ಮುಂಬೈನಲ್ಲಿ ಮುಜುಗರಕ್ಕೆ ಒಳಗಾದ ಸಮಂತಾರನ್ನು ರಕ್ಷಿಸಿದ ವರುಣ್ ಧವನ್
ನಟಿ ಸಮಂತಾ ಸಧ್ಯ ಟಾಲಿವುಡ್‌ನಲ್ಲಿ ಬ್ಯುಸಿಯೆಸ್ಟ್ ನಟಿ ಯಾಗಿದ್ದಾರೆ. ಸಾಲು ಸಾಲು ಸಿನಿಮಾಗಳು ನಟಿ ಸಮಂತಾ ಕೈನಲ್ಲಿ ಇದೆ. ನಾಗಚೈತನ್ಯ ಮತ್ತು ಸಮಂತಾ ಡಿವೋರ್ಸ್ ನಂತರ ಸಮಂತಾ ಚಿತ್ರರಂಗದಿಂದ ದೂರ ಉಳಿಯಲಿದ್ದಾರೆ, ಚಿತ್ರರಂಗದಲ್ಲಿ ಅವಕಾಶ ವಂಚಿತರಾಗುತ್ತಾರೆ ಎಂಬೆಲ್ಲಾ ಮಾತುಗಳು ಕೇಳಿಬಂದಿದ್ದವು.
ಆದರೇ ಸಮಂತಾ ಜರ್ನಿಯೇ ಬೇರೆಯಾಗಿತ್ತು. ಹೇಳಬೇಕು ಅಂದರೆ ಸಮಂತಾ ಡಿವೋರ್ಸ್ ಬಳಿಕವೇ ಸಾಲು ಸಾಲು ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ನೀಡುತ್ತಿದ್ದಾರೆ. ತೆಲುಗಿನ ಪುಷ್ಪ ಚಿತ್ರದಲ್ಲಿ ಐಟಂ ಸಾಗ್‌ಗೆ ಸೊಂಟ ಬಳುಕಿಸಿದ ನಂತರ ಅವರಿಗೆ ಮತ್ತಷ್ಟು ಅವಕಾಶಗಳೂ ಬರಲಾರಂಭಿಸಿತ್ತು.
ಟಾಲಿವುಡ್‌ನಿಂದ ಬಾಲಿವುಡ್‌ವರೆಗೂ ಸಿನಿಮಾಗಳನ್ನು ಒಪ್ಪಿಕೊಂಡು ಮಿಂಚುತ್ತಿರುವ ಸಮಂತಾ, ಇತ್ತೀಚೆಗೆ ಮುಂಬೈ ತೆರಳಿದ್ದಾರೆ. ಅಲ್ಲಿ ಬಾಲಿವುಡ್‌ನ ಖ್ಯಾತ ನಟನೊಂದಿಗೆ ಕ್ಯಾಮರ ಕಣ್ಣಿಗೆ ಕಾಣಿಸಿಕೊಂಡಿದ್ದಾರೆ. ಅಷ್ಟಕ್ಕು ಆ ನಟ ಯಾರು ಅವರಿಬ್ಬರು ಒಟ್ಟಿಗೆ ಕಾಣಿಸಿಕೊಂಡಿದ್ದು ಯಾಕೆ. ಮುಂದೆ ಓದಿ.

ಮುಂಬೈನಲ್ಲಿ ಸಮಂತಾ ಎದುರಿಸಿದ್ದು ಏನು?
ನಟಿ ಸಮಂತಾ ಟಾಲಿವುಡ್‌ನಲ್ಲಿ ಎಷ್ಟು ಬ್ಯುಸಿಯಾಗಿದ್ದಾರೋ, ಬಾಲಿವುಡ್‌ನಲ್ಲೂ ಅಷ್ಟೇ ಬ್ಯುಸಿಯಾಗಿದ್ದಾರೆ. ಫ್ಯಾಮಿಲಿ ಮ್ಯಾನ್ ವೆಬ್ ಸೀರಿಸ್‌ನಲ್ಲಿ ರಾಜಿಯಾಗಿ ಕಾಣಿಸಿಕೊಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದ ಸಮಂತಾ ಇದೀಗ ಮತ್ತೊಂದು ವೆಬ್ ಸೀರಿಸ್‌ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಾಲಿವುಡ್ ನಟ ವರುಣ್ ಧವನ್ ಹಾಗೂ ಸಮಂತಾ ಇಬ್ಬರೂ ರಾಜ್ ಮತ್ತು ಡಿಕೆ ಅವರ ಮುಂದಿನ ವೆಬ್ ಸಿರೀಸ್ 'ಸಿಟಾಡೆಲ್' ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ಸ್ಯಾಮ್ ಮತ್ತು ವರುಣ್ ಒಟ್ಟಿಗೆ ಅಂಧೇರಿಯಲ್ಲಿ ಕ್ಯಾಮೆರಾ ಕಣ್ಣಿಗೆ ಬಿದ್ದಿದ್ದಾರೆ. ನಟ ವರುಣ್ ಧವನ್ ಜೊತೆ ಸಮಂತಾ ಕಾಣಿಸಿಕೊಂಡಿದ್ದಾರೆ. ಈ ಸಂದರ್ಭ ಅಲ್ಲಿ ನೆರೆದಿದ್ದ ಛಾಯಗ್ರಾಹಕರ ಕಣ್ಣಿಗೆ ಬೀಳಲು ಸಮಂತಾ ಹಿಂದೆ ಮುಂದೆ ನೋಡಿದ್ದಾರೆ. ಆದರೆ ಛಾಯಾಗ್ರಾಹಕರು ಅವರಿಬ್ಬರನ್ನು ಒಂದೇ ಫ್ರೇಮ್‌ನಲ್ಲಿ ಫೋಟೊ ಸೆರೆ ಹಿಡಿಯುವಲ್ಲಿ ಕಾತುರರಾಗಿದ್ದರು.

