ಸೋಲಿಲ್ಲದ ಸಮಂತಾ: ಬಾಲಿವುಡ್‌ನಿಂದ ಬಂತು ಬಂಪರ್ ಆಫರ್!

ಸದ್ಯ ಬಾಲಿವುಡ್‌ನಲ್ಲಿ ಅತಿ ಹೆಚ್ಚಾಗಿ ಸದ್ದು ಮಾಡುತ್ತಿರುವ ಹೆಸರು ಅಂದರೆ ಅದು ನಟಿ ಸಮಂತಾ ಅವರದ್ದು. ಪತಿಯಿಂದ ವಿಚ್ಛೇದನ ಪಡೆದು ಸಮಂತಾ ದೂರವಾದ ಮೇಲೆ ಆಕೆ ಏನು ಮಾಡುತ್ತಾಳೆ, ಯಾವ ಸಿನಿಮಾಗಳಲ್ಲಿ ಅಭಿನಯಿಸುತ್ತಾಳೆ ಎನ್ನುವ ಬಗ್ಗೆಯೇ ಹೆಚ್ಚಿನ ಮಾಹಿತಿ ಹರಿದಾಡುತ್ತಿದೆ. ಸಮಂತಾ ಇನ್ನೇನು ಬಣ್ಣದ ಬದುಕಿನಿಂದ ದೂರಾದರು ಎನ್ನವಷ್ಟರಲ್ಲೇ, ಸಮಂತಾ ಸಿಹಿ ಸುದ್ದಿಗಳನ್ನು ನೀಡುತ್ತಿದ್ದಾರೆ.

ನಟಿ ಸಮಂತಾ ಮದುವೆ ಬಳಿಕ ಸಿನಿಮಾಗಳಿಂದ ಕೊಂಚ ಅಂತರ ಕಾಯ್ದುಕೊಂಡಂತೆ ಕಾಣುತ್ತಿತ್ತು. ಆದರೆ ವಿಚ್ಚೇದನದ ಬಳಿಕ ಸಮಂತಾ ಸಾಲು ಸಾಲು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಇತ್ತೀಚೆಗೆ ಸಮಂತಾಗೆ ಬೇಡಿಕೆ ಕೂಡ ಹೆಚ್ಚಾಗಿದೆ. ಸಮಂತಾ ಕೂಡ ವಿಭಿನ್ನ ಪಾತ್ರಗಳು ಮಾಡಲು ಗ್ರೀನ್‌ ಸಿಗ್ನಲ್ ನೀಡುತ್ತಿದ್ದಾರೆ.

ಸಮಂತಾಗೆ ಸೌತ್‌ನಲ್ಲಿ ಮಾತ್ರವಲ್ಲ ಬಾಲಿವುಡ್‌ನಲ್ಲೂ ಕೂಡ ಬೇಡಿಕೆ ಸಿಕ್ಕಾಪಟ್ಟೆ ಹೆಚ್ಚಾಗಿದೆ. ಸಮಂತಾ ಅವರಿಗೆ ಬಾಲಿವುಡ್‌ನಿಂದ ದೊಡ್ಡ, ದೊಡ್ಡ ಆಫರ್‌ಗಳು ಬರುತ್ತಿವೆ. ಈಗ ಮತ್ತೊಂದು ದೊಡ್ಡ ಆಫರ್‌ ಸಮಂತಾಳನ್ನು ಹುಡುಕಿಕೊಂಡು ಬಂದಿದೆ.

ಯಶ್ ರಾಜ್‌ ಫಿಲ್ಮ್ಸ್ ವತಿಯಿಂದ ಸಮಂತಾಗೆ ದೊಡ್ಡ ಆಫರ್!

ಯಶ್ ರಾಜ್‌ ಫಿಲ್ಮ್ಸ್ ವತಿಯಿಂದ ಸಮಂತಾಗೆ ದೊಡ್ಡ ಆಫರ್!

