Don't Miss!
- News
ದೆಹಲಿ; ವಿಷಾನೀಲ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ತಾಯಿ, ಇಬ್ಬರು ಮಕ್ಕಳು
- Sports
ಮುಂಬೈ ವಿರುದ್ಧ ಸೋಲು; ಪಂತ್ ನಾಯಕತ್ವದ ಬಗ್ಗೆ ಕೋಚ್ ರಿಕಿ ಪಾಂಟಿಂಗ್ ಹೇಳಿದ್ದೇನು?
- Education
CUET 2022 Registration : ಪರೀಕ್ಷೆಗೆ ನೊಂದಾಯಿಸಿಕೊಳ್ಳಲು ಇಂದು ಕೊನೆಯ ದಿನ
- Automobiles
ಕೆಟಿಎಂ ಡ್ಯೂಕ್ 390 ಪ್ರತಿಸ್ಪರ್ಧಿ 2022ರ ಕಿಮ್ಕೊ ಕೆ ರೈಡರ್ 400 ಬೈಕ್ ಅನಾವರಣ
- Finance
ಟಾಪ್ 10 ಕಂಪನಿಗಳ ಪೈಕಿ 5 ಕಂಪನಿ ಮೌಲ್ಯ 1.78 ಲಕ್ಷ ಕೋಟಿ ಏರಿಕೆ
- Lifestyle
ಮೇ 22ರಿಂದ ರಿಂದ ಮೇ 28ರ ವಾರ ಭವಿಷ್ಯ: ಈ ರಾಶಿಯ ಉದ್ಯೋಗಿಗಳು ಯಾವುದೇ ಕೆಲಸದಲ್ಲೂ ನಿರ್ಲಕ್ಷ್ಯ ಮಾಡಬೇಡಿ
- Technology
ಟ್ರೂಕಾಲರ್ ಮಾದರಿಯ ಹೊಸ ಕಾಲರ್ ಐಡಿ ಫೀಚರ್ಸ್ ಪರಿಚಯಿಸಲು ಟ್ರಾಯ್ ಸಿದ್ಧತೆ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಸಲ್ಮಾನ್ ಖಾನ್ ಹೊಸ ಗರ್ಲ್ ಫ್ರೆಂಡ್ 'ಸಮಂತಾ'!
ಸದ್ಯಕ್ಕೆ ಬಾಲಿವುಡ್‌ನಲ್ಲಿ ಹರಿದಾಡುತ್ತಿರುವ ಬಿಸಿ ಬಿಸಿ ಸುದ್ದಿ ಇದು. ಬಾಲಿವುಡ್‌ನ ಮೋಸ್ಟ್ ಎಲಿಜಬಲ್ ಬ್ಯಾಚುಲರ್ ಅಂದರೆ ಅದು ಸಲ್ಮಾನ್ ಖಾನ್. ಹಾಗಾಗಿ ಸಲ್ಲು ಜೊತೆಗೆ ಯಾರ ಹೆಸರು ಕೇಳಿ ಬಂದರೂ ಕೂಡ, ಎಲ್ಲರ ಚಿತ್ತ ಸಲ್ಲು ಲವ್ ಕಹಾನಿಯತ್ತ ಸಾಗುತ್ತದೆ. ಈಗ ಸಲ್ಮಾನ್ ಖಾನ್ ಜೊತೆಗೆ ಸಮಂತಾ ಹೆಸರು ಕೇಳಿ ಬಂದಿದೆ. ಆದರೆ ಅದು ಸೌತ್ ನಟಿ ಸಮಂತಾ ರುತ್ ಪ್ರಭು ಅಲ್ಲ ಹಾಲಿವುಡ್‌ನ ಸಮಂತಾ ಲಾಕ್ವೂಡ್.
ಸಲ್ಮಾನ್ ಖಾನ್ ಮದುವೆ ಯಾವಾಗ, ಇನ್ನು ಯಾಕೆ ಸಲ್ಮಾನ್ ಖಾನ್‌ಗೆ ಮದುವೆ ಆಗಿಲ್ಲ. ಸಲ್ಮಾನ್ ಖಾನ್‌ಗೆ ಯಾವಾಗಲೂ ಬ್ರೇಕಪ್ ಆಗೋದೇಕೆ ಎನ್ನುವ ಯಕ್ಷ ಪ್ರಶ್ನೆಗಳಿಗೆ ಇನ್ನೂ ಉತ್ತರ ಸಿಕ್ಕಿಲ್ಲ. ಈ ದಶಕಗಳಿಂದ ಸಲ್ಲು ಮದುವೆ ಯಾವಾಗ ಎನ್ನುವ ಪ್ರಶ್ನೆ ಜೀವಂತವಾಗಿದೆ. ಪದೇ ಪದೇ ಈ ಪ್ರಶ್ನೆ ಎದುರಾಗುವುದರಿಂದ ಆ ಪ್ರಶ್ನೆ ಗಾಂಭೀರ್ಯತೆಯನ್ನೇ ಕಳೆದು ಕೊಂಡಿದೆ.
