twitter
    For Quick Alerts
    ALLOW NOTIFICATIONS  
    For Daily Alerts

    ಯಾರೇನೇ ಅಂದರೂ ಸಲ್ಲೂ ಕಿಕ್ ಗಳಿಕೆ ಬೊಂಬಾಟ್

    By * ಜೇಮ್ಸ್ ಮಾರ್ಟಿನ್
    |

    ಸಲ್ಮಾನ್ ಖಾನ್ ಅವರು ನಾಯಕರಾಗಿರುವ ಕಿಕ್ ಚಿತ್ರಕ್ಕೆ ವಿಮರ್ಶಕರಿಂದ ಮಿಶ್ರ ಪ್ರತಿಕ್ರಿಯೆ ಬಂದಿದೆ. ಭಾರತದ ದಕ್ಷಿಣ ಭಾಗದಲ್ಲಿ ತೆಲುಗು ಆವೃತ್ತಿ ನೋಡಿದವರು ಸಲ್ಲೂ ಕಿಕ್ ನಲ್ಲಿ ಅಂಥ ವಿಶೇಷವೇನಿಲ್ಲ ಎಂದಿದ್ದಾರೆ. ಅದರೆ, ಉತ್ತರ ಭಾರತದ ರಂಜಾನ್ ಕೊನೆ ದಿನಗಳ ಲಾಭ ಪಡೆದುಕೊಂಡಿರುವ ಕಿಕ್ ಚಿತ್ರ ಬಾಕ್ಸಾಫೀಸ್ ನಲ್ಲಿ ತನ್ನ ಕಿಚ್ಚು ಹಬ್ಬಿಸುತ್ತಿದೆ.

    ಇಲ್ಲಿ ಲಾಜಿಕ್ ಇಲ್ಲ ಬರೀ ಮ್ಯಾಜಿಕ್. ನೈಜತೆ ಹುಡುಕದಿದ್ದರೆ ಚಿತ್ರ ಪಕ್ಕಾ ಪೈಸಾ ವಸೂಲ್, ಸಲ್ಮಾನ್ ಅಭಿಮಾನಿಗಳಿಗೆ ಹಬ್ಬದ ಕೊಡುಗೆ ಎಂಬ ಮಾತುಗಳು ವಿಮರ್ಶಕರಿಂದ ಕೇಳಿ ಬಂದಿತ್ತು.

    ಸಲ್ಮಾನ್ ಖಾನ್ ಹೊಸ ಸ್ಟೈಲ್,ಸಾಹಸ ದೃಶ್ಯ, ಹಾಡುಗಳು, ಡ್ಯಾನ್ಸ್ ಜಾಕ್ವಲಿನ್ ನಟನೆ ರಹಿತ ಮಾದಕತೆ, ರಣದೀಪ್ ಹೂಡಾ ಬಿಗಿ ಹಿಡಿತದ ನಟನೆ, ನವಾಜುದ್ದೀನ್ ಸಿದ್ದಿಕಿ ಪಂಚ್ ಡೈಲಾಗ್ ಎಲ್ಲವೂ ಉತ್ತಮ ಮಸಾಲೆ ಭರಿತ ಚಿತ್ರವನ್ನಾಗಿಸಿದೆ. [ವಿಮರ್ಶೆ: ಸಲ್ಮಾನ್ ಖಾನ್ 'ಕಿಕ್' ಪೈಸಾ ವಸೂಲ್]

    ಆದರೆ, ಚಿತ್ರಕಥೆ ಕಿಕ್ ನೀಡಿ, ನಿರೂಪಿಸುವಲ್ಲಿ ಸಾಜಿದ್ ಎಡವಿದರೂ ಮನರಂಜನೆಗೇನೂ ಮೋಸವಿರದ ಕಾರಣ ಬಿಡುಗಡೆಯಾದ ದಿನವೇ 26.4 ಕೋಟಿ ರು ಗಳಿಕೆ ಪಡೆದುಕೊಂಡಿತ್ತು. 30 ಕೋಟಿ ರು ನಿರೀಕ್ಷೆ ಇದ್ದರೂ ಈದ್ ಸೀಸನ್ ನಲ್ಲಿ ಇನ್ನಷ್ಟು ಗಳಿಕೆ ಸಾಧ್ಯತೆ ಬಗ್ಗೆ ಮಾರುಕಟ್ಟೆ ವಿಶ್ಲೇಷಕ ತರಣ್ ಆದರ್ಶ್ ಹೇಳಿದ್ದಾರೆ. ಕಿಕ್ ಗಳಿಕೆಯತ್ತ ಒಂದು ಸಣ್ಣ ನೋಟ ಮುಂದಿದೆ.

    ಮೊದಲ ಮೂರು ದಿನಗಳಲ್ಲೇ ಬಂಪರ್

    ಮೊದಲ ಮೂರು ದಿನಗಳಲ್ಲೇ ಬಂಪರ್

    ಸಲ್ಮಾನ್ ಖಾನ್ ಕಿಕ್ ಚಿತ್ರ ಮೊದಲ ದಿನ 26.50 ಕೋಟಿ ರು, ಎರಡನೇ ದಿನ 27.15 ಕೋಟಿ ರು ಹಾಗೂ ಭಾನುವಾರ 30.18 ಕೋಟಿ ರು ಗಳಿಸುವ ಮೂಲಕ ಮೂರು ದಿನಗಳಲ್ಲೇ 88.83 ಕೋಟಿ ರು ಭಾರತದ ವಿವಿಧ ಚಿತ್ರ ಮಂದಿರಗಳಿಂದ ಗಳಿಸಿದೆ.

