ನಿರ್ದೇಶಕ ಸಾಜಿದ್ ಖಾನ್ 'ಕಾಮಪುರಾಣ' ಬಿಚ್ಚಿಟ್ಟ ನಟಿ ಮತ್ತು ಪತ್ರಕರ್ತೆ

ಬಾಲಿವುಡ್ ನ ಮತ್ತೊಬ್ಬ ನಿರ್ದೇಶಕನ ಕಾಮಪುರಾಣ ಬಯಲಾಗಿದೆ. ನಾನಾ ಪಾಟೇಕರ್, ಸುಭಾಷ್ ಘಾಯ್, ಅಲೋಕ್ ನಾಥ್ ಬಳಿಕ ಸ್ಟಾರ್ ಡೈರೆಕ್ಟರ್ ಸಾಜಿದ್ ಖಾನ್ ಸರದಿ.

ನಿರ್ದೇಶಕ ಸಾಜಿದ್ ಖಾನ್ ಅವರ ಕರಾಳ ಮುಖವನ್ನ ನಟಿ ಕಮ್ ಮಾಡೆಲ್ ಸಲೋನಿ ಚೋಪ್ರಾ ಹಸಿಹಸಿಯಾಗಿ ಬಹಿರಂಗಪಡಿಸಿದ್ದಾರೆ. ಈಕೆಯ ಆರೋಪದ ಬೆನ್ನಲ್ಲೆ ಪತ್ರಕರ್ತೆಯೊಬ್ಬರು ಕೂಡ ಸಾಜಿದ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದಾರೆ.

ಸಲೋನಿ ಚೋಪ್ರಾ ಹೇಳಿರುವ ಘಟನೆಯನ್ನ ಬರೆಯಲು ಅಸಹ್ಯ ಹುಟ್ಟಿಸುವಂತಿದೆ. ಆ ಪದಗಳನ್ನ ಇಲ್ಲಿ ಬಳಸಲು ಕಷ್ಟಸಾಧ್ಯವಾಗಿದೆ. ದೈಹಿಕವಾಗಿ ಮಾನಸಿಕವಾಗಿ ಹೇಗೆ ದೌರ್ಜನ್ಯವೆಸಗಿದರು ಎಂದು ಸಲೋನಿ ಬಯಲು ಮಾಡಿದ್ದಾರೆ. ಸಲೋನಿ ಹೇಳಿರುವ ಪ್ರಕಾರ ನೋಡುವುದಾದರೇ....ಮುಂದೆ ಓದಿ....

ಮಧ್ಯರಾತ್ರಿ ನನ್ನನ್ನು ಕರೆಯುತ್ತಿದ್ದ

ಮಧ್ಯರಾತ್ರಿ ನನ್ನನ್ನು ಕರೆಯುತ್ತಿದ್ದ

2011ರಲ್ಲಿ ಸಾಜಿದ್ ಖಾನ್ ಬಳಿ ಸಲೋನಿ ಚೋಪ್ರಾ ಸಹಾಯಕಿ ನಿರ್ದೇಶಕಿಯಾಗಿ ಸೇರಿಕೊಂಡಿದ್ದರಂತೆ. ಅದು ನನ್ನ ಜೀವನದಲ್ಲಿ ಅತಿ ದುರಂತದ ದಿನಗಳು. ನನ್ನ ಮಾನಸಿಕವಾಗಿ, ದೈಹಿಕವಾಗಿ ಹಿಂಸೆ ನೀಡಿದ್ದಾರೆ. ಮಧ್ಯರಾತ್ರಿ ನನ್ನನ್ನು ಕರೆಸಿಕೊಳ್ಳುತ್ತಿದ್ದರು. ಯಾವ ಕೆಲಸಕ್ಕಾಗಿಯೋ ಅಲ್ಲಾ. ನನ್ನ ಬಿಕಿನಿ ಫೋಟೋ ತೆಗೆಯಲು ಎಂದು ಸಾಜಿದ್ ಖಾನ್ ವ್ಯಕ್ತಿತ್ವ ಬಿಚ್ಚಿಟ್ಟಿದ್ದಾರೆ.

ನೀನು ತುಂಬಾ ಸೆಕ್ಸಿಯಾಗಿ ಕಾಣ್ತಿಯಾ

ನೀನು ತುಂಬಾ ಸೆಕ್ಸಿಯಾಗಿ ಕಾಣ್ತಿಯಾ

ನೀನು ನಟಿಯಾಗಬೇಕು ಎಂದುಕೊಂಡಿದ್ದಿಯಾ ಅಲ್ವಾ, ನೀನು ಹೇಗೆ ಕಾಣ್ತಿಯಾ ಎಂದು ನಾನು ನೋಡಬೇಕು. ನೀನು ತುಂಬಾ ಸೆಕ್ಸಿಯಾಗಿ ಕಾಣ್ತಿಯಾ. ನೀನು ಹೇಗೆ ಆಕ್ಟರ್ ಆಗಬೇಕೆಂದುಕೊಂಡಿದ್ದಿಯಾ ಎಂದು ಮೈಮೇಲೆ ಕೈಹಾಕಿ ಮಾತನಾಡಿಸುತ್ತಿದ್ದರು. ಅನೇಕ ಬಾರಿ ಅದು ಅತಿರೇಕವಾಗಿದ್ದು ಇದೇ. ಆದ್ರೆ ನನ್ನ ಕರಿಯರ್ ಗೋಸ್ಕರ ನಾನು ಸುಮ್ಮನಿರಬೇಕಾಗಿತ್ತು.