ಆದರೂ ಕೂಡ ಸಲ್ಮಾನ್ ಖಾನ್ ಮದುವೆ, ಗರ್ಲ್ ಫ್ರೆಂಡ್, ಪ್ರೀತಿ ವಿಚಾರ ಬಂದಾಗ ಎಲ್ಲರ ಗಮನ ಸೆಳೆಯುತ್ತದೆ. ಈಗಲಾದರು ಸಲ್ಮಾನ್ ಖಾನ್ ಮದುವೆ ಆಗುತ್ತರೇನೋ ಎನ್ನುವ ಊಹೆಗಳು ಹುಟ್ಟಿ ಕೊಳ್ಳುತ್ತವೆ. ಹಾಗಿದ್ದರೆ ಸಲ್ಮಾನ್ ಖಾನ್ ಈ ಹೊಸ ಗರ್ಲ್ ಫ್ರೆಂಡ್, ಸಲ್ಲು ಬಗ್ಗೆ ಏನಂತಾರೆ ಎನ್ನುವುದನ್ನು ಮುಂದೆ ಓದಿ...

ಸಲ್ಮಾನ್ ಖಾನ್ ಹುಟ್ಟು ಹಬ್ಬದಲ್ಲಿ ಭಾಗಿ ಆಗಿದ್ದ ಸಮಂತಾ ಲಾಕ್ವೂಡ್!
ಸಲ್ಮಾನ್ ಹೆಸರಿನ ಜೊತೆಗೆ ಹಾಲಿವುಡ್ ಬೆಡಗಿ ಸಮಂತಾ ಲಾಕ್ವೂಡ್ ಹೆಸರು ಕೇಳಿ ಬಂದು, ಆಕೆ ಸಲ್ಲೂ ಫಾರ್ಮ್ ಹೌಸ್‌ಗೆ ಭೇಟಿ ನೀಡಿದಾಗಿನಿಂದ. ಈ ಬಾರಿ ಸಲ್ಮಾನ್ ಖಾನ್ ತಮ್ಮ ಹುಟ್ಟುಹಬ್ಬವನ್ನು ಅವರ ಫಾರ್ಮ್ ಹೌಸ್‌ನಲ್ಲಿ ಆಚರಿಸಿಕೊಂಡಿದ್ದಾರೆ. ಪಾರ್ಟಿಯಲ್ಲಿ ಹಲವು ತಾರೆಯರು ಭಾಗಿ ಆಗಿದ್ದರು. ಆದರೆ ಸಮಂತಾ ಲಾಕ್ವೂಡ್ ಮಾತ್ರ ಸಲ್ಮಾನ್ ಖಾನ್ ಅವರನ್ನು ಬಿಟ್ಟು ಇರಲಿಲ್ಲವಂತೆ. ಹಾಗಾಗಿ ಇವರು ಸಲ್ಮಾನ್ ಖಾನ್ ಹೊಸ ಗರ್ಲ್ ಫ್ರೆಂಡ್ ಎನ್ನುವ ವಿಚಾರ ಹೊರ ಬಂದಿದೆ.

ಸಲ್ಲು ಬಗ್ಗೆ ಮಾತನಾಡಿದ ಸಮಂತಾ ಲಾಕ್ವೂಡ್!
ಇನ್ನು ಸಲ್ಲು ಹೊಸ ಗರ್ಲ್ ಫ್ರೆಂಡ್ ಈಕೆಯೆ ಎನ್ನುವ ವಿಚಾರದ ಬಗ್ಗೆ ಸಮಂತಾ ಲಾಕ್ವೂಡ್ ಬಾಲಿವುಡ್ ಮಾಧ್ಯಮಗಳ ಜೊತೆ ಮಾತಾನಡಿದ್ದಾರೆ. "ಸಲ್ಮಾನ್ ಖಾನ್ ಹುಟ್ಟು ಹಬ್ಬದ ಪಾರ್ಟಿಯಲ್ಲಿ, ಸಲ್ಮಾನ್ ಖಾನ್ ಬುಟ್ಟರೆ ಮತ್ಯಾರ ಪರಿಚಯವೂ ಇರಲಿಲ್ಲ. ಸಲ್ಮಾನ್ ಖಾನ್ ಅವರು ಒಳ್ಳೆಯ ವ್ಯಕ್ತಿ. ಜನರಿಗೆ ಈ ರೀತಿಯ ಆಲೋಚನೆಗಳು ಹೇಗೆ ಬರುತ್ತವೆಯೋ ಗೊತ್ತಿಲ್ಲ". ಎಂದಿದ್ದಾರೆ ಸಮಂತಾ ಲಾಕ್ವೂಡ್.

