For Quick Alerts
  ALLOW NOTIFICATIONS  
  For Daily Alerts

  'ಗೂಗ್ಲಿ' ಸುಂದರಿಗೆ ಪ್ರೀತಿಯ ಶುಭಾಶಯ ತಿಳಿಸಿದ ನಟಿ ಸಮಂತಾ

  |

  ಗೂಗ್ಲಿ ಸಿನಿಮಾದ ಮೂಲಕ ಕನ್ನಡ ಸಿನಿಮಾಪ್ರಿಯರ ಮನಗೆದ್ದ ನಟಿ ಕೃತಿ ಕರಬಂಧಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಮುಂಬೈ ಮೂಲದ ನಟಿ ಕೃತಿ ಕರಬಂಧ ಕನ್ನಡ ಸಿನಿಮಾಗಳ ಜೊತೆಗೆ ತೆಲುಗು ಮತ್ತು ತಮಿಳು ಸಿನಿಮಾಗಳಲ್ಲೂ ನಟಿಸಿದ್ದಾರೆ. ಹಿಂದಿ ಮತ್ತು ದಕ್ಷಿಣ ಭಾರತೀಯ ಸಿನಿಮಾರಂಗದಲ್ಲಿ ಖ್ಯಾತಿಗಳಿಸಿರುವ ನಟಿ ಕೃತಿಗೆ ಅಭಿಮಾನಿಗಳು ಮತ್ತು ಸ್ನೇಹಿತರಿಂದ ಹುಟ್ಟುಹಬ್ಬ ಶುಭಾಶಯ ಹರಿದುಬರುತ್ತಿದೆ.

  ಅಭಿಮಾನಿಗಳು ಮಾತ್ರವಲ್ಲದೆ ಚಿತ್ರರಂಗದ ಗಣ್ಯರು ಸಹ ವಿಶ್ ಮಾಡುತ್ತಿದ್ದಾರೆ. ವಿಶೇಷ ಎಂದರೆ ತೆಲುಗು ನಟಿ ಸಮಂತಾ ಅಕ್ಕಿನೇನಿ ಕೃತಿ ಹುಟ್ಟುಹಬ್ಬಕ್ಕೆ ಪ್ರೀತಿಯ ಸಂದೇಶ ರವಾನಿಸಿದ್ದಾರೆ. ಕೃತಿ ಕರಬಂಧ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ 'ಹುಟ್ಟುಹಬ್ಬದ ಶುಭಾಶಯಗಳು ಗಾರ್ಜಿಯಸ್' ಬರೆದುಕೊಂಡು ಹಾರ್ಟ್ ಇಮೋಜಿ ಹಾಕಿದ್ದಾರೆ.

  'ಆತ ಇನ್ನು ಬಚ್ಚ' ಇಷ್ಟು ಬೇಗ ಮದುವೆ ಆಗಲ್ಲ ಎಂದ 'ಗೂಗ್ಲಿ' ನಾಯಕಿ ಕೃತಿ'ಆತ ಇನ್ನು ಬಚ್ಚ' ಇಷ್ಟು ಬೇಗ ಮದುವೆ ಆಗಲ್ಲ ಎಂದ 'ಗೂಗ್ಲಿ' ನಾಯಕಿ ಕೃತಿ

  ಅಂದ್ಹಾಗೆ ಕೃತಿ ಕರಬಂಧ ಮೊದಲು ಬಣ್ಣಹಚ್ಚಿದ್ದು ತೆಲುಗು ಸಿನಿಮಾದಲ್ಲಿ. ಬೋನಿ ಸಿನಿಮಾ ಮೂಲಕ ಕೃತಿ ಬಣ್ಣದ ಲೋಕದ ಪಯಣ ಪ್ರಾರಂಭಿಸಿದ್ದರು. ವಿಶೇಷ ಎಂದರೆ ಈ ಸಿನಿಮಾದಲ್ಲಿ ನಟಿ ಸಮಂತಾ ಕೂಡ ಪ್ರಮುಖ ಪಾತ್ರದಲ್ಲಿ ನಟಿಸಿದ್ದರು. ಮೊದಲ ಸಿನಿಮಾದಲ್ಲೇ ಸಮಂತಾ ಜೊತೆ ತೆರೆಹಂಚಿಕೊಂಡಿದ್ದಾರೆ. ಅಲ್ಲಿಂದ ಇಬ್ಬರು ಉತ್ತಮ ಸ್ನೇಹಿತರು.

  ಅದೇ ಸ್ನೇಹ ಬಾಂಧವ್ಯವನ್ನು ಹಾಗೆ ಮುಂದುವರೆಸಿಕೊಂಡು ಬಂದಿದ್ದಾರೆ. ಕೃತಿ ಮೊದಲ ತೆಲುಗು ಸಿನಿಮಾ ನಿರೀಕ್ಷೆಯ ಸಕ್ಸಸ್ ಕಾಣಲಿಲ್ಲ. ಬಳಿಕ ಕೃತಿ ಕನ್ನಡ ಸಿನಿಮಾರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಚಿರು ಸಿನಿಮಾ ಮೂಲಕ ಕನ್ನಡ ಪ್ರೇಕ್ಷಕರ ಮುಂದೆ ಬಂದಿದ್ದಾರೆ. ಕನ್ನಡದಲ್ಲಿ ಕೃತಿ ದೊಡ್ಡ ಮಟ್ಟದ ಯಶಸ್ಸು ಗಳಿಸಿದ್ದಾರೆ. ಗೂಗ್ಲಿ ಸಿನಿಮಾ ಬಳಿಕ ಕೃತಿ ಬೇಡಿಕೆಯ ನಟಿಯಾಗಿ ಹೊರಹೊಮ್ಮಿದ್ದಾರೆ.

  ಮುನಿರತ್ನ ಬೆಂಬಲಕ್ಕೆ ಅಣ್ಣ ದರ್ಶನ್ ಜೊತೆಗೆ ಬಂದ ಅಮೂಲ್ಯ | Darshan | Amulya | Munirathna

  ಕನ್ನಡ ಸಿನಿಮಾಗಳ ಸಕ್ಸಸ್ ಬಳಿಕ ಕೃತಿ ಹಿಂದಿ ಸಿನಿಮಾರಂಗದ ಕಡೆ ಮುಖಮಾಡಿದ್ದಾರೆ. ಸದ್ಯ ಕೃತಿ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಹಿಂದಿಯಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಕೃತಿ ನಟಿಸುತ್ತಿದ್ದಾರೆ. ಇತ್ತೀಚಿಗೆ ಕೃತಿ ಮದುವೆ ವಿಚಾರವಾಗಿ ಸುದ್ದಿಯಲ್ಲಿದ್ದರು. ಬಾಲಿವುಡ್ ನಟ ಪುಲ್ಕಿತ್ ಸಾಮ್ರಾಟ್ ಜೊತೆ ಕೃತಿ ಡೇಟಿಂಗ್ ನಲ್ಲಿದ್ದಾರೆ. ಲಾಕ್ ಡೌನ್ ಸಮಯದಲ್ಲಿ ಇಬ್ಬರು ಒಟ್ಟಿಗೆ ಸಮಯ ಕಳೆದಿದ್ದಾರೆ. ಸದ್ಯದಲ್ಲೇ ಮದುವೆಯಾಗುವುದಾಗಿ ಹೇಳಿದ್ದಾರೆ.

  English summary
  Googly fame Actress Kriti Kharbanda celebrating her birthday today. Samantha Akkineni wished Kriti Kharbanda on her birthday with a photo.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X