ನಟಿ ಸಮಂತಾ ಅವರು 'ಫ್ಯಾಮಿಲಿ ಮ್ಯಾನ್2' ವೆಬ್‌ ಸರಣಿಯಿಂದ ಬಾಲಿವುಡ್‌ನಲ್ಲಿ ಛಾಪು ಮೂಡಿಸಿದ್ದಾರೆ. ಸಮಂತಾ ಅಭಿನಯಕ್ಕೆ ಬಾಲಿವುಡ್‌ ಅದಾಗಲೇ ಮರುಳಾಗಿತ್ತು. ಇನ್ನು ಪುಷ್ಪ ಚಿತ್ರದ ಹಾಡಿನ ಮೂಲಕ ಸಮಂತಾ ಮತ್ತಷ್ಟು ಗಮನ ಸೆಳೆದಿದ್ದಾರೆ. ಸಮಂತಾ ಅವರಿಗೆ ಬಾಲಿವುಡ್‌ನ ಹೆಸರಾಂತ ನಿರ್ಮಾಣ ಸಂಸ್ಥೆಯಾದ 'ಯಶ್ ರಾಜ್‌ ಫಿಲ್ಸ್ಮ್' ವತಿಯಿಂದ ದೊಡ್ಡ ಆಫರ್‌ ಬಂದಿದೆ.

ಒಟ್ಟಿಗೆ 3 ಸಿನಿಮಾಗಳಿಗೆ ಅವಕಾಶ ಕಟ್ಟ YRF!

ಒಟ್ಟಿಗೆ 3 ಸಿನಿಮಾಗಳಿಗೆ ಅವಕಾಶ ಕಟ್ಟ YRF!

ಬಾಲಿವುಡ್‌ ಚಿತ್ರರಂಗದಲ್ಲಿ ಕೂಡ ಸಮಂತಾಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಸದ್ಯ ಬಾಲಿವುಡ್‌ನ ಹೆಸರಾಂತ ನಿರ್ಮಾಣ ಸಂಸ್ಥೆಯಾದ ಯಶ್‌ ರಾಜ್‌ ಫಿಲ್ಮ್ಸ್‌ ವತಿಯಿಂದ ಸಮಂತಾಗೆ ಸಿನಿಮಾ ಆಫರ್ ಬಂದಿದೆ. ಇದು ದೊಡ್ಡ ಆಫರ್‌ ಯಾಕೆಂದರೆ, ಈ ನಿರ್ಮಾಣ ಸಂಸ್ಥೆಯಿಂದ ಒಟ್ಟಿಗೆ ಮೂರು ಸಿನಿಮಾಗಳ ಅವಕಾಶ ಬಂದಿದೆಯಂತೆ. ಸಮಂತಾ ಕೂಡ ಒಟ್ಟಿಗೆ ಮೂರು ಚಿತ್ರಗಳನ್ನು ಮಾಡಲು ಗ್ರೀನ್‌ ಸಿಗ್ನಲ್‌ ಕೊಡಲಿದ್ದಾರಂತೆ. ಬಾಲಿವುಡ್‌ನಲ್ಲಿ ಅಭಿನಯಿಸಲು ಸಮಂತಾ ಹೆಚ್ಚು ಉತ್ಸುಕರಾಗಿದ್ದರಂತೆ. ಹಾಗಾಗಿ ಈ ಆಫರ್ ಮಿಸ್ ಮಾಡಿಕೊಳ್ಳುವುದಿಲ್ಲವಂತೆ ಸಮಂತಾ.

ತೆಲುಗು, ತಮಿಳು, ಹಿಂದಿಯಲ್ಲಿ ಸಮಂತಾಗೆ ಹೆಚ್ಚಿದ ಬೇಡಿಕೆ!

ತೆಲುಗು, ತಮಿಳು, ಹಿಂದಿಯಲ್ಲಿ ಸಮಂತಾಗೆ ಹೆಚ್ಚಿದ ಬೇಡಿಕೆ!