ಸಮಂತಾ ಲಾಕ್ವೂಡ್ ಜೊತೆಗೆ ಮುಂದುವರೆಯುತ್ತಾರಾ ಸಲ್ಮಾನ್ ಖಾನ್?
ಸಲ್ಮಾನ್ ಖಾನ್ ಜೊತೆಗಿನ ಲವ್ ಸ್ಟೋರಿ ಬಗ್ಗೆ ಮಾತನಾಡಿರುವ ಹಾಲಿವುಡ್ ಬೆಡಗಿ ಅಂತಹದ್ದೇನು ಇಲ್ಲ ಎಂದಿದ್ದಾರೆ. ಆದರೆ ಇದೆಲ್ಲಾ ಸುಳ್ಳು ಅಂತ ನೇರವಾಗಿ ಹೇಳಿಲ್ಲ. ಬದಲಿಗೆ ಈ ಯೋಚನೆಗಳು ಹೇಗೆ ಬರುತ್ತವೆ ಗೊತ್ತಿಲ್ಲ ಎಂದಿದ್ದಾರೆ. ಹಾಗಾಗಿ ಸಲ್ಮಾನ್ ಖಾನ್ ನಯಾ ಗರ್ಲ್ ಫ್ರೆಂಡ್ ಇವರೇ ಎನ್ನಲಾಗುತ್ತಿದೆ. ಅಷ್ಟೇ ಅಲ್ಲ ಈ ಬಾರಿ ಸಲ್ಲು ಪ್ರೀತಿಯಲ್ಲಿ ಬಿದ್ದಿದ್ದೇ ಆದರೆ, ಖಂಡಿತ ಮದುವೆ ಆಗುತ್ತಾರೆ ಎನ್ನುವ ಮಾತುಗಳು ಕೂಡ ಬಾಲಿವುಡ್‌ನಲ್ಲಿ ಕೇಳಿ ಬರುತ್ತಿವೆ. ಆದರೆ ಈ ಬಗ್ಗೆ ಸಲ್ಮಾನ್ ಖಾನ್ ಏನು ಹೇಳುತ್ತಾರೆ ಅಂತ ನೋಡ್ಬೇಕು.

ಹೃತಿಕ್ ರೋಷನ್ ಜೊತೆಗೆ ಫೋಟೊ ಹಂಚಿಕೊಂಡ ನಟಿ!
ಸಮಂತಾ ಲಾಕ್ವೂಡ್ ಇತ್ತೀಚೆಗೆ ಹೃತಿಕ್ ರೋಷನ್ ಜೊತೆಗಿನ ಫೋಟೊವನ್ನು ಹಂಚಿಕೊಂಡಿದ್ದಾರೆ. ಹೃತಿಕ್ ರೋಷನ್ ಅವರನ್ನು ಕೂಡ ಸಮಂತಾ ಭೇಟಿ ಆಗಿದ್ದಾರೆ. ಈ ವೇಳೆ ಆಕೆ ಸಲ್ಮಾನ್ ಖಾನ್ ಮತ್ತು ನನ್ನ ಬಗ್ಗೆ ಗಾಸಿಪ್ ಹಬ್ಬಿದೆ. ಆದರೆ ನನ್ನ ಮತ್ತು ಹೃತಿಕ್ ರೋಷನ್ ಬಗ್ಗೆ ಯಾರು ಮಾತಾಡಿಲ್ಲ ಎಂದಿದ್ದಾರೆ. ಈ ಮೂಲಕ ಅವರು ಸಮಂತಾ ಲಾಕ್ವೂಡ್ ತನಗೆ ಬಾಲಿವುಡ್ ಹೀರೋಗಳ ಜೊತೆಗೆ ನಂಟಿಲ್ಲ ಎಂದಿದ್ದಾರೆ. ಸಲ್ಮಾನ್ ಖಾನ್ ಜೊತೆಗಿನ ಲಿಂಕ್ ಬಗ್ಗೆಯ ಗಾಸಿಪ್ ತಳ್ಳಿ ಹಾಕಿದ್ದಾರೆ.