿಕ ; ಸಲ್ಲು ಸಂಭ್ರಮದಲ್ಲಿ ಭಾಗಿಯಾದ ಧೋನಿ
ಬಾಲಿವುಡ್ ಚಿತ್ರರಂಗದಲ್ಲಿ ಇಂದು ಹಬ್ಬದ ವಾತಾವರಣ ಮನೆ ಮಾಡಿದೆ. ಮುಂಬೈನ ಗಲ್ಲಿ ಗಲ್ಲಿಗಳಲ್ಲಿ ಸಲ್ಲೂ ಭಾಯ್ ಪೋಸ್ಟರ್ ಗಳು ರಾರಾಜಿಸುತ್ತಿವೆ. ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈಗಾಗಲೇ ಹ್ಯಾಶ್ಟ್ಯಾಗ್ ಟ್ರೆಂಡ್ ಶುರುವಾಗಿದೆ.
ಗ್ಯಾಲಕ್ಸಿ ಅಪಾರ್ಟ್ಮೆಂಟ್ ಮುಂದೆ ಜನವೋ ಜನ ಸೇರುತ್ತಿದ್ದಾರೆ. ಸಲ್ಮಾನ್ ಖಾನ್ ಒಂದು ಸಣ್ಣ ಝಲಕ್ ನೀಡಿದರೂ ಸಾಕು ಎಂದು ಫ್ಯಾನ್ಸ್ ಕಾಯುತ್ತಿದ್ದಾರೆ. ಈ ವರ್ಷದ ಆಚರಣೆ ಮಾತ್ರ ಇತಿಹಾಸ ಪುಟ ಸೇರುವುದು ಖಂಡಿತ ಎನ್ನಲಾಗುತ್ತಿದೆ. ಸಿನಿಮಾ ಮಂದಿ ಕೂಡ ಈ ದಿನಕ್ಕಾಗಿ ಕುತೂಹಲದಿಂದ ಕಾದಿದ್ದಾರೆ.

ಈ ವಿಶೇಷ ದಿನದಂದು ಬಾಲಿವುಡ್‌ನ ಸುಲ್ತಾನನಿಗೆ ಶುಭಾಶಯಗಳ ಮಳೆ ಸುರಿಯುತ್ತಿದೆ. ತಡರಾತ್ರಿಯೇ ಸಲ್ಮಾನ್ ಖಾನ್ ಕೇಕ್ ಕತ್ತರಿಸಿ ಸಂಭ್ರಮಿಸಿದ್ದಾರೆ. ಅವರ ಈ ಹೊಸ ಮೈಲಿಗಲ್ಲಿನ ಆಚರಣೆ ಹೇಗಿತ್ತು? ಯಾರೆಲ್ಲಾ ಅತಿಥಿಗಳು ಬಂದಿದ್ದರು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.
ಬಿಗ್ ಸೆಲೆಬ್ರೇಷನ್ ಗೆ ಸಾಕ್ಷಿಯಾದ ಪನ್ವೇಲ್ ಫಾರ್ಮ್ಹೌಸ್...
ಸಲ್ಮಾನ್ ಖಾನ್ ಅವರಿಗೆ ಈ ಬಾರಿ 60ನೇ ವರ್ಷದ ಸಂಭ್ರಮ. ಹಾಗಾಗಿ ಪಾರ್ಟಿ ತುಂಬಾನೇ ಸ್ಪೆಷಲ್ ಆಗಿತ್ತು. ಪನ್ವೇಲ್ ನಲ್ಲಿರುವ ಅವರ ಐಷಾರಾಮಿ ಫಾರ್ಮ್ಹೌಸ್ನಲ್ಲಿ ಈ ಸಂಭ್ರಮ ನಡೆದಿದೆ. ಚಿತ್ರರಂಗದ ಪ್ರಮುಖ ಗಣ್ಯರಿಗೆ ಈಗಾಗಲೇ ಆಮಂತ್ರಣ ಹೋಗಿತ್ತು.
ಬಾಲಿವುಡ್‌ನ ದಿಗ್ಗಜ ನಟರು ಒಂದೇ ಸೂರಿನಡಿ ಸೇರಿದ್ದರು. ಸಲ್ಮಾನ್ ಖಾನ್ ತಮ್ಮ ಆಪ್ತರಿಗಾಗಿ ವಿಶೇಷ ಔತಣಕೂಟ ಏರ್ಪಡಿಸಿದ್ದರು. ಈ ಸಮಾರಂಭದಲ್ಲಿ ಕೇವಲ ಸಿನಿಮಾ ನಟರು ಮಾತ್ರವಲ್ಲದೆ, ಕ್ರೀಡಾ ಕ್ಷೇತ್ರದ ದಿಗ್ಗಜರು ಕೂಡ ಕಾಣಿಸಿಕೊಂಡರು. ಮುಂಬೈನ ತಾರೆಯರೆಲ್ಲಾ ಪನ್ವೇಲ್ ಕಡೆ ಮುಖ ಮಾಡಿದ್ದರು.
ಧೋನಿ ಮತ್ತು ಸಂಜಯ್ ದತ್ ಭರ್ಜರಿ ಎಂಟ್ರಿ...
ಈ ಬಾರಿಯ ಪಾರ್ಟಿಯ ಅತಿದೊಡ್ಡ ಹೈಲೈಟ್ ಎಂದರೆ ಟೀಮ್ ಇಂಡಿಯಾದ ಮಾಜಿ ನಾಯಕ ಎಂ.ಎಸ್. ಧೋನಿ. ಧೋನಿ ಅವರು ತಮ್ಮ ಪತ್ನಿ ಸಾಕ್ಷಿ ಮತ್ತು ಮಗಳು ಜೀವಾ ಜೊತೆಗೆ ಪಾರ್ಟಿಗೆ ಆಗಮಿಸಿದರು. ಸಲ್ಮಾನ್ ಮತ್ತು ಧೋನಿ ನಡುವಿನ ಸ್ನೇಹ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