    ತರಣ್ ಆದರ್ಶ್ ಮಾರುಕಟ್ಟೆ ಗಳಿಕೆ ಬಗ್ಗೆ

    ತರಣ್ ಆದರ್ಶ್ ಮಾರುಕಟ್ಟೆ ಗಳಿಕೆ ಬಗ್ಗೆ ಟ್ವೀಟ್ ಮಾಡಿದ್ದಾರೆ

    ಎಕ್ ಥಾ ಟೈಗರ್ ದಾಖಲೆ ಮುರಿಯಲಿದೆ

    ಎಕ್ ಥಾ ಟೈಗರ್ ದಾಖಲೆ ಮುರಿಯಲಿದೆ

    ಎಕ್ ಥಾ ಟೈಗರ್ ದಾಖಲೆ ಮುರಿಯಲಿದೆ ಎಂಬ ಮಾತುಗಳು ಈಗಾಗಲೇ ಕೇಳಿ ಬಂದಿದೆ. ಏಕ್ ಥಾ ಟೈಗರ್ ನಿವ್ವಳ 198.78 ಕೋಟಿ ರು ಹಾಗೂ ಒಟ್ಟಾರೆ 310 ಕೋಟಿ ರು ಗಳಿಸಿತ್ತು. ಈಗ ಕಿಕ್ ವೇಗ ನೋಡಿದರೆ ಸುಲಭದಲ್ಲಿ 100 ಕೋಟಿ ರು ಕ್ಲಬ್ ಸೇರಲಿದೆ. ನಂತರ 200 ಹಾಗೂ 300 ಕೋಟಿ ರು ದಾಟಿದರೂ ಅಚ್ಚರಿಯೇನಿಲ್ಲ.

    ವಿದೇಶಗಳಲ್ಲಿನ ಗಳಿಕೆ ಬಗ್ಗೆ ತರಣ್ ಆದರ್ಶ್

    ಯುಎಸ್ಎ ಕೆನಡಾ ಭಾಗಗಳಲ್ಲಿ ಎರಡು ದಿನಗಳಲ್ಲಿ 4.50 ಕೋಟಿ ರು ಅಂದಾಜು ಗಳಿಕೆ ಮೂಲಕ ಒಳ್ಳೆ ಓಪನಿಂಗ್ ಪಡೆದುಕೊಂಡಿದೆ.

    ಸರಿ ಸುಮಾರು 4400 ಚಿತ್ರಮಂದಿರಗಳಲ್ಲಿ ಕಿಕ್

    ಸರಿ ಸುಮಾರು 4400 ಚಿತ್ರಮಂದಿರಗಳಲ್ಲಿ ಕಿಕ್

    ಆಕ್ಷನ್, ರೊಮ್ಯಾಂಟಿಕ್ ದೃಶ್ಯ, ಹಾಡು ಕುಣಿತಗಳನ್ನ ಒಳಗೊಂಡ ಕಿಕ್ ವಿಶ್ವದೆಲ್ಲೆಡೆ ಸರಿ ಸುಮಾರು 4400 ಚಿತ್ರಮಂದಿರಗಳಲ್ಲಿ ಕಿಕ್ ತೆರೆ ಕಂಡಿದೆ. ಸಲ್ಲೂ ಹಾಗೂ ಜಾಕ್ವಲೀನ್ ಅಲ್ಲದೆ ರಣದೀಪ್ ಹೂಡಾ ಮತ್ತು ನವಾಜುದ್ದೀನ್ ಸಿದ್ಧಿಕಿ ಪಾತ್ರಗಳು ಪ್ರೇಕ್ಷಕರಿಗೆ ಇಷ್ಟವಾಗಿರುವುದು ಚಿತ್ರದ ಗಳಿಕೆ ಹೆಚ್ಚಲು ಕಾರಣವಾಗಿದೆ.

    ಮಧ್ಯಪ್ರಾಚ್ಯ ದೇಶಗಳಲ್ಲಿನ ಗಳಿಕೆ ಬಗ್ಗೆ

    ಮಧ್ಯಪ್ರಾಚ್ಯ ದೇಶಗಳಲ್ಲಿನ ಗಳಿಕೆ ಬಗ್ಗೆ ತರಣ್ ಟ್ವೀಟ್ ಮಾಡಿ ಯುಎಇನಲ್ಲಿ 1.63 ಕೋಟಿ ಗಳಿಸಿದೆ ಎಂದಿದ್ದಾರೆ.

    English summary
    Salman Khan's Kick is zooming at the Indian Box Office with its fast flowing collection. Though the movie released on a working day it managed to rake in a moolah of Rs 26.4 crores on the very first day.
    Monday, July 28, 2014, 12:37
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X