ವರುಣ್ ಧವನ್ ಮಾಡಿದ್ದೇನು ಗೊತ್ತಾ?
ಸಮಂತಾಗೆ ಬಾಲಿವುಡ್ ಫೊಟೋಗ್ರಫರ್ಸ್ ಗುಂಪುಗೂಡಿ ಫೊಟೋ ಕ್ಲಿಕ್ಕಿಸಿದ್ದು ಮುಜುಗರ ಉಂಟಾಗಿದೆ. ಆ ಸಮಯದಲ್ಲಿ ನಟ ವರುಣ್ ಧವನ್ ಸಮಂತಾ ಅವರನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗಿ ಕಾರು ಹತ್ತಿಸಿ ಬಂದಿದ್ದಾರೆ. ಸಮಂತಾ ಹೆಗಲ ಮೇಲೆ ಕೈ ಹಾಕಿ ಅವರನ್ನು ಸುರಕ್ಷಿತವಾಗಿ ಕಾರು ಹತ್ತಿಸಿ ಬಂದಿದ್ದಾರೆ. ಬಳಿಕ ಬಂದ ವರುಣ್ ಧವನ್ ಯಾರಿಗೂ ಮುಜುಗರ ಮತ್ತು ಹೆದರಿಕೆ ಆಗುವಂತೆ ಮಾಡಬೇಡಿ ಎಂದು ಛಾಯಗ್ರಾಹಕರನ್ನು ಕೇಳಿಕೊಂಡಿದ್ದಾರೆ.

ವರುಣ್ ನಡವಳಿಕೆಗೆ ಮೆಚ್ಚುಗೆಯ ಮಹಾಪೂರ!
ಸಮಂತಾ ಅವರನ್ನು ವರುಣ್ ಸುರಕ್ಷಿತವಾಗಿ ಕಾರು ಹತ್ತಿಸಿ ಬಂದ ವರುಣ್ ನಡವಳಿಕೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವರುಣ್ ಧವನ್ ಒಬ್ಬ ಹೆಣ್ಣುಮಗಳು ಮುಜುಗರಕ್ಕೆ ಒಳಗಾದಾಗ ಹೇಗೆ ಸುರಕ್ಷಿತವಾಗಿ ಕಾರು ಹತ್ತಿಸಿ ಬಂದಿದ್ದಾರೆ, ಇಂತಹ ಗುಣ ಎಲ್ಲಾರಿಗೂ ಇರಬೇಕು ಎಂದು ಅಭಿಮಾನಿಗಳು ಕಮೆಂಟ್ ಮಾಡುತ್ತಿದ್ದಾರೆ. ಸಮಂತಾ ಅವರನ್ನು ವರುಣ್ ಧವನ್ ಕಾರು ಹತ್ತಿಸಿ ಬಂದ ವಿಡಿಯೋ ಎಲ್ಲೆಡೆ ವೈರಲ್ ಕೂಡ ಆಗುತ್ತಿದೆ.

ಸಿಟಾಡೆಲ್ ಬಗ್ಗೆ ವರುಣ್ ಧವನ್ ಹೇಳಿದ್ದು ಏನು?
ಹೊಸ ವೆಬ್ ಸಿರೀಸ್ 'ಸಿಟಾಡೆಲ್' ಬಗ್ಗೆ ಈ ಹಿಂದೆ ಮಾತನಾಡಿದ ವರುಣ್, ಆಕ್ಷನ್-ಪ್ಯಾಕ್ಡ್ ಸೀರಿಸ್‌ಗಾಗಿ ಅವೆಂಜರ್ಸ್ ಖ್ಯಾತಿಯ ರುಸ್ಸೊ ಬ್ರದರ್ಸ್ ಅವರೊಂದಿಗೆ ಕೆಲಸ ಮಾಡಲಿದ್ದೇವೆ ಎಂದು ಹೇಳಿದ್ದರು. ನಟಿ ಸಮಂತಾ ಈ ಹಿಂದೆ 'ದಿ ಫ್ಯಾಮಿಲಿ ಮ್ಯಾನ್ 2' ಸೀರಿಸ್‌ಗಾಗಿ ರಾಜ್ ಮತ್ತು ಡಿಕೆ ಅವರೊಂದಿಗೆ ಈ ಹಿಂದೆಯೂ ಕೆಲಸ ಮಾಡಿದ್ದಾರೆ. ಹೀಗಾಗಿ ಈ ತಂಡದೊಂದಿಗೆ ಸಮಂತಾ ಅವರ ಎರಡನೇ ವೆಬ್ ಸೀರಿಸ್ ಇದಾಗಿದ್ದು, ಅಭಿಮಾನಿಗಳನ್ನು 'ಸಿಟಾಡೆಲ್' ವೆಬ್ ಸೀರಿಸ್ ಅನ್ನು ಅಣ್ತುಂಬಿಕೊಳ್ಳಲು ಕಾತುರರಾಗಿದ್ದಾರೆ.


Click it and Unblock the Notifications