ನರಕ ತೋರಿಸಿದ್ದ ನಿರ್ದೇಶಕ

ನರಕ ತೋರಿಸಿದ್ದ ನಿರ್ದೇಶಕ

''ನನ್ನ ಎದುರುಗಡೆ ಆತನ ಪ್ರೇಯಸಿಯ ಜೊತೆ ತುಂಬಾ ಕೀಳಾಗಿ ನಡೆದುಕೊಳ್ಳುತ್ತಿದ್ದ. ಆಕೆಯ ಜೊತೆ ಕಳೆದ ದಿನಗಳನ್ನ, ಆಕೆಯ ಜೊತೆಗಿನ ಲೈಂಗಿಕ ಜೀವನದ ಬಗ್ಗೆ ಹೇಳುತ್ತಿದ್ದ. ಮಾಡಬಾರದ ಕೆಲಸವನ್ನ ನನ್ನ ಬಳಿ ಮಾಡಿಸಿ ನರಕ ತೋರಿಸಿದ್ದ'' ಎಂದು ಸಲೋನಿ ಹೇಳಿದ್ದಾರೆ

ನಾನು ಬೇಕಾಗಿತ್ತು ಅವನಿಗೆ

ನಾನು ಬೇಕಾಗಿತ್ತು ಅವನಿಗೆ

''ಪ್ರತಿರಾತ್ರಿ ಆತನ ಮನೆಗೆ ಬಾ ಎಂದು ಪೀಡಿಸುತ್ತಿದ್ದ. ಕೊನೆಗೆ ನನ್ನಿಂದ ಏನು ಬೇಕು ನಿನಗೆ, ನನ್ನ ಬಳಿ ಏನು ನಿರೀಕ್ಷೆ ಮಾಡ್ತಿದ್ದೀಯಾ ಎಂದು ಕೇಳಿದೆ. ಅದಕ್ಕೆ ಅವನು, ನಿನ್ನ ಜೊತೆ ಇರಬೇಕು, ನೀನು ನನ್ನ ಜೊತೆ ಇರು ಎಂದ. ಹಲವು ಬಾರಿ ನನ್ನನ್ನು ಮನೆಗೆ ಕರಿಸಿ ಬೆದರಿಕೆ ಹಾಕುತ್ತಿದ್ದ. ನಿನ್ನ ಅಂತ್ಯ ನೋಡುತ್ತೇನೆ ಎನ್ನುತ್ತಿದ್ದ. ನನ್ನ ಬಳಿ ಮಾಡಬಾರದ ಕೆಲಸಗಳನ್ನ ಮಾಡಿಸಿದ್ದಾನೆ'' ಎಂದು ಸಲೋನಿ ಹೇಳಿಕೊಂಡಿದ್ದಾರೆ.

ನನ್ನ ಆಸೆ ಈಡೇರಿಸು ಎಂದು ಪೀಡಿಸುತ್ತಿದ್ದ

ನನ್ನ ಆಸೆ ಈಡೇರಿಸು ಎಂದು ಪೀಡಿಸುತ್ತಿದ್ದ

''ಒಂದು ದಿನ ಮನೆಗೆ ಕರೆದು ನನ್ನ ಕೋರಿಕೆ ಈಡೇರಿಸು ಎಂದ. ಅದಕ್ಕೆ ನಿನ್ನ ಮುಖವಾಡ ಬಯಲು ಮಾಡುತ್ತೇನೆ ಎಂದು ರೇಗಿದೆ. ಅದಕ್ಕೆ ಅವನು ಶೂಟ್ ಮಾಡಿ ಸಾಯಿಸ್ತೀನಿ, ನಿನಗೆ ಜೀವನವೇ ಇಲ್ಲ ಎನ್ನುವಂತೆ ಮಾಡುತ್ತೇನೆ'' ಎಂದು ಬೆದರಿಕೆ ಹಾಕಿದ್ದ

ಪತ್ರಕರ್ತೆ ಬಳಿಯೂ ಕೆಟ್ಟದಾಗಿ ನಡೆದುಕೊಂಡಿದ್ದ

ಒಮ್ಮೆ ಸಾಜಿದ್ ಖಾನ್ ಸಂದರ್ಶನ ಮಾಡಲು ಅವರ ಮನೆಗೆ ಹೋಗಿದ್ದ ಪತ್ರಕರ್ತೆಯ ಬಳಿ ಕೂಡ ಕೆಟ್ಟದಾಗಿ ನಡೆದುಕೊಂಡಿದ್ದರ ಬಗ್ಗೆ ಸ್ವತಃ ಪತ್ರಕರ್ತೆಯೇ ಹೇಳಿಕೊಂಡಿದ್ದಾರೆ.

More from Filmibeat

English summary
Model-actor Saloni Chopra also accused Khan of sexual harassment in 2011 when she was working as his assistant director. Chopra recounted multiple instances of sexual harassment.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X