ಸಲ್ಮಾನ್ ಅವರ ಆಪ್ತ ಗೆಳೆಯ ಸಂಜಯ್ ದತ್ ಕೂಡ ಈ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಸಂಜು ಬಾಬಾ ಅವರ ಮಾಸ್ ಎಂಟ್ರಿ ಪಾರ್ಟಿಗೆ ಹೊಸ ಕಳೆ ನೀಡಿತ್ತು. ಇವರಿಬ್ಬರ ಜೊತೆಗೆ ಶಾರುಖ್ ಖಾನ್, ಕತ್ರಿನಾ ಕೈಫ್ ಸೇರಿದಂತೆ ಬಾಲಿವುಡ್‌ನ ಎ-ಲಿಸ್ಟ್ ತಾರೆಯರು ಹಾಜರಿದ್ದರು. ನಟಿ ಟಬು ಮತ್ತು ಸಂಗೀತಾ ಬಿಜಲಾನಿ ಕೂಡ ಪಾರ್ಟಿಯಲ್ಲಿ ಮಿಂಚಿದರು.
ಹೊಸ ಲುಕ್ ನಲ್ಲಿ ಮಿಂಚಿದ ಸಲ್ಲು ಭಾಯ್...
ಸಲ್ಮಾನ್ ಖಾನ್ ಈ ಬಾರಿ ಕ್ಲೀನ್ ಶೇವ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಈ ಸ್ಟೈಲಿಶ್ ಅವತಾರ ಕಂಡು ಫ್ಯಾನ್ಸ್ ಶಾಕ್ ಆಗಿದ್ದಾರೆ. 60ರ ವಯಸ್ಸಿನಲ್ಲೂ ಸಲ್ಮಾನ್ ಬಹಳ ಯಂಗ್ ಆಗಿ ಕಾಣುತ್ತಿದ್ದಾರೆ. ಪಾರ್ಟಿಯ ನಡುವೆಯೇ ಅವರು ಫಾರ್ಮ್ಹೌಸ್ ಹೊರಬಂದು ಮಾಧ್ಯಮದವರ ಜೊತೆ ಕೇಕ್ ಕತ್ತರಿಸಿದರು.
ತಮ್ಮ ಕುಟುಂಬದ ಜೊತೆಗೆ ಸಲ್ಲು ಭಾಯ್ ಸಖತ್ ಎಂಜಾಯ್ ಮಾಡಿದ್ದಾರೆ. ತಂದೆ ಸಲೀಂ ಖಾನ್ ಅವರ ಕೈಹಿಡಿದು ಸಲ್ಮಾನ್ ಕೇಕ್ ಕತ್ತರಿಸಿದ್ದು ವಿಶೇಷವಾಗಿತ್ತು. ಅವರ ಸಹೋದರರಾದ ಅರ್ಬಾಜ್ ಖಾನ್ ಮತ್ತು ಸೊಹೈಲ್ ಖಾನ್ ಪಾರ್ಟಿಯ ಉಸ್ತುವಾರಿ ನೋಡಿಕೊಂಡಿದ್ದರು. ಪಾರ್ಟಿಯಲ್ಲಿ ಭರ್ಜರಿ ಡ್ಯಾನ್ಸ್ ಮತ್ತು ಹಾಡುಗಳ ಹಬ್ಬವೇ ಇತ್ತು.
ಅಭಿಮಾನಿಗಳಿಗೆ ಬಿಗ್ ಸರ್ಪ್ರೈಸ್
ಸಲ್ಮಾನ್ ಖಾನ್ ಬರ್ತ್ಡೇ ಎಂದರೆ ಅಭಿಮಾನಿಗಳಿಗೆ ಯಾವಾಗಲೂ ದೊಡ್ಡ ಸುದ್ದಿ ಸಿಗುತ್ತದೆ. ಈ ಬಾರಿ ಅವರ ಮುಂದಿನ ಚಿತ್ರ 'ಬ್ಯಾಟಲ್ ಆಫ್ ಗಲ್ವಾನ್' ಚಿತ್ರದ ಟೀಸರ್ ನ ಉಡುಗೊರೆಯಾಗಿ ಅಭಿಮಾನಿಗಳಿಗೆ ನೀಡಲಾಗಿದೆ.
ಸದ್ಯ 'ಬ್ಯಾಟಲ್ ಆಫ್ ಗಲ್ವಾನ್' ಸಿನಿಮಾದಲ್ಲಿ ಸಲ್ಮಾನ್ ಬ್ಯುಸಿಯಾಗಿದ್ದು ಮುಂದಿನ ವರ್ಷ ಏಪ್ರಿಲ್ ನಲ್ಲಿ ಈ ಚಿತ್ರ ತೆರೆಗೆ ಬರಲಿದೆ.
ಒಟ್ಟಿನಲ್ಲಿ ಸಲ್ಮಾನ್ ಖಾನ್ ಅವರ 60ನೇ ಹುಟ್ಟುಹಬ್ಬ ಭರ್ಜರಿಯಾಗಿ ನಡೆದಿದೆ. ತಾರೆಯರ ಸಂಭ್ರಮ ಪಾರ್ಟಿಗೆ ಮೆರುಗು ನೀಡಿತ್ತು. ಈ ಸಂಭ್ರಮದ ವಿಡಿಯೋಗಳು ಸದ್ಯ ಇಂಟರ್ನೆಟ್ ನಲ್ಲಿ ಹಲ್ ಚಲ್ ಸೃಷ್ಟಿಸುತ್ತಿವೆ.


Click it and Unblock the Notifications