ಸಮಂತಾ ಸದ್ಯ ತಮಿಳಿನ 'ಕಾತು ವಾಕುಲ ರೆಂಡು ಕಾದಲ್' ತೆಲುಗಿನ 'ಯಶೋಧ', 'ಶಾಕುಂತಲಂ' ಚಿತ್ರಗಳ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಆದರೆ ಈಗ ಬಾಲಿವುಡ್‌ನಲ್ಲೂ ಕೂಡ ಸಮಂತಾ ಬ್ಯುಸಿ ಆಗಲಿದ್ದಾರೆ. ಮೊದಲೇ ಸಮಂತಾ ಕೈಯಲ್ಲಿ 3 ಹಿಂದಿ ಪ್ರಾಜೆಕ್ಟ್‌ಗಳು ಇದ್ದವು ಎನ್ನಲಾಗಿದೆ. ಅದರಲ್ಲಿ ಒಂದು ಫ್ಯಾಮಿಲಿ ಮ್ಯಾನ್‌ ನಿರ್ದೇಶಕರ ಮುಂದಿನ ವೆಬ್ ಸರಣಿ 'ಸಿಟಾಡೆಲ್'. ಹಾಗಾಗಿ ಈಗ ಸಮಂತಾ ಕೈಯಲ್ಲಿ ಇರುವ ಒಟ್ಟು ಹಿಂದಿ ಪ್ರಾಜೆಕ್ಟ್‌ಗಳ ಸಂಖ್ಯೆ 6 ಆಗುತ್ತದೆ. ಆದರೆ ಅಧಿಕೃತವಾಗಿ ಮೊದಲು ಯಾವ ಸೆಟ್ಟೇರುತ್ತದೆಯೋ ನೋಡಬೇಕು.

ಸಂಭಾವನೆ ವಿಚಾರದಲ್ಲೂ ಸಮಂತಾ ಸದ್ದು!

ಸಂಭಾವನೆ ವಿಚಾರದಲ್ಲೂ ಸಮಂತಾ ಸದ್ದು!

ನಟಿ ಸಮಂತಾ ವಿಚ್ಛೇದನದ ಬಳಿಕ ಮೂಲೆ ಸೇರುತ್ತಾರೆ ಎನ್ನುವವರ ಊಹೆಗಳನ್ನು ಸಮಂತಾ ಸುಳ್ಳು ಮಾಡಿದ್ದಾರೆ. ಸಮಂತಾ ಸಿನಿಮಾಗಳಲ್ಲಿ ಸಕ್ರಿಯವಾಗಿ ಇದ್ದಾರೆ. ಸೌತ್‌ ಸಿನಿಮಾಗಳಲ್ಲಿ ಮಾತ್ರವಲ್ಲದೇ, ಸಮಂತಾ ಬಾಲಿವುಡ್‌ನತ್ತ ಮುಖ ಮಾಡಿದ್ದಾರೆ. ಸಮಂತಾಳನ್ನು ಅರಸಿ ಬರುತ್ತಿವೆ ಬಾಲಿವುಡ್‌ ಸಿನಿಮಾಗಳು. ಇನ್ನು ಸಮಂತಾ ತಮ್ಮ ಸಂಭಾವನೆಯ ವಿಚಾರದಲ್ಲೂ ಕೂಡ ಸದ್ದು ಮಾಡುತ್ತಿದ್ದಾರೆ. ಪುಷ್ಪ ಚಿತ್ರದ ಒಂದು ಹಾಡಿನಲ್ಲಿ ಡ್ಯಾನ್ಸ್‌ ಮಾಡಲು ನಟಿ ಸಮಂತಾ 5 ಕೋಟಿ ಹಣ ಪಡೆದಿದ್ದಾರೆ ಎನ್ನುವ ವಿಚಾರ ಕೂಡ ಹೆಚ್ಚಾಗಿ ಸದ್ದು ಮಾಡುತ್ತಿದೆ.

More from Filmibeat

English summary
Samantha Got Big Offer From Bollywood Production House Yash Raj Films: Offering 3 Movies